ಮಲಯಾಳಂ ನಟ ಬಾಲಾ 42ನೇ ವಯಸ್ಸಿನಲ್ಲಿ 24 ವರ್ಷದ ಕೋಕಿಲಾ ಎಂಬುವರನ್ನು ನಾಲ್ಕನೇ ಬಾರಿಗೆ ವಿವಾಹವಾಗಿದ್ದಾರೆ. ಈ ಹಿಂದೆ ಮೂರು ಮದುವೆಯಾಗಿದ್ದ ಬಾಲಾ, ಕೊನೆಗೂ ತಮ್ಮ ಸಂಬಂಧಿ ಕೋಕಿಲಾಳಲ್ಲಿ ಪ್ರೀತಿ ಕಂಡುಕೊಂಡಿದ್ದಾರೆ.
ಬೆಂಗಳೂರು (ಮಾ.18): ಒಂದಲ್ಲ, ಎರಡಲ್ಲ.. ಆ ಸಿನಿಮಾ ನಟ ಹಾಗೂ ನಿರ್ದೇಶಕ ಆಗಿದ್ದು ಬರೋಬ್ಬರಿ ಮೂರು ಮದುವೆ. ಆದರೆ, ಈ ಮೂರ ಮದುವೆಯಲ್ಲೂ ಆತನಿಗೆ ಸಂತಪ್ತಿ ಸಿಗದ ಕಾರಣಕ್ಕೆ ತನ್ನ 42ನೇ ವಯಸ್ಸಿನಲ್ಲಿ 4ನೇ ಬಾರಿಗೆ ಹಸೆಮಣೆ ಏರಿದ್ದಾರೆ. ಈ ಬಾರಿ ಅವರು ಮದುವೆಯಾಗಿರುವ ಹುಡುಗಿ ಅವರಿಗಿಂತ 18 ವರ್ಷ ಚಿಕ್ಕವರು. 24 ವರ್ಷದ ತಮ್ಮ ಸೊಸೆ ಕೋಕಿಲಾಳನ್ನು ಮಲಯಾಳಂನ ನಟ ಹಾಗೂ ನಿರ್ದೇಶಕ ಬಾಲಾ ಮದುವೆಯಾಗಿದ್ದಾರೆ. ಹೊಸ ಹೊಂಡತಿ ಕೋಕಿಲಾ ಚೆನ್ನೈ ಮೂಲದವರಗಿದ್ದ, ಬಾಲಾ ಅವರ ಸಂಬಂಧಿ. ಬುಧವಾರ ಎರ್ನಾಕುಲಂನ ಕಾಲೂರ್ ಪಾವಾಕುಲಂ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಕೇವಲ ಆಪ್ತ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರವೇ ಭಾಗಿಯಾಗಿದ್ದರು.
ನಟ ಬಾಲಾ ಅವರು ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದು ಸ್ಯಾಂಡಲ್‌ವುಡ್ ಚಿತ್ರದ ಮೂಲಕ. ಅದಕ್ಕೂ ಮುನ್ನ ನಟರಾಗಿದ್ದ ಬಾಲಾ, 2012ರಲ್ಲಿ ದಿ ಹಿಟ್‌ಲೀಸ್ಟ್ ಕನ್ನಡ ಸಿನಿಮಾದ ಮೂಲಕ ನಿರ್ದೇಶನಕ್ಕೆ ಇಳಿದಿದ್ದರು. ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾದಲ್ಲಿ ಡಿಸಿಪಿ ವಿಕ್ರಂ ರಾಥೋಡ್ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾದ ನಾಯಕ ನಟರಾಗಿದ್ದ ಧ್ರವ ಶರ್ಮ ಈಗಿಲ್ಲ. 2017ರ ಆಗಸ್ಟ್ 1 ರಂದು ಹದಯಾಘಾತದಿಂದ ಇವರು ಸಾವು ಕಂಡಿದ್ದರು.
'ನಾನು ರಾಜನಂತೆ ಬದುಕುತ್ತಿದ್ದೇನೆ ಮತ್ತು ಅವಳು ರಾಣಿಯಂತೆ ಬದುಕುತ್ತಿದ್ದಾಳೆ. ಎಲ್ಲವೂ ಚೆನ್ನಾಗಿದೆ. ಯಾರಿಗಾದರೂ ನನ್ನನ್ನು ನೋಡಿ ಹೊಟ್ಟೆಕಿಚ್ಚು ಬಂದರೆ ಅದು ಅವರ ತಪ್ಪು. ಅಸೂಯೆಪಡುವ ಜನರು ಎಲ್ಲದರಲ್ಲೂ ಮತ್ತು ಪ್ರತಿಯೊಬ್ಬರಲ್ಲೂ ನ್ಯೂನತೆಗಳನ್ನು ನೋಡುತ್ತಾರೆ. ಕೋಕಿಲಾ 24 ವರ್ಷ ವಯಸ್ಸಿನವಳು ಮತ್ತು ಕೆಲವು ಸಮಯದಿಂದ ನನ್ನೊಂದಿಗೆ ಇದ್ದಳು. ಆದರೆ ಆಕೆಯ ನಿಜವಾದ ಪ್ರೀತಿ ನನಗೆ ತಡವಾಗಿ ಅರಿವಾಯಿತು. ಆಗ ಕೋಕಿಲಾ ತಮ್ಮ ಭಾವನೆಗಳನ್ನು ಡೈರಿಯಲ್ಲಿ ಬರೆದಿದ್ದಾರೆ.. ಆ ಡೈರಿ ಓದಿದ ನಂತರ ನಾನು ಅವಳನ್ನು ಮದುವೆಯಾಗಲು ನಿರ್ಧರಿಸಿದೆ" ಎಂದಿದ್ದಾರೆ' ಎಂದು ಬಾಲಾ ಹೇಳಿದ್ದಾರೆ.
ಬಾಲಾ ಮೊದಲು ಚಂದನಾ ಸದಾಶಿವ ಎನ್ನುವ ಹುಡುಗಿಯ ವಿವಾಹವಾಗಿದ್ದರು. 2008ರಲ್ಲಿ ನಡೆದ ವಿವಾಹ 2009ರಲ್ಲಿ ಮುರಿದು ಬಿದ್ದಿತ್ತು. ಆ ಬಳಿಕ 2010ರಲ್ಲಿ ಗಾಯಕಿ ಅಮೃತಾ ಸುರೇಶ್‌ರನ್ನು ವಿವಾಹವಾಗಿ 2019ರಲ್ಲಿ ವಿಚ್ಛೇದನ ಪಡೆದರು. ಈ ಮದುವೆಯಿಂದ ಅವರು ಒಂದು ಮಗಳನ್ನೂ ಹೊಂದಿದ್ದಾರೆ. 2019ರಲ್ಲಿ ವಿಚ್ಛೇದನ ಪಡೆಯುವುದಕ್ಕಿಂತ ಮೊದಲು 4 ವರ್ಷಗಳ ಕಾಲ ಇವರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು.
ಶಾರುಖ್ರನ್ನು ಹಿಂದಿಕ್ಕಿ 82ನೇ ವಯಸ್ಸಲ್ಲಿ ಟಾಪ್-1 ಸ್ಥಾನಕ್ಕೇರಿದ ಅಮಿತಾಭ್:
ಆ ಬಳಿಕ 2021ರಲ್ಲಿ ಡಾ. ಎಲಿಜಬೆತ್ ಅವರನ್ನು ತಮ್ಮ ಸಂಗಾತಿಯನ್ನಾಗಿ ಮಾಡಿಕೊಂಡರು. ಎಲಿಜಬೆತ್‌ನಿಂದ ಬೇರ್ಪಟ್ಟ ನಂತರ, ಸೋದರ ಸೊಸೆ ಕೋಕಿಲಾ ಇವರ ಜೀವನದಲ್ಲಿ ಬಂದಿದ್ದಾರೆ. 2024ರ ಅಕ್ಟೋಬರ್ 23 ರಂದು ಇವರ ವಿವಾಹ ನಡೆದಿದೆ.. ಇದು ಅವರ ನಾಲ್ಕನೇ ಮದುವೆ ಎಂದು ಹಲವಾರು ವರದಿಗಳು ಹೇಳುತ್ತಿವೆ ಆದರೆ ನಟ ಇವೆಲ್ಲವೂ ವದಂತಿಗಳೆಂದು ಅಲ್ಲಗಳೆದಿದ್ದಾರೆ.
ಬೆಚ್ಚಿಬಿದ್ದ ಕಿರುತೆರೆ; ಆ ಐವರ ಕೆಲಸಕ್ಕೆ ಯಾಮಾರಿದ ಸೀರಿಯಲ್ ನಟ