ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ಅವರು ತಮ್ಮ ಕೈಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಕುರಿತು ವಿವರಿಸುತ್ತಲೇ ತಮ್ಮ ಮಕ್ಕಳು, ಮೊಮ್ಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ನಟಿ ನಮ್ರತಾ ಗೌಡ ಹೆಸರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಅದರಲ್ಲಿಯೂ ಬಿಗ್ಬಾಸ್ ವೀಕ್ಷಕರಿಗಂತೂ ತುಂಬಾ ಹತ್ತಿರವಾಗಿದ್ದಾರೆ ನಟಿ. ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಸೀರಿಯಲ್ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್ ಸಿಕ್ಕಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 10. ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ನಮ್ರತಾ ಗೌಡ ಅವರು ಹಲವಾರು ಸೆಲೆಬ್ರಿಟಿಗಳಂತೆಯೇ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಕೂಡ. ಇದೇ ಕಾರಣಕ್ಕೆ ನಟಿ ಮೂರು ವರ್ಷಗಳ ಹಿಂದೆ, ಅಂದರೆ 2022ರಲ್ಲಿ ಅಪ್ಪು ಅವರ ಜನ್ಮದಿನದ ಸಂದರ್ಭದಲ್ಲಿ ನಟನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ತಮ್ಮ ಕೈಮೇಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದರು.
ಇದೀಗ ಆ ಟ್ಯಾಟೂ ಕುರಿತು ಕೇಳಿದ ಪ್ರಶ್ನೆಗೆ ಪುನಃ ಉತ್ತರಿಸಿದ್ದಾರೆ ನಮ್ರತಾ. ನಿನ್ನೆ ಅಪ್ಪು ಅವರ 50ನೇ ಜನ್ಮದಿನದಂದು ಕಾರ್ಯಕ್ರಮವೊಂದರಲ್ಲಿ ಆಗಮಿಸಿದ್ದ ನಮ್ರತಾ ಗೌಡ ಅವರು ಟ್ಯಾಟೂ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಇದು ಪುನೀತ್ ರಾಜ್‌ಕುಮಾರ್ ಅವರ ಟ್ಯಾಟೂ. ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಇದನ್ನು ಪಬ್ಲಿಸಿಟಿಗಾಗಿ ಹಾಕಿಸಿಕೊಂಡಿದ್ದಲ್ಲ. ನಾನು ಅಪ್ಪು ಅವರು ತುಂಬಾ ಫ್ಯಾನ್. ಅವರ ಹಾದಿಯಲ್ಲಿಯೇ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಅವರ ನೆನಪಿಗಾಗಿ ಇದನ್ನು ಹಾಕಿಸಿಕೊಂಡಿದ್ದೇನೆ. ನನ್ನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರಿಗೂ ಪುನೀತ್ ಅವರ ಬಗ್ಗೆ ತಿಳಿಯಬೇಕು, ಅವರು ನಡೆದಿರುವ ಹಾದಿಯಲ್ಲಿಯೇ ಎಲ್ಲರೂ ನಡೆಯಬೇಕು ಎನ್ನುವುದು ನನ್ನ ಆಸೆ. ಅದಕ್ಕಾಗಿಯೇ ಈ ಟ್ಯಾಟೂ ಎಂದಿದ್ದಾರೆ. ಇದನ್ನು ಸಿನೆ ಸ್ಟೋರ್ ಎನ್ನುವ ಯೂಟ್ಯೂಬ್ ಚಾನೆಲ್ ಶೇರ್ ಮಾಡಿಕೊಂಡಿದೆ.
ಧರೆಗಿಳಿದ ಮಾಡರ್ನ್ ಶಿವ-ಪಾರ್ವತಿಯರು: ನಿಮಗ್ಯಾವುದೂ ಕನ್ನಡ ಹಾಡು ಸಿಗಲಿಲ್ವಾ ಎಂದು ಕೇಳಿದ ನೆಟ್ಟಿಗರು
ಪುನೀತ್ ರಾಜ್‌ಕುಮಾರ್ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ಯಾವತ್ತೂ ಹೇಳಿಕೊಳ್ಳುತ್ತಿರಲಿಲ್ಲ. ಆದ್ದರಿಂದ ನಾನು ಕೂಡ ಹಲವು ಸಮಾಜ ಸೇವೆ ಮಾಡುತ್ತಿದ್ದರೂ ಅದರ ವಿಡಿಯೋ ಶೇರ್ ಮಾಡುತ್ತಿಲ್ಲ. ಇದಾಗಲೇ ಕೆಲವರು ಕಮೆಂಟ್ ಮಾಡಿದ್ದರು, ಕೆಲವರು ಸಜೆಷನ್ ಕೊಟ್ಟಿದ್ದರು. ಆದ್ದರಿಂದ ಮಾಡಿರುವ ಸೇವೆ ಬಗ್ಗೆ ಹೇಳುವುದು ಯಾಕೆ ಎಂದು ವಿಡಿಯೋ ಶೇರ್ ಮಾಡುತ್ತಿಲ್ಲ ಎಂದೂ ಇದೇ ವೇಳೆ ನಮ್ರತಾ ಗೌಡ ಹೇಳಿದ್ದಾರೆ.
ಇನ್ನು ನಟಿಯ ಬದುಕಿನ ಪಯಣದ ಕುರಿತು ಹೇಳುವುದಾದರೆ, 1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪದಾರ್ಪಣೆ ಮಾಡಿದ ನಮ್ರತಾ ಅದಾದ ಬಳಿಕ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು. ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಗಮನ ಸೆಳೆದರು. ಈಗ ಎಲ್ಲಕ್ಕಿಂತಲೂ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ಬಿಗ್ಬಾಸ್ 10. ಇಲ್ಲಿ ಇವರು ಮತ್ತು ಸ್ನೇಹಿತ್ ಸ್ನೇಹ ಸಾಕಷ್ಟು ಸದ್ದು ಕೂಡ ಮಾಡಿತ್ತು.
ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್ಬಾಸ್ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!