ಒಳ್ಳೇ ಕಾಲ ಬಂದೈತೆ ಕಣ್ಲಾ! ಎನ್ನುತ್ತಲೇ ಕಾರಣ ಕೊಟ್ಟ 'ಪುಟ್ಟಗೌರಿ'.. ವೆರಿ ಟ್ರೂ ಎಂದ ಅಮೃತಧಾರೆ ಮಹಿಮಾ!

By Suchethana DFirst Published Jun 10, 2024, 1:58 PM IST
Highlights

ಒಳ್ಳೇ ಕಾಲ ಬಂದೈತೆ ಕಣ್ಲಾ! ಎಂಬ ಶೀರ್ಷಿಕೆ ಜೊತೆ ಪುಟ್ಟಗೌರಿ ಮದ್ವೆ ಖ್ಯಾತಿಯ ರಂಜಿನಿ ರಾಘವನ್​ ಮಾತನಾಡಿದ್ದು, ಇದಕ್ಕೆ ನಟಿ ಸಾರಾ ಅಣ್ಣಯ್ಯ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ.
 

  'ಪುಟ್ಟಗೌರಿ ಮದುವೆ' ಸೀರಿಯಲ್​ ಮೂಲಕ ಮನೆ ಮಾತಾಗಿರುವ ನಟಿ ರಂಜಿನಿ ರಾಘವನ್​. ನಟಿ ಮಾತ್ರವಲ್ಲದೇ ಬರಹಗಾರ್ತಿ, ನಿರ್ದೇಶಕಿಯಾಗಿಯೂ ಇವರದ್ದು ಎತ್ತಿದ ಕೈ.  ಬಳಿಕ ಪೌರ್ಣಮಿ ಎಂಬ ಮಲಯಾಳಂ ಸೀರಿಯಲ್‌ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು.  2019ರಲ್ಲಿ ಪ್ರಸಾರಗೊಂಡ 'ಇಷ್ಟದೇವತೆ' ಎಂಬ ಧಾರಾವಾಹಿಯಲ್ಲಿ ನಟಿಸಿರುವುದು ಮಾತ್ರವಲ್ಲದೇ  ತಾವೇ ಕಥೆ ಬರೆದು ಕ್ರಿಯೇಟಿವ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. ಆ ಬಳಿಕ ಎಲ್ಲರ ಮನಸ್ಸನ್ನು ಗೆದ್ದದ್ದು ಇವರು ನಟಿಸಿದ ಕನ್ನಡತಿ ಎಂಬ ಸೀರಿಯಲ್‌. ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಿದ ಈ ಸೀರಿಯಲ್​ ಬಹಳ ಹಿಟ್​ ಆಗಿ ರಂಜಿನಿ ಮನೆಮಾತಾದರು. 

 ಕಿರುತೆರೆಯಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿರುವ ನಡುವೆಯೇ ರಂಜಿನಿ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟರು. 2017ರಲ್ಲಿ 'ರಾಜಹಂಸ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.  ನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು  ಉತ್ತಮ ಬರಹಗಾರ್ತಿಯೂ ಹೌದು.   ಕಥೆ ಡಬ್ಬಿ ಎಂಬ ಪುಸ್ತಕ ಬರೆದು ಸಾಹಿತ್ಯಾಸಕ್ತರ ಗಮನ ಸೆಳೆದರು 2022ರಲ್ಲಿ ಸ್ವೈಪ್ ಅಪ್ ಎಂಬ ಇನ್ನೊಂದು ಪುಸ್ತಕವನ್ನು ಬಿಡುಗಡೆ ಕೂಡ ಮಾಡಿದ್ದಾರೆ. ಸದ್ಯ ಕಿರುತೆರೆ, ಹಿರಿತೆರೆ ಜೊತೆಗೆ ಸಾಹಿತ್ಯದಲ್ಲಿಯೂ ಆ್ಯಕ್ಟೀವ್​ ಆಗಿರುವ ರಜನಿ ಅವರು, ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ  ಒಳ್ಳೇ ಕಾಲ ಬಂದೈತೆ ಕಣ್ಲಾ! ಎನ್ನುವ ಶೀರ್ಷಿಕೆಯಡಿ ಪುಟ್ಟ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅಮೃತಧಾರೆ ಸಿರಿಯಲ್​ನಲ್ಲಿ ನಟಿಸುತ್ತಿರೋ ಸಾರಾ ಅಣ್ಣಯ್ಯ ಸೇರಿದಂತೆ ಹಲವಾರು ಮಂದಿ ಕಮೆಂಟ್​ ಮಾಡಿದ್ದು, 100% ನಿಜವಾದ ಮಾತು ಎನ್ನುತ್ತಿದ್ದಾರೆ. 

Latest Videos

ನೇರಪ್ರಸಾರದಲ್ಲಿ ನಟಿ ತಾರಾ ಮಾತು: ನಿವೇದಿತಾ-ಚಂದನ್​ ಡಿವೋರ್ಸ್​ ವಿಷಯ ಪ್ರಸ್ತಾಪ?

ಇನ್ನು ರಜನಿ ಅವರು ಬರೆದಿರುವುದು ಅವರ ಮಾತಿನಲ್ಲಿಯೇ ಹೇಳುವುದಾದರೆ: ಕಾಲ ಕೆಟ್ಟು ಹೋಯ್ತು. ಜನ ಕೆಟ್ಟು ಹೋಗಿದ್ದಾರೆ ಅನ್ನೋ ಮಾತುಗಳು ಫೇಮಸ್​ ಆಗಿರೋ ಟೈಮ್​ನಲ್ಲಿ ನನಗನ್ನಿಸ್ತಿರೋದು ಒಳ್ಳೇ ಕಾಲ ಬಂದಿದೆ, ಮನುಷ್ಯ ಇದುವರೆಗೂ ಬದುಕಿದ್ದಕ್ಕಿಂತ ಅತ್ಯಂತ ಕನ್​ಫರ್ಟಬಲ್​  ಕಾಲದಲ್ಲಿ ನಾವು ಬದುಕಿದ್ದೇವೆ ಅಂತ ನಂಬಲು ಶುರು ಮಾಡಿದ್ದೇನೆ. ಏಕೆಂದರೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಗಮನಿಸಿದಾಗ ನಂಬರ್​ಗಳನ್ನು ಅಳೆಯಬಹುದು ವಿನಾ ಭಾವನೆಯನ್ನಲ್ಲ. ಗ್ಲಾಸ್​ನಲ್ಲಿ ನೀರು ಎಷ್ಟು ಖಾಲಿ ಇದೆ ಅಂತ ನೋಡೋ ಬದಲು ಎಷ್ಟು ತುಂಬಿದೆ ಅಂತ ನೋಡಿದರೆ ಆ ಗ್ರೋಥ್​ ಅರ್ಥವಾಗುತ್ತದೆ ಎಂದಿದ್ದಾರೆ ನಟಿ. ರಾಜ, ಜಮೀನ್ದಾರ ಹೀಗೆ ಉತ್ತಮ ಸ್ಥಾನದಲ್ಲಿದ್ದು ಸವಲತ್ತುಗಳನ್ನು ಪಡೆದುಕೊಂಡವರನ್ನು ಹೊರತುಪಡಿಸಿದರೆ ಎಂದೆಂದಿಗೂ ಮೆಜಾರಿಟಿ ಇರೋ ಸಾಮಾನ್ಯ ಜನರ ಜೀವನದಲ್ಲಿ ನಗು, ವಿಶ್ವಾಸ, ಜೀವನ ಪ್ರೀತಿ, ಆರೋಗ್ಯ, ಶಿಕ್ಷಣ ಇದಿಷ್ಟೂ ಇವತ್ತಿನ ಮಟ್ಟಕ್ಕೆ ಹೋಲಿಸಿದರೆ ಹಿಂದೆ ಯಾವ ಕಾಲದಲ್ಲೂ ಸಿದ್ಧಿಸಿರಲಿಕ್ಕಿಲ್ಲ. ಯಾರೋ ಒಬ್ಬ ರಾಜನಿಗೆ ಯುದ್ಧ ಮಾಡಿ ಹುಳುಗಳಂತೆ ಸತ್ತವರೆರಷ್ಟೋ, ನಮ್ಮ ಹುಟ್ಟೇ ಒಂದು ಶಾಪ ಎಂದು ತಿಳಿದು ಮೌಢ್ಯದಲ್ಲಿ ಪ್ರಾಣ ಕಳೆದುಕೊಂಡವರೆಷ್ಟೋ, ಹೆಂಗಸರ ಪಾಡಂತೂ ವಿವರಿಸಬೇಕಿಲ್ಲ ಎಂದು ನಟಿ ಹೇಳಿದ್ದಾರೆ.
 
ಅನ್ನ, ಅಕ್ಷರ, ಆರೋಗ್ಯ ಬಹುಪಾಲು ಜನರಿಗೆ ಇಂದು ಸಿಗುವಂತಾಗಿದೆ. ಜಸ್ಟ್ ಐವತ್ತು ವರ್ಷಗಳ ಹಿಂದೆ ತಿರುಗಿ ನೋಡಿದರೆ ಮನರಂಜನೆ ಅನ್ನೋದು ಶ್ರೀಮಂತರ ಸ್ವತ್ತಾಗಿತ್ತು.  ಆ ಲಕ್ಷುರಿ ಇಂದು ಎಲ್ಲರಿಗೂ ಸಿಕ್ಕಿರುವುದು ಸಮಾಜನೆಯ ಸಂಕೇತ. ರೀಲ್ಸ್​ನಲ್ಲಿ ಕುಣಿಯುವವರನ್ನು ಕಂಡಾಗ ಜನರಿಗೆ ಲೈಕ್ಸ್​, ಫಾಲೋವರ್ಸ್​ ಹುಚ್ಚು ಹಿಡಿದಿದೆ ಅನ್ನುವವರ ಮಧ್ಯೆ ನನ್ನ ಅನ್​ಪಾಪ್ಯುಲರ್​ ಒಪಿನಿಯರ್​ ಏನೆಂದರೆ, ಜಗತ್ತಿನ ಮುಂದೆ ಹಾಡಿ, ಕುಣಿಯವ ಧೈರ್ಯ, ವಿಶ್ವಾಸ  ಗುಡಿಸಿಲಿನಲ್ಲಿ ಒಲೆ ಮೇಲೆ ಇಟ್ಟ ಅನ್ನ ಬೇಯುವ ಮಧ್ಯೆ ಸಮಯ ಮಾಡಿಕೊಳ್ಳೋ ಗರತಿಯರಿಗೂ ಬಂದಿದೆ. ರೈತನೊಬ್ಬ ಹೊಲದಲ್ಲಿ ತನ್ನ ಹೆಂಡತಿ ಜೊತೆ ನಗುಮುಖದಿಂದ ಹಾಡುತ್ತಾನೆ. ಮಕ್ಕಳು, ಯುವಕರು ಸ್ನೇಹಿತರೊಂದಿಗೆ ಸೇರಿ ತಮಾಷೆ ಮಾಡ್ತಾ ಜಾಲಿಯಾಗಿದ್ದಾರೆ. ರಾಮಾಯಣದಲ್ಲಿ ರಾವಣನ ಆಳ್ವಿಕೆಯಲ್ಲಿದ್ದ ಲಂಕೆಯನ್ನು ಸುಭೀಕ್ಷವಾದ ರಾಜ್ಯ ಅಂತ ಹೇಳುತ್ತಾರೆ. ಲಂಕೆಯನ್ನು ವರ್ಣಿಸುವಾಗ ಅಲ್ಲಿಯ ಜನ ಸಂಗೀತ, ನೃತ್ಯ, ಹಾಸ್ಯ, ನಟನೆಯಲ್ಲಿ ತೊಡಗಿಕೊಂಡಿರೋ ಚಿತ್ರಣ ಕಂಡುಬರುತ್ತದೆ. ನಮ್ಮ ಸಮಾಜವೂ ಹಾಗೆ ಇದೆಯಲ್ಲವೆ? ಇದು ಸುಭೀಕ್ಷದ ಕಾಲವೇ ಅಲ್ಲವೆ? ವೃತ್ತಿಪರತೆ, ಕ್ವಾಲಿಟಿ ಬಯಸುವವರು ಹೇಗಿದ್ದರೂ ಆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು  ಭಾವಿಸುತ್ತಾ ಇವತ್ತಿನ ಸ್ಥಿತಿಗೆ ನಾನು ಥ್ಯಾಂಕ್​ಫುಲ್​ ಆಗಿದ್ದೇನೆ ಎಂದು ಹೇಳಿದ್ದಾರೆ ನಟಿ ರಜನಿ.  

ಘಟಾನುಘಟಿ ತಾರೆಯರಿಗೆ ಡ್ಯಾನ್ಸ್​ ಹೇಳಿಕೊಟ್ಟ ಶ್ರೀರಸ್ತು ಶುಭಮಸ್ತು ದೀಪಿಕಾಗೆ ಈ ಸ್ಥಿತಿ ಬಂದೋಯ್ತಾ?

click me!