ಲೈಫ್-ವೈಫ್ ಬಗ್ಗೆ ಮಾತನಾಡಿದ ವಾರದಲ್ಲಿಯೇ ಡಿವೋರ್ಸ್; ಅಂದು ಚಂದನ್ ಹೇಳಿದ್ದೇನು?

By Mahmad Rafik  |  First Published Jun 8, 2024, 10:06 AM IST

Chandan - Niveditha Divorce: ಸಿನಿಮಾ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರ ಕೆಲಸದ ವಿಟಿ ತೋರಿಸುವಾಗ ಕಿರುತೆರೆ ನಟರು-ನಟಿಯರು ಸೇರಿದಂತೆ ಬಿಗ್‌ಬಾಸ್ ವಿನ್ನರ್ ಆಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹಾಜರಿದ್ದರು. 


ಬೆಂಗಳೂರು: ಕೋಟಿ ಸಿನಿಮಾ ಪ್ರಮೋಷನ್‌ (Kotee Cinema Promotion) ವೇಳೆ ಗಾಯಕ ಚಂದನ್ ಶೆಟ್ಟಿ ಲೈಫ್ ಮತ್ತು ವೈಫ್‌ ಬಗ್ಗೆ ಮಾತನಾಡಿದ್ದರು. ಈ ಸಂಚಿಕೆ ನೋಡಿದ ಕೆಲವೇ ದಿನಗಳಲ್ಲಿ ಚಂದನ್-ನಿವೇದಿತಾ ಸುದ್ದಿ (Chandan Shetty And Niveditha Gowda)  ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಡಾಲಿ ಧನಂಜಯ್ (Actor Dhananjay) ನಟನೆಯ ಪರಮೇಶ್ವರ್ ಗುಂಡ್ಕಲ್ (Parameshwar  Gundkal)  ನಿರ್ದೇಶನದ ಕೋಟಿ ಸಿನಿಮಾ ಇದೇ ಜೂನ್ 14ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಸಿನಿಮಾ ತಂಡ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಳೆದ ವಾರವಷ್ಟೇ ಈ ಕಾರ್ಯಕ್ರಮ ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಂಡಿತ್ತು. ಸಿನಿಮಾ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರ ಕೆಲಸದ ವಿಟಿ ತೋರಿಸುವಾಗ ಕಿರುತೆರೆ ನಟರು-ನಟಿಯರು ಸೇರಿದಂತೆ ಬಿಗ್‌ಬಾಸ್ ವಿನ್ನರ್ ಆಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹಾಜರಿದ್ದರು. 

ಈ ವೇಳೆ ಮಾತನಾಡಿದ ಪರಮೇಶ್ವರ್ ಗುಂಡ್ಕಲ್, ಬಿಗ್‌ಬಾಸ್ ಸೀಸನ್ 5ಕ್ಕೆ ನಾನು ಮೊದಲು ಒಪ್ಪಿಸಿದ್ದ ಚಂದನ್ ಶೆಟ್ಟಿಯನ್ನು. ನಂತರ ಅವರೇ ಆ ಸೀಸನ್ ವಿನ್ನರ್ ಆದರು ಎಂದರು. ಪರಮೇಶ್ವರ್ ಗುಂಡ್ಕಲ್ ಅವರಿಗೆ ಧನ್ಯವಾದ ಹೇಳಿದ ಚಂದನ್ ಶೆಟ್ಟಿ, ಇಂದು ನಾನು ಏನಾಗಿದ್ರೂ ಅದರಲ್ಲಿ ನಿಮ್ಮ ಪಾತ್ರ ದೊಡ್ದದು. ಇಂತಹ ಒಳ್ಳೆಯ ಲೈಫ್ ನೀಡಿದ್ದಕ್ಕೆ ಥ್ಯಾಂಕ್ ಯು ಸರ್ ಎಂದು ಹೇಳುತ್ತಾರೆ. 

Tap to resize

Latest Videos

ಚಂದನ್‌ -ನಿವೇದಿತಾ ಒಂದೇ ದಿನದಲ್ಲಿ ಡಿವೋರ್ಸ್ ಆಗಿದ್ದು ಇದೊಂದೇ ಕಾರಣಕ್ಕಾ? ನೆಟ್ಟಿಗರ ಹಲವು ಅನುಮಾನ!

ಲೈಫ್‌ ಮತ್ತು ವೈಫ್ ಬಗ್ಗೆ ಚಂದನ್ ಮಾತು

ಈ ವೇಳೆ ಮಧ್ಯ ಪ್ರವೇಶಿಸಿದ ನಿರೂಪಕ ಅಕುಲ್ ಬಾಲಾಜಿ, ಬಿಗ್‌ಬಾಸ್ ಗೆದ್ದಿದ್ದೀಯಾ, ನಿನ್ನ ಮದುವೆನೂ ಮಾಡಿಕೊಟ್ರು. ಮತ್ತೆ ನಿನಗೆ ಇನ್ನೇನು ಮಾಡಬೇಕಪ್ಪಾ ಎಂದು ನಗೆ ಚಟಾಕಿ ಹಾರಿಸಿದರು. ಅಕುಲ್ ಮಾತಿಗೆ ಹೌದು ಅಲ್ಲವಾ ಅಂತ ಪರಮೇಶ್ವರ್ ಗುಂಡ್ಕಲ್ ಹೇಳುತ್ತಿದ್ದಂತೆ ವೇದಿಕೆ ಮೇಲಿದ್ದ ಎಲ್ಲರೂ ಜೋರಾಗಿ ನಕ್ಕರು. ಲೈಫ್‌, ವೈಫ್‌ ಸಿಕ್ತು. ಜೊತೆಗೆ ಕೋಟಿ ಕೋಟಿಯೂ ಸಿಕ್ಕಿದೆ. ಮತ್ತೆ ನಿನಗೆ ಇನ್ನೇನು ಬೇಕು ಎಂದು ಅಕುಲ್ ಪ್ರಶ್ನೆಗೆ ಸಾಕು ಇಷ್ಟು ಎಂದು ಹೇಳುವ ಚಂದನ್‌ ಶೆಟ್ಟ, ಕೋಟಿ ಸಿನಿಮಾ ಚಿತ್ರತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು. 

ನಿವೇದಿತಾ ಗೌಡ ಹೇಳಿದ್ದೇನು?

ನಂತರ ಮಾತನಾಡಿದ ನಿವೇದಿತಾ ಗೌಡ, ಪರಮ್ ಸರ್ ಕೊಟ್ಟ ಅವಕಾಶಗಳಿಂದ ನನಗೆ ಎಷ್ಟು ಫೇಮ್ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ಕೋಟಿ ಕೋಟಿ ಜನರು ನನ್ನನ್ನು ಗುರುತಿಸುತ್ತಾರೆ. ಥ್ಯಾಂಕ್‌ ಯು ಹೊರತಾಗಿ ನಾನು ನಿಮಗೇನು ಹೇಳಲು ಸಾಧ್ಯವಿಲ್ಲ. ಇದೆಲ್ಲಾ ಆಗಿದ್ದು ನಿಮ್ಮಿಂದ ಮಾತ್ರ ಸಾಧ್ಯ ಎಂದು ಪರಮೇಶ್ವರ್ ಗುಂಡ್ಕಲ್ ಅವರಿಗೆ ಧನ್ಯವಾದಗಳನ್ನು ಹೇಳಿದರು.  

ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?

ಡಿವೋರ್ಸ್ ಪಡೆದುಕೊಂಡ ಬಳಿಕ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಪರಸ್ಪರ ಅನ್‌ಫಾಲೋ (unfollow) ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಾವು ಬೇರೆ ಆಗುತ್ತಿರುವ ವಿಷಯವನ್ನು ಸಹ ಹಂಚಿಕೊಂಡಿದ್ದರು.

click me!