ದುಷ್ಟ ಶಕ್ತಿಗಳ ಮಧ್ಯೆ ಸೂಪರ್ ಪವರೊಂದು ನಟಿ ಅಮೃತಾ ನಾಯ್ಡುರನ್ನು ಕಾಪಾಡುತ್ತಿದೆ!

Published : May 10, 2022, 12:41 PM IST
 ದುಷ್ಟ ಶಕ್ತಿಗಳ ಮಧ್ಯೆ  ಸೂಪರ್ ಪವರೊಂದು ನಟಿ ಅಮೃತಾ ನಾಯ್ಡುರನ್ನು ಕಾಪಾಡುತ್ತಿದೆ!

ಸಾರಾಂಶ

ಬೆಳ್ಳಂಬೆಳಗ್ಗೆ ಕರೆ ಮಾಡಿ ಸಮನ್ವಿ ಇಲ್ಲ ಎಂದು ಅಮೃತಾ ಅತ್ತರು, ಫೋಟೋಗ್ರಾಫರ್ ಕರುಣಾ ಮನದಾಳದ ಮಾತು...

ಕನ್ನಡ ಚಿತ್ರರಂಗ (Sandalwood) ಮತ್ತು ಕಿರುತೆರೆ ನಟಿ ಅಮೃತಾ ನಾಯ್ಡು (Amrutha Naidu) ಮತ್ತು ಪುತ್ರಿ ಸಮನ್ವಿ ನನ್ನಮ್ಮ ಸೂಪರ್ ಸ್ಟಾರ್ (Nanamma Super star) ರಿಯಾಲಿಟಿ ಶೊನಲ್ಲಿ ಸ್ಪರ್ಧಿಸಿದ ದಿನದಿಂದಲ್ಲೂ ಕರ್ನಾಟಕದ ಮನೆ ಮಗಳಾಗಿ ಬಿಟ್ಟರು. ಫಿನಾಲೆ ಹಂತ ತಲುಪುವ ಅರ್ಹತೆ ಹೊಂದಿದ್ದ ಅಮೃತಾ ಅವರು ಎರಡನೇ ಮಗುವಿಗೆ ತಾಯಾಗುತ್ತಿರುವ ಕಾರಣ ಅರ್ಧದಲೇ ರಿಯಾಲಿಟಿ ಶೋ ಬಿಟ್ಟ ಬಂದರು. ಅಮೃತಾ ಶೋನಿಂದ ಹೊರ ಬಂದರು ಆದರೆ ಅಲ್ಲಿದ್ದ ಪ್ರತಿಯೊಬ್ಬ ಪ್ರತಿ ಸ್ಪರ್ಧಿ ಜೊತೆ ಅದ್ಭುತ ಕನೆಕ್ಷನ್ ಹೊಂದಿದ್ದರು. 

ದುರಾದೃಷ್ಟ ಅಮೃತಾ ನಾಯ್ಡು ಅವರು ರಸ್ತೆ ಅಪಘಾತದಲ್ಲಿ ಮಗಳು ಸಮನ್ವಿಯನ್ನು (Samanvi) ಕಳೆದುಕೊಂಡರು. ದುಖಃದಲ್ಲಿದ್ದ ಅಮೃತಾಗಗೆ ಧೈರ್ಯ ಮತ್ತು ಜೀವನದ ಬಗ್ಗೆ ಭರವಸೆ ಕೊಟ್ಟಿದೇ ಹೊಟ್ಟೆಯಲ್ಲಿರುವ ಕಂದಮ್ಮ.ಕೆಲವು ದಿನಗಳ ಹಿಂದೆ ಅಮೃತಾ ಹೊಸ ಫೋಟೋಶೂಟ್ ಮಾಡಿಸಿದರು, ಸೆರೆ ಹಿಡಿದಿ ಫೋಟೋಗ್ರಾಫರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೂಟ್‌ ಬಗ್ಗೆ ಬರೆದುಕೊಂಡಿದ್ದಾರೆ. 

ಫೋಟೋಗ್ರಾಫರ್ ಕರುಣಾ ಮಾತು:

'ಕೆಲವು ತಿಂಗಳುಗಳ ಹಿಂದೆ ಈ ಫೋಟೋಶೂಟ್‌ನ ಸಮನ್ವಿ ಜೊತೆ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ದುರಂತ ಸಂಭವಿಸಿತು ಮತ್ತು ಅವಳ ಪ್ರಪಂಚವು ಛಿದ್ರವಾಯಿತು. ಬೆಳ್ಳಂಬೆಳಗೆ ನನಗೆ ಕರೆ ಮಾಡಿ ಸಮನ್ವಿ ಇಲ್ಲದೆ ನಾನು ಹೇಗೆ ಬದುಕಲಿ ಎಂದು ಅಮೃತಾ ಅತ್ತರು. ನಾನೇ ಸಮನ್ವಿ ಇಲ್ಲದ ನೋವಿನಲ್ಲಿ ಇರುವಾಗ ಅಮೃತಾಗೆ ಹೇಗೆ ಶಕ್ತಿ  ಕೊಡಲಿ? ಆಕೆ ಹೊಟ್ಟೆಯಲ್ಲಿರುವ ಕಂದಮ್ಮನೆ ಅವರ ಬರವಸೆ, ಈ ಕಂದಮ್ಮನಿಗೆ ಒಳ್ಳೆ ಜೀವನ ರೂಪಿಸಿ ಕೊಡಬೇಕು. ತಲೆಯಲ್ಲಿ ತುಂಬಾ ವಿಚಾರಗಳನ್ನು ತುಂಬಿಕೊಂಡು ನಾನು ಈ ಶೂಟ್ ಮಾಡಿದ್ದೀನಿ, ಅದ್ಭುತವಾಗಿ ಬಂದಿದೆ' ಎಂದು ಫೋಟೋಗ್ರಾಫರ್ ಕರುಣಾ ಬರೆದುಕೊಂಡಿದ್ದಾರೆ. 

ಸಮನ್ವಿ ಬಂದ್ರೆ ಜೀವನ ಮತ್ತೆ ಫ್ರೆಶ್ ಆಗುತ್ತೆ ಇಲ್ಲದಿದ್ದರೆ ಹೊಸ ಫ್ರೆಶ್‌ ಶೇಡ್‌ ಸಿಗುತ್ತೆ: ಅಮೃತಾ ನಾಯ್ಡು

 

'ಫೋಟೋಗಳು ಮೂಡಿ ಬಂದಿರುವ ರೀತಿ ನನಗೆ ತುಂಬಾ ಇಷ್ಟವಾಗುತ್ತಿದೆ, ಅಮೃತಾ ಅವರ ಕನಸಿಗೆ ನಾನು ನ್ಯಾಯ ಕೊಟ್ಟಿದ್ದೀನಿ ಅಂದುಕೊಂಡಿರುವೆ. ನಾನು ಒಂದು ವಿಚಾರ ಹೇಳುವುದಕ್ಕೆ ಇಷ್ಟ ಪಡುತ್ತೀನಿ. ಫೋಟೋಗಳ ಮೂಲಕ ನೆನಪುಗಳು ಶಾಶ್ವತವಾಗಿ ಉಳಿಯುತ್ತದೆ. ಆ ನೆನಪುಗಳ ಮೂಲಕ ಪ್ರೀತಿ ಹೆಚ್ಚಾಗುತ್ತದೆ. ಹೀಗಾಗಿ ನಾನು ಫೋಟೋಗ್ರಫಿ ಇಷ್ಟ ಪಡುತ್ತೀನಿ' ಎಂದು ಕರುಣಾ ಹೇಳಿದ್ದಾರೆ.

'ನೊಂದಿರುವ ಮನಸ್ಸುಗಳಿಗೆ ಮರು ಸಂತೋಷ ತರುವುದು ತುಂಬಾನೇ ಕಷ್ಟ. ಆಕೆಗೆ ಆಗಿರುವ ಗಾಯಗಳು ಇನ್ನೂ ಮಾಸಿಲ್ಲ. ಕಣ್ಣೀರು ಕಡಿಮೆ ಆಗುತ್ತಿದೆ, ಹೆಚ್ಚಿಗೆ ನಗಲು ಕಾರಣಬೇಕಿದೆ. ದುಷ್ಟ ಶಕ್ತಿಗಳು ತುಂಬಿಕೊಂಡಿದ್ದರೂ ಅಮೃತಾ ಅವರನ್ನು ಕಾಪಾಡಲು ಒಂದು ಸೂಪರ್ ಪವರ್ ಇದೆ. ಆ ದೇವರಿಗೂ ಈಗ ಈಕೆ ನಗುವನ್ನು ಕಿತ್ತಿಕೊಳ್ಳಲು ಇಷ್ಟವಿಲ್ಲ. ಜೀವನವನ್ನು ಮತ್ತೆ ಪ್ರೆಶ್ ಆಗಿ ಆರಂಭಿಸಲು ದೇವರು ದೊಡ್ಡ ಕಾರಣ ಕೊಟ್ಟಿದ್ದಾನೆ' ಎಂದಿದ್ದಾರೆ ಕರುಣಾ.

Samanvi ಕೊನೆ ವಿಡಿಯೋಗಳನ್ನು ಹಂಚಿಕೊಂಡ ತಾಯಿ ಅಮೃತಾ ನಾಯ್ಡು!

'ತಾಯಂದಿರ ದೊಡ್ಡ ಶಕ್ತಿನೇ ಮಗುವನ್ನು ಕಾಪಾಡುವುದು, ಆಕೆ ಹೊಟ್ಟೆಯಲ್ಲಿರುವ ಕಂದಮ್ಮನನ್ನು ಉಳಿಸಿಕೊಳ್ಳಲು ಮುಂದಾಗಿದ್ದಾಳೆ. ಆ ಮಗುವಿಗೆ ಈ ಪ್ರಪಂಚ ಕೆಟ್ಟದಾಗಿಲ್ಲ ಎಂದು ತೋರಿಸಬೇಕು. ಆ ಮಗುವಿಗೆ ಎಲ್ಲರ ಪ್ರೀತಿ ಸಿಗಲಿದೆ. ಒಂದು ಅದ್ಭುತವಾಗ ಪವಾಡ ನಡೆಯಬೇಕಿದೆ. ಸಣ್ಣ ಅವಧಿಯಲ್ಲಿ ಅಮೃತಾ ಅವರನ್ನು ಮತ್ತೆ ನಗಿಸಲು ನನಗೆ ಒಂದು ಅವಕಾಶ ಸಿಕ್ಕಿದೆ. ಹೊಟ್ಟೆಯಲ್ಲಿರುವ ಕಂದಮ್ಮನಿಗೆ ಸಂಪೂರ್ಣ ಸಂತೋಷ ಪಡೆಯುವ ಹಕ್ಕಿದೆ. ನಿಮ್ಮಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದ ಆಕೆಗೆ ಬೇಕಿದೆ. ಆಕೆ ಮುಖದಲ್ಲಿ ನಗು ತರಲು ಏನು ಬೇಕಿದ್ದರೂ ಮಾಡಬೇಕು' ಎಂದು ಕರುಣಾ ಬರೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!