ಬಿಗ್​ಬಾಸ್​ ಕಿರೀಟ ಪಡೆದು ಇತಿಹಾಸ ಸೃಷ್ಟಿಸಿದ ವೈಲ್ಡ್​ಕಾರ್ಡ್​ ಎಂಟ್ರಿ ಅರ್ಚನಾ! ಈ ಗೆಲುವು ಬಂದದ್ದು ಹೇಗೆ?

By Suvarna News  |  First Published Jan 15, 2024, 3:33 PM IST

 ಬಿಗ್​ಬಾಸ್​ ಕಿರೀಟ ಪಡೆದು ಇತಿಹಾಸ ಸೃಷ್ಟಿಸಿದ ವೈಲ್ಡ್​ಕಾರ್ಡ್​ ಎಂಟ್ರಿ ಅರ್ಚನಾ! ಈ ಗೆಲುವು ಬಂದದ್ದು ಹೇಗೆ? ಇಲ್ಲಿದೆ ಡಿಟೇಲ್ಸ್​
 


ಮೂವರು ಮಹಿಳೆಯರ ನಡುವೆ ಭಾರಿ ಕಿತ್ತಾಟದಿಂದಲೇ ಬಿಗ್​ಬಾಸ್​ ತಮಿಳಿನ ಸೀಸನ್​ 7 ಭಾರಿ ಸದ್ದು ಮಾಡಿತ್ತು. ವೈಲ್ಡ್​ಕಾರ್ಡ್​ ಎಂಟ್ರಿ ಪಡೆದಿದ್ದ ಅರ್ಚನಾ ಜೊತೆ ಬಿಗ್​ಬಾಸ್​ನಲ್ಲಿ ಮೊದಲಿನಿಂದಲೂ ಇದ್ದ ಪೂರ್ಣಿಮಾ ಮತ್ತು ಮಾಯಾ ಸದಾ ಕಿತ್ತಾಟ ಮಾಡುತ್ತಲೇ ಇದ್ದರು. ಅರ್ಚನಾ ಅವರಿಗೆ ಬೆಂಬಲ ಜಾಸ್ತಿ ಆಗುತ್ತಿದ್ದಂತೆಯೇ ಉಳಿದ ಇಬ್ಬರು ಸ್ಪರ್ಧಿಗಳು ಅವರ ಮೇಲೆ  ಸದಾ ಸೇಡು ತೀರಿಸಿಕೊಳ್ಳುತ್ತಲೇ ಇದ್ದರು. ಬಿಗ್​ಬಾಸ್​ ನಡೆಸಿಕೊಡುವ ನಟ ಕಮಲ ಹಾಸನ್​ ಅವರು ಈ ಸ್ಪರ್ಧಿಗಳಿಗೆ ವಾರ್ನ್​ ಕೂಡ ಮಾಡಿದ್ದರು. ಈಗ ಎಲ್ಲರ ನಡುವೆಯೇ, 105 ದಿನಗಳ ಕಾಲ ನಡೆದ ಈ ಶೋನಲ್ಲಿ ವಿಜೆ ಅರ್ಚನಾ ರವಿಚಂದ್ರನ್ ಅವರು ಟ್ರೋಫಿ ಗೆದ್ದಿದ್ದಾರೆ. ಈ ಮೂಲಕ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. 15 ಲಕ್ಷ ರೂಪಾಯಿಯ ಪ್ಲಾಟ್​ ಹಾಗೂ ಒಂದು ಕಾರು ದಕ್ಕಿಸಿಕೊಂಡಿದ್ದಾರೆ. ಈ ಮೂಲಕ ಎರಡು ದಾಖಲೆಗಳನ್ನು ಅರ್ಚನಾ ರವಿಚಂದ್ರನ್​ ಬರೆದಿದ್ದಾರೆ.

26 ವರ್ಷ ಅರ್ಚನಾ ರವಿಚಂದ್ರನ್ ಅವರು ನಿರೂಪಕಿಯಾಗಿದ್ದಾರೆ.  'ರಾಜ ರಾಣಿ 2' ಧಾರಾವಾಹಿ ಮೂಲಕ ಕಿರುತೆರೆಗೆ ನಟಿಯಾಗಿ ಕಾಲಿಟ್ಟರು. ನಂತರ ಒಂದಷ್ಟು ಷೋಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದ  ಅರ್ಚನಾ, ಈಗ ಬಿಗ್ ಬಾಸ್ ಶೋಗೆ ಆಗಮಿಸಿದ್ದರು. ಸದ್ಯ ತೆರೆಗೆ ಬರಬೇಕಿರುವ 'ಡಿಮಾಂಟೆ ಕಾಲೋನಿ 2' ಸಿನಿಮಾ ಮತ್ತು 'ಅವಲ್ ಎನ್ನವಲ್' ಎಂಬ ವೆಬ್ ಸೀರಿಸ್‌ನಲ್ಲೂ ನಟಿಸಿದ್ದಾರೆ. ಇದರ ಜೊತೆಗೆ ಕೆಲವು ಮ್ಯೂಸಿಕ್ ವಿಡಿಯೋಗಳಲ್ಲೂ ಕೂಡ ಅರ್ಚನಾ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

Tap to resize

Latest Videos

ಸುಸ್ಸಾನೆ ಖಾನ್- ಹೃತಿಕ್ ಆಲಿಂಗನ​! ಸಿನಿಮಾ ತಾರೆಯರಿಗೆ ಡಿವೋರ್ಸ್​ ಆದ್ಮೇಲೆ ಲವ್​ ಜಾಸ್ತಿಯಾಗೋದ್ಯಾಕೆ?

ಮೊದಲನೆಯದಾಗ ಮಹಿಳೆಯೊಬ್ಬರು ಬಿಗ್​ಬಾಸ್​ ಗೆದ್ದಿರುವುದಾದರೆ, ಇನ್ನೊಂದು, ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದ ಸ್ಪರ್ಧಿಯೊಬ್ಬರು ಹೀಗೆ ಪಡೆದಿರುವುದು ಇತಿಹಾಸ ಸೃಷ್ಟಿಯಾಗಿದೆ. ಅಕ್ಟೋಬರ್ 1ರಂದು ಶುರುವಾದ 'ಬಿಗ್ ಬಾಸ್‌' ತಮಿಳು ಸೀಸನ್‌ 7 ಶೋನಲ್ಲಿ ಒಟ್ಟು 18 ಮಂದಿ ಸ್ಪರ್ಧಿಗಳು ಎಂಟ್ರಿಯಾಗಿದ್ದರು.  ಎಲಿಮಿನೇಷನ್​ ಪ್ರಕ್ರಿಯೆಯಿಂದಾಗಿ ಮೊದಲ ವಾರದಲ್ಲಿ ಅನಿರೀಕ್ಷಿತವಾಗಿ ಅನನ್ಯ ರಾವ್ ಹೊರಹಾಕಲ್ಪಟ್ಟರು. ಇನ್ನೋರ್ವ ಸ್ಪರ್ಧಿ ಭಾವಾ ಚೇಲತುರೈ ಅವರು ಆರೋಗ್ಯ ಸಮಸ್ಯೆಗಳ ಕಾರಣ ಮನೆಯಿಂದ ಹೊರನಡೆದರು.. ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ನಿರ್ಗಮಿಸುತ್ತಿದ್ದಂತೆ, ಮತ್ತೇ 28 ನೇ ದಿನದಂದು ಎರಡು ಎಲಿಮಿನೇಷನ್​ ನಡೆದವು. ಜೊತೆಗೆ 5 ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದರು. ಇವರ ಪೈಕಿ ಒಬ್ಬರಾಗಿದ್ದ ಅರ್ಚನಾ ಅವರಿಗೆ ಬಿಗ್​ಬಾಸ್​​ ಕಿರೀಟ ದಕ್ಕಿದೆ. 

ಅಷ್ಟಕ್ಕೂ ಇವರು ವಿನ್​ ಆಗಿದ್ದು ಹೇಗೆ ಎನ್ನುವುದು ಕೂಡ ರಿವೀಲ್​ ಆಗಿದೆ. ಈ ಬಿಗ್​ಬಾಸ್​ ಶುರುವಾದ  28 ದಿನಕ್ಕೆ ವಿಜೆ ಅರ್ಚನಾ ರವಿಚಂದ್ರನ್ ಅವರು ವೈಲ್ಡ್ ಕಾರ್ಡ್ ಪ್ರವೇಶ ಪಡೆದುಕೊಂಡರು. ಅವರಿಗೆ ಜನ ಬೆಂಬಲ ಹೆಚ್ಚಿತ್ತು. ಈ ಷೋದ ಆರಂಭದಿಂದಲೂ  ಇವರ ಮೇಲೆ  ವೀಕ್ಷಕರು ಹೆಚ್ಚು ಪ್ರೀತಿ ತೋರಿದ್ದರು.  ಅದರಿಂದಲೇ ಇವರಿಗೆ ಗೆಲುವು ಸಿಕ್ಕಿದೆ. ಇನ್ನೊಂದು ಕುತೂಹಲವೆಂದರೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವ ದಿನೇಶ್ ಮೂರನೇ ರನ್ನರ್ ಅಪ್ ಆಗಿದ್ದಾರೆ. ಮೊದಲ ರನ್ನರ್‌ ಅಪ್ ಆಗಿ ಮಣಿಚಂದ್ರ ಆಯ್ಕೆಯಾದರೆ, ಎರಡನೇ ರನ್ನರ್‌ ಅಪ್ ಆಗಿ ಮಾಯಾ ಎಸ್ ಕೃಷ್ಣನ್ ಸೆಲೆಕ್ಟ್ ಆಗಿದ್ದಾರೆ. ನಾಲ್ಕನೇ ರನ್ನರ್ ಅಪ್ ಆಗಿ ವಿಷ್ಣು ಆಯ್ಕೆಯಾಗಿದ್ದಾರೆ.
ಯೂ ಲವ್​ ಐ... ಎಂದಿದ್ದ ಶ್ರದ್ಧಾ ಕಪೂರ್- ಶಾಕ್​ನಲ್ಲಿ ಪ್ರೀತಿಯನ್ನೇ ತಿರಸ್ಕರಿಸಿ ಓಡಿದ್ದ ವರುಣ್​ ಧವನ್​..!

click me!