ಡ್ರೋನ್ ಸಿನಿಮಾ ರಿಲೀಸ್ ಆದ್ರೆ ಬಿಗ್ ಬಾಸ್ ಪ್ರತಾಪ್ ಸೋಲೋಕೆ ನಾನೇ ಕಾರಣ ಅಂತಾರೆ: ಒಳ್ಳೆ ಹುಡುಗ ಪ್ರಥಮ್

By Vaishnavi Chandrashekar  |  First Published Nov 20, 2023, 11:45 AM IST

ಮದುವೆ ಸಂಭ್ರಮದಲ್ಲಿರುವ ಪ್ರಥಮ್‌ಗೆ ಡ್ರೋನ್ ಸಿನಿಮಾದೇ ಚಿಂತೆ. ಜನರ ಕಾಮೆಂಟ್‌ ಬಗ್ಗೆ ತಲೆ ಕೆಡಿಸಿಕೊಂಡ ನಟ.....


ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಟಭಯಂಕರ ಒಳ್ಳೆ ಹುಡುಗ ಪ್ರತಾಪ್ ಕೆಲವು ದಿನಗಳ ಹಿಂದೆ ಬಿಗ್ ಬಾಸ್‌ ಮನೆಗೆ ಕಾಲಿಟ್ಟು ಅಲ್ಲಿದ್ದ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ್ದರು. ಈ ನಡುವೆ ಪ್ರಥಮ್ ನಟಿಸಿ ನಿರ್ದೇಶಿಸಿರುವ ಡ್ರೋನ್ ಪ್ರಥಮ್ ಸಿನಿಮಾ ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ಹೀಗಾಗಿ ಡ್ರೋನ್ ಪ್ರಥಮ್ ಸಿನಿಮಾ, ಡ್ರೋನ್ ಪ್ರತಾಪ್ ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ.

'ಡಿಗ್ರಿ ಮಾಡ್ಕೊಂಡಿದ್ದಾರೆ ಈಗ ಮಾಸ್ಟರ್ ಡಿಗ್ರಿ ಮಾಡ್ತಿದ್ದಾರೆ. ಅವರ ತಂದೆ ವ್ಯವಸಾಯ ಮಾಡ್ತಿದ್ದಾರೆ ನಮ್ಮ ತಾತನೂ ವ್ಯವಸಾಯ ಮಾಡ್ತಿದ್ದಾರೆ. ವ್ಯವಸಾಯ ಮಾಡ್ಕೊಂಡು ಇರ್ತೀವಿ. ಕುರಿ-ಗಿರಿ ಮೇಯಿಸಿಕೊಂಡು ತೋಟ ನೋಡಿಕೊಂಡು ಇರಬೇಕು ಅಂತ ಹೇಳಿದ್ದೀನಿ ಅದಕ್ಕೆ ಓಕೆ ಅಂತ ಹೇಳಿದ್ದಾರೆ. ಮೊದಲು ನಿಮಗೆ ಓಕೆನಾ ಎಂದು ಹೇಳಿದೆ ಅದಿಕ್ಕೆ ಹಳ್ಳಿ ಜೀವನ ತುಂಬಾ ಅದ್ಭುತವಾದ ಜೀವನ ನಾನು ಅಲ್ಲೇ ಇರುತ್ತೀನಿ ಎಂದು ಖುಷಿಯಿಂದ ಹೇಳಿದ್ದಾರೆ.'ಎಂದು ಕೈ ಹಿಡಿಯುತ್ತಿರುವ ಹುಡುಗಿ ಬಗ್ಗೆ ಹೇಳಿದ್ದಾರೆ.

Tap to resize

Latest Videos

ದೋಷ ಪರಿಹಾರಕ್ಕೆ ಬಂದ್ರಾ?; ಮುಂಡಾ ಮೋಚ್ತು ಅನ್ಕೊಂಡೇ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ

'ನನ್ನ ಕೈಯಲ್ಲಿ ಎರಡು ಸಿನಿಮಾ ಇದೆ. ಡ್ರೋನ್ ಪ್ರಥಮ್ ಅಂತ. ಆದರೆ ನೀವೆಲ್ಲಾ ಬೆಳೆಸುತ್ತಿರುವುದನ್ನು ನೋಡಿದರೆ ರಿಲೀಸ್ ಮಾಡುವುದಕ್ಕೆ ನನಗೆ ಭಯ ಆಗುತ್ತಿದೆ. ಏನಾದರೂ ನಾನು ಸಿನಿಮಾ ರಿಲೀಸ್ ಮಾಡಿಬಿಟ್ಟರೆ...ಜನರು ಈಗ ಅವರನ್ನು ಒಂದು ರೇಂಜ್‌ಗೆ ತೆಗೆದುಕೊಂಡು ಹೋಗಿದ್ದೀರಾ ನಾವು ಯಾಕೆ ಅವರನ್ನು ಬೀಳಿಸುವುದು?. ಎಲ್ಲರೂ ಡ್ರೋನ್ ಪ್ರತಾಪ್ ಕಥೆ ಅಂದುಕೊಂಡಿದ್ದಾರೆ ಆದರೆ ಅದು ಡ್ರೋನ್ ಪ್ರಥಮ್ ಕಥೆ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ. ಈಗ ನಾನು ಸಿನಿಮಾ ರಿಲೀಸ್ ಮಾಡುತ್ತೀನಿ ಈ ಸಮಯದಲ್ಲಿ ಪ್ರತಾಪ್ ಎರಡು ಅಥವಾ ಮೂರನೇ ಸ್ಥಾನಕ್ಕೆ ಗೆಲ್ಲುತ್ತಾರೆ ಅಂದುಕೊಳ್ಳಿ ಆಗ ಅಯ್ಯೋ ಪ್ರತಾಪ್ ಗೆಲ್ಲುತ್ತಿದ್ದ ಅದನ್ನು ಕಿತ್ತಿಕೊಂಡೆ ಪ್ರಥಮ್ ಅಂತ 50 ಜನ ಆದರೂ ಕಾಮೆಂಟ್ ಮಾಡುತ್ತಾರೆ. ಆತನಿಗೆ ಒಳ್ಳೆಯದಾಗಲಿ ಆತ ಡ್ರೋನ್ ಪ್ರತಾಪ್ ನಾನು ಡ್ರೋನ್ ಪ್ರಥಮ್. ಸಿನಿಮಾ ರಿಲೀಸ್ ಆದ್ಮೇಲೆ ನಾನು ಊರು ಕಡೆ ಹೋಗ್ತೀನಿ. ಸಿನಿಮಾ ಮಾಡ್ತಿದ್ದೀನಿ ಅದನ್ನು ನೋಡಿ ಆಮೇಲೆ ನಾನು ಕಾಲೆಳೆಯುತ್ತಿರುವೆ ಅನ್ನೋ ಮಾತುಗಳನ್ನು ಹೇಳುತ್ತಾರೆ. ಪ್ರತಾಪ್ ಜನರ ಪ್ರೀತಿಗಳಿಸಿದ್ದಾರೆ ಅವರಿಗೆ ಒಳ್ಳೆಯದಾಗಲಿ' ಎಂದಿದ್ದಾರೆ ಪ್ರಥಮ್.

click me!