ಈ ವಯಸ್ಸಲ್ಲೂ ಬೇಕಿತ್ತಾ ಇದೆಲ್ಲಾ ಅನ್ನೋರಿಗೇ ಸವಾಲೆಸೆದು ರಾಜಾ ರಾಣಿ ವೇದಿಕೆ ಮೇಲೆ ರೀಲ್ಸ್​ ಜೋಡಿ!

By Suchethana D  |  First Published Jun 6, 2024, 6:25 PM IST

ರೀಲ್ಸ್​ ಮೂಲಕ ಸಕತ್​ ಫೇಮಸ್​ ಆಗಿರೋ  ಗೋವಿಂದ್‌ರಾಜ್‌- ವೈಲಾ ದಂಪತಿ ಕಲರ್ಸ್ ಕನ್ನಡ ವಾಹಿನಿಯ ರಾಜಾ ರಾಣಿ ರೀಲೋಡೆಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಪ್ರೊಮೋ ರಿಲೀಸ್​ ಆಗಿದೆ.
 


ಸೋಷಿಯಲ್​  ಮೀಡಿಯಾದ ಮೂಲಕ ಬಂದಿರುವ ಪ್ರತಿಭೆಗಳು ಅದೆಷ್ಟೋ ಮಂದಿ. ರೀಲ್ಸ್​  ಮಾಡಿಕೊಂಡೇ ಇದ್ದ ಜೋಡಿಗಳು ದಿಢೀರ್​ ಅಂತ ಫೇಮಸ್​ ಆಗಿದ್ದೂ ಇವೆ. ಅಶ್ಲೀಲ, ಅಸಭ್ಯ ಎನ್ನಿಸುವ ರೀಲ್ಸ್​ ಮಾಡಿಕೊಂಡು ಒಂದಿಷ್ಟು ವಿವಾದ ಸೃಷ್ಟಿಸಿಕೊಂಡ ಮಾತ್ರಕ್ಕೆ ಕೆಲವು ರಿಯಾಲಿಟಿ ಷೋಗಳಲ್ಲಿ ಮನ್ನಣೆ ಸಿಕ್ಕು ಫೇಮಸ್​ ಆದವರೂ ಇದ್ದಾರೆ ಅನ್ನಿ. ಅವರಿಗಿಂತ ಭಿನ್ನವಾಗಿ ಕಾಣಿಸುವವರು  ಗೋವಿಂದ್‌ರಾಜ್‌- ವೈಲಾ ದಂಪತಿ. ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತ ಎಲ್ಲರ ಗಮನಸೆಳೆಯುತ್ತಿದ್ದಾರೆ ಈ ದಂಪತಿ. ಇಂಥ ದಂಪತಿಗಳು ಹಲವರು ರೀಲ್ಸ್​ ಮಾಡುತ್ತಿದ್ದಾರೆ ಎನ್ನಿ. ಎಲ್ಲರೂ ಫೇಮಸ್​ ಆಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಆದರೂ ಇಳಿ ವಯಸ್ಸಿನ ಈ ದಂಪತಿಯ ರೀಲ್ಸ್​ ನೋಡುವುದು ಎಂದರೆ ಹಲವರಿಗೆ ತುಂಬಾ ಇಷ್ಟ. ಸಕತ್​ ಟ್ರೋಲ್​ಗಳ ನಡುವೆಯೇ ಈ ದಂಪತಿ ಹಲವರಿಗೆ ನೆಚ್ಚಿನವರೂ ಆಗಿದ್ದಾರೆ.

ಈ ದಂಪತಿ ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ರಾಜಾ ರಾಣಿ ರೀಲೋಡೆಡ್​ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕದಂಬ ಚಿತ್ರದ 'ಯಾಮಿನಿ ಯಾರಮ್ಮ ನೀನು ಯಾಮಿನಿ..' ಹಾಡು ಸಕತ್​ ವೈರಲ್​ ಆದ ಬಳಿಕ ಫೇಮಸ್​ ಆಗಿದೆ ಈ ಜೋಡಿ. ಈ ಹಾಡಿನ ಬಳಿಕ ಇವರ ಸೋಷಿಯಲ್ ಮೀಡಿಯಾ ಖಾತೆಗೆ ಲಗ್ಗೆ ಹಾಕಿ ಇವರ ಹಲವಾರು ಡ್ಯಾನ್ಸ್​ಗಳನ್ನು ನೋಡಿ ಖುಷಿ ಪಟ್ಟವರೇ ಎಲ್ಲ. ಈ ದಂಪತಿಯದ್ದು ರೊಮ್ಯಾನ್ಸ್​ ಜಾಸ್ತಿ ಇರುವ ಕಾರಣ, ಈ ವಯಸ್ಸಿನಲ್ಲಿ ಇವೆಲ್ಲಾ ಅಜ್ಜ-ಅಜ್ಜಿಗೆ ಬೇಕಿತ್ತಾ ಎಂದವರಿಗೇನೂ ಕಮ್ಮಿ ಇಲ್ಲ. ಯಾರೇ ಕೂಗಾಡಲಿ... ಎನ್ನುವ ಹಾಡಿನಂತೆ ಯಾವ ಟ್ರೋಲ್​ಗಳಿಗೂ ಅಂಜದೇ ಇವರು, ತಮ್ಮದೇ ರೀಲ್ಸ್ ಪ್ರಪಂಚದಲ್ಲಿ ಮುಳುಗಿದ್ದು, ಇವರಿಗೆ ಈಗ ದೊಡ್ಡ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

Tap to resize

Latest Videos

ರಾಜಾ ರಾಣಿ ರೀಲೋಡೆಡ್​ಗೆ ಹೇಗೆ ನಡೀತಿದೆ ತಯಾರಿ? ಶೂಟಿಂಗ್​ ಪ್ರೊಮೋ ರಿಲೀಸ್​

ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್ ಪ್ರೊಮೋಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಿಯಾಲಿಟಿ ಷೋ ವೀಕ್ಷಕರು ಈ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾಜಾ ರಾಣಿ ರೀಲೋಡೆಡ್​ ಹೆಸರಿನಲ್ಲಿ ಇದು ಶುರುವಾಗಲಿದೆ. ಈ ರಿಯಾಲಿಟಿ ಷೋಗೆ ಸಂಬಂಧಿಸಿದಂತೆ ಪ್ರತಿದಿನ ಕುತೂಹಲ ಎನ್ನುವ ಪ್ರೊಮೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಇದೇ ಜೂನ್ 8 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. 

ಮೊನ್ನೆ ಹೊಸ ಪ್ರೊಮೋ ಬಿಡುಗಡೆ ಮಾಡಿ ಅದಿತಿ ಪ್ರಭುದೇವ ಅವರ ಆಗಮನದ ಬಗ್ಗೆ ತಿಳಿಸಲಾಗಿತ್ತು.  ಇದರ ಪ್ರೊಮೋ ನೋಡುತ್ತಿದ್ದಂತೆಯೇ ಅಭಿಮಾನಿಗಳು ನಟಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಕಾರಣ, ಎರಡು ತಿಂಗಳ ಹಿಂದಷ್ಟೇ ನಟಿ ಮಗುವಿಗೆ ಜನ್ಮ ನೀಡಿದ್ದಾರೆ. ಹಾಗೆ ನೋಡುವುದಾದರೆ ಈಕೆಯಿನ್ನೂ ಬಾಣಂತಿ. ಆದರೆ ಇದರ ನಡುವೆಯೇ ಶೂಟಿಂಗ್​ಗೆ ಬಂದಿರುವುದು ಹಾಗೂ ರಿಯಾಲಿಟಿ ಷೋನಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನಟಿಯ ಫ್ಯಾನ್ಸ್​ ಮುನಿಸು ತೋರಿದ್ದರು. ಮಗುವಿಗೆ ಈ ಸಂದರ್ಭದಲ್ಲಿ ಅಮ್ಮನ ಅವಶ್ಯಕತೆ ಇರುತ್ತದೆ. ರಿಯಾಲಿಟಿ ಷೋಗಳ ಶೂಟಿಂಗ್​ ಎಂದರೆ ಅದು ಸುದೀರ್ಘವಾದದ್ದು. ದಿನಪೂರ್ತಿ ಶೂಟಿಂಗ್​ ನಡೆಯುತ್ತದೆ. ಮಗುವನ್ನು ನೋಡಿಕೊಳ್ಳಲು ಅಜ್ಜಿ ಇದ್ದರೂ ಅಮ್ಮನಿಗೆ ಅವಳದ್ದೇ ಆದ ಕೆಲವು ಜವಾಬ್ದಾರಿಗಳು ಇರುತ್ತವೆ. ಅದನ್ನು ಮರೆತು ನೀವು ಇದರಲ್ಲಿ ಇಷ್ಟು ಬೇಗ ಪಾಲ್ಗೊಳ್ಳುವುದು ಯಾಕೋ ಸರಿ ಕಾಣುತ್ತಿಲ್ಲ ಎಂದು ಕಮೆಂಟಿಗರು ಇಂದಿಗೂ ಹೇಳುತ್ತಿದ್ದಾರೆ. 
 

ಗಂಡಿನಿಂದ ಸಪರೇಟ್​ ಆಗಿದ್ದ ಪುಟ್ಟಕ್ಕನ ಮಕ್ಕಳು ರಾಜಿ! ರಿಯಲ್​ ಸ್ಟೋರಿ ಹೇಳಿ ಕಣ್ಣೀರಾದ ಹಂಸ ಪ್ರತಾಪ್​...

click me!