
ಬೆಳಿಗ್ಗೆಯಷ್ಟೇ ತಮಾಷೆಯ ಟಾಸ್ಕ್‌ನಲ್ಲಿ ನಕ್ಕು ನಲಿದಿದ್ದ ಬಿಗ್‌ಬಾಸ್ ಸ್ಪರ್ಧಿಗಳ ಮುಖದಲ್ಲಿ ನಾಮಿನೇಷನ್ ಹೀಟ್ ಎದ್ದು ಕಾಣುತ್ತಿದೆ. ಅದರ ಒಂದು ಝಲಕ್, JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿದೆ. ‘ವಿಶೇಷ ಅಧಿಕಾರದ ಅಂಗವಾಗಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್ ಅವರಿಗಷ್ಟೇ ಇರುತ್ತದೆ’ ಎಂದು ಬಿಗ್‌ಬಾಸ್ ಹೇಳಿದ್ದಾರೆ. ವಿಶೇಷ ಅಧಿಕಾರದ ಆಸನದ ಮೇಲೆ ಸ್ಟೈಲಿಶ್ ಆಗಿ ಕೂತಿರುವ ಸ್ನೇಹಿತ್ ಅವರ ಎದುರು ಮನೆಯ ಸದಸ್ಯರು, ತಮ್ಮನ್ನು ಸೇವ್ ಮಾಡಿ ಎಂದು ಸ್ನೇಹಿತ್ ಅವರಿಗೆ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
ತನಿಷಾ ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ. ವರ್ತೂರ್ ಮಾತಿನಿಂದ ಖುಷಿಯಾಗಿ ನಮ್ರತಾ ಕೇಕೆ ಹಾಕಿದ್ದರೆ, ತನಿಷಾಗೆ ಶಾಕ್ ಆಗಿದೆ. ‘ವರ್ತೂರು ಅವರು ಮೊದಲ ದಿನದಿಂದಲೇ ಹೀಗೆ ಮಾತಾಡಿದ್ದರೆ ನಾನು ಒಪ್ಕೋತಾ ಇದ್ದೆ’ ಎಂದು ಕೋಪ ಮಾಡಿಕೊಂಡಿದ್ದಾರೆ.
ಸ್ನೇಹಿತ್ ಕೈಗೆ ಸಿಕ್ಕಿರುವ ವಿಶೇಷ ಅಧಿಕಾರ ಹೇಗೆ ಕೆಲಸ ಮಾಡುತ್ತದೆ? ಯಾರ ನೆತ್ತಿಮೇಲೆ ತೂಗುಗತ್ತಿಯಾಗುತ್ತದೆ? ಯಾರಿಗೆ ಅಭಯಹಸ್ತವಾಗಿ ಬದಲಾಗುತ್ತದೆ? ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಖುಷಿಯಿಂದ ಇದ್ದರೂ ಪ್ರತಿಯಬ್ಬರ ಮನದಲ್ಲೂ ತಾವು ಫೈನಲ್ ವಿನ್ನರ್ ಆಗಬೇಕೆಂಬ ಭಾವನೆ ಮನೆಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿನ್ನರ್ ಯಾರು ಎಂಬುದು ನಿರ್ಧಾರವಾಗಲಿದೆ.
ಸಡನ್ನಾಗಿ ರಜನಿಕಾಂತ್ ಲೈಫ್ ಟರ್ನಿಂಗ್; 25 ವರ್ಷ ಓದದೇ ಇಟ್ಟಿದ್ದ ಪುಸ್ತಕದಲ್ಲಿ ಅಂಥದ್ದೇನಿತ್ತು?
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.