ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸೆನ್ಸೇಷನಲ್ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕವೇ ಹೆಚ್ಚಿನ ಫಾಲೋವರ್ಸ್‌ಗಳನ್ನು ಸಂಪಾದನೆ ಮಾಡಿರುವ ನಿವೇದಿತಾ ಗೌಡ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗಾಗಿ ಒಂದು ಪೋಲ್ ಪೋಸ್ಟ್ ಮಾಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ತಮ್ಮ ಅಭಿಮಾನಿಗಳಿಗಾಗಿ ಒಂದು ಫ್ಯಾನ್ಸ್ ಪೋಲ್ ಹಾಕಿದ್ದರು. ಎರಡು ದಿನಗಳ ಹಿಂದೆ ಪೋಸ್ಟ್ ಮಾಡಿರುವ ಈ ವಿಡಿಯೋದಲ್ಲಿ ನಿವೇದಿತಾ ಗೌಡ ಅಭಿಮಾನಿಗಳಿಗೆ ನೇರವಾಗಿ ಒಂದು ಪ್ರಶ್ನೆಯನ್ನೂ ಕೇಳಿದ್ದರು. ಸಾಮಾನ್ಯವಾಗಿ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ರೀಲ್‌ಗಳಲ್ಲಿ ಸಾಂಪ್ರದಾಯಿಕವಾಗಿಯೂ ಮಾಡರ್ನ್ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವ ಅವರ ವಿಡಿಯೋ ಕೊಂಚ ಮಟ್ಟಿಗೆ ಹೆಚ್ಚಿನ ವೀವ್ಸ್ ದಾಖಲಿಸಿದರೆ, ಸೀರೆ ಉಟ್ಟಿಕೊಂಡಿರುವ ವಿಡಿಯೋದಲ್ಲೂ ಕೂಡ ಅವರು ಮುದ್ದಾಗಿ ಕಾಣಿಸುತ್ತಾರೆ. ಇದೇ ವಿಚಾರವನ್ನು ಅವರು ಅಭಿಮಾನಿಗಳಿಂದಲೇ ಕೇಳಲು ಮುಂದಾಗಿದ್ದಾರೆ. ನಾನು ವಿಡಿಯೋಗಳಲ್ಲಿ ಸ್ಯಾರಿ ಉಟ್ಕೊಂಡು ಕಾಣಿಸಿಕೊಂಡ್ರೆ ಚಂದಾನಾ? ಅಥವಾ ಚಡ್ಡಿಯಲ್ಲಿ ಕಾಣಿಸಿಕೊಂಡ್ರೆ ಚಂದನಾ? ಎಂದು ಪೋಲ್ ಹಾಕಿ ಕೇಳಿದ್ದಾರೆ. ಅದಕ್ಕೆ ಹೆಚ್ಚಿನ ಅಭಿಮಾನಿಗಳು ನೀವು ಚಡ್ಡಿ ಹಾಕೊಂಡು ವಿಡಿಯೋ ಮಾಡಿದ್ರೆ ಚೆನ್ನ ಎಂದು ಹೇಳಿದ್ದಾರೆ. ಸೀರೆ ಹಾಕಿಕೊಂಡು ವಿಡಿಯೋ ಮಾಡುವಂತೆ ಶೇ. 48ರಷ್ಟು ಮಂದಿ ವೋಟ್ ಮಾಡಿದ್ದಾರೆ. ನಿವೇದಿತಾ ಗೌಡ ಅವರ ಪೋಲ್‌ಗೆ ಒಟ್ಟು 10 ಸಾವಿರಕ್ಕೂ ಅಧಿಕ ಮತಗಳು ಬಂದಿವೆ.
ಇನ್ನು ನಿವೇದಿತಾ ಗೌಡ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಹೆಚ್ಚಿನ ಕಾಮೆಂಟ್‌ಗಳು ಚಂದನ್ ಶೆಟ್ಟಿಯ ಕುರಿತಾಗಿಯೇ ಇದೆ. ಯಾವಾಗ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ವಿಚ್ಛೇದನ ಪಡೆದುಕೊಮಡು ಬೇರೆಬೇರೆಯಾದರೂ ಅಂದಿನಿಂದ ನಿವೇದಿತಾ ಗೌಡ ಪೋಸ್ಟ್‌ಗಳಲ್ಲಿ ಚಂದನ್ ಶೆಟ್ಟಿ ಅವರ ಕುರಿತಾಗಿಯೇ ಹೆಚ್ಚಿನ ಕಾಮೆಂಟ್‌ಗಳು ಬರುತ್ತಿವೆ.
'ಫಾಲೋ ಮತ್ತು ಲೈಕ್‌ಗೊಸ್ಕರ ಕಿತ್ತುಹೋದ ಬಟ್ಟೆ ಹಾಕಿಕೊಂಡು ರೀಲ್ಸ್ ಮಾಡೊ ಹೆಣ್ಣು ಮಕ್ಕಳಿಗಿಂತ 2024 ರ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಮನು ಬಾಕರ್ ಅವರಿಗೆ ನನ್ನ ನಮನ.. ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಿಂತ ಸಂಸ್ಕಾರ ಅಗತ್ಯವಿದೆ..' ಎಂದು ಒಬ್ಬರು ಬರೆದಿದ್ದಾರೆ. 'ಮದ್ವೆ ಆದ್ಮೇಲೆ ಹೋಗ್ಲಿ ಡಿವೋರ್ಸ್ ಆದ್ಮೇಲಾದ್ರು ಬುದ್ಧಿ ಕಲಿರಿ ಅಕ್ಕಾರ...' ಎಂದು ಮತ್ತೊಬ್ಬರು ಬರೆದಿದ್ದಾರೆ. 'ನಮ್ ಚಂದನ್ ಶೆಟ್ರು ಮನೆ ಹಾಳ್ ಮಾಡಿ ಹೋದವ್ರು..' ಎಂದು ಚಂದನ್ ಶೆಟ್ಟಿ ಅಭಿಮಾನಿಯೊಬ್ಬರು ಬರೆದಿದ್ದಾರೆ.
'ಲೇ ಹುಡುಗಿ ನಿಂಗೇನು ಅನ್ಸಲ್ವಾ.... ಅವ್ನ ಬಿಟ್ಟು ಇವ್ನ ಬಿಟ್ಟು ತೂ ನಿನ್ ಜನ್ಮಕ್ಕೆ.. ' 'ಬರಿ ನಿನ್ನ ಹೆಸರು ನಿವೇದಿತಾ ಅಂತ ಇಟ್ಟುಕೋ ಗೌಡ ಅನ್ನೋದನ್ನು ತೆಗೆದು ಹಾಕು..' ' ಕಾಮೆಂಟ್ಸ್ ನೋಡಿನ್ನೇ ಚಂದನ್ ಶೆಟ್ಟಿ ಡಿವರ್ಸ್ ಕೊಟ್ಟಿರೋದು ಅನ್ಸುತ್ತೆ..' ಎನ್ನುವ ಕಾಮೆಂಟ್‌ಗಳು ಬಂದಿವೆ.
'ನಿಮ್ಮ ಮಾತಿನಿಂದ ಯಾರಿಗಾದ್ರೂ ನೋಯಿಸಿದ್ದೀರಾ..' ನಿವೇದಿತಾ ಗೌಡ ಈ ಪ್ರಶ್ನೆ ಕೇಳಿದ್ಯಾಕೆ?
ನಮ್ರತಾ ಎನ್ನುವವರು, 'ಡಿವೋರ್ಸ್ ಮಾಡಿಕೊಳ್ಳಬೇಡಿ... ನೀವುಬ್ಬರೂ ಮತ್ತೆ ಒಂದಾದರೆ ಇಡೀ ಕರ್ನಾಟಕ ಖುಷಿ ಪಡುತ್ತದೆ..' ಎಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಂದಾಗುವಂತೆ ಹಾರೈಸಿದ್ದಾರೆ. 'ನಿನ್ ಹಾರ್ಟ್ ಚಿಟ್ಟೆ ತರ ಅಂತ ಗೊತ್ತು ಬಿಡು ಮತ್ತೆ ಇನ್ನ್ಯಾರ್ ಮೇಲೆ ಹಾರಿ ಕೂರುತ್ತೋ ಗೊತ್ತಿಲ್ಲ..' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಕಾಮೆಂಟ್ ಮಾಡೋರು ಶೆಡ್ ನೆನಪು ಮಾಡ್ಕೋಬೇಕಾಗಿ ವಿನಂತಿ..' ಎಂದು ದರ್ಶನ್ ಕೇಸ್ ವಿಚಾರವನ್ನು ಇಲ್ಲಿ ನೆನಪು ಮಾಡಿಕೊಂಡಿದ್ದಾರೆ. ಮತ್ತೆ ಯಾರನ್ನು ನೋಡಿದ್ದೀಯ ನೀನು ಅವನ ಕೈಗೆ ಸಿಗದ ಹಾಗೆ ಚಿಟ್ಟೆಯಾಗಿ ಮತ್ತೆ ಹಾರೋದು.. ಡೈವರ್ಸ್ ರಾಣಿ' ಎಂದು ಇನ್ನೊಬ್ಬರು ನಿವೇದಿತಾ ಗೌಡ ವಿಡಿಯೋಗೆ ಬೈದಿದ್ದಾರೆ.
'ಎರಡನೇ ಮದುವೆಗೆ ರೆಡಿನಾ..?' ಡಿವೋರ್ಸ್ ಬಳಿಕ ಬಾರ್ಬಿ ಡಾಲ್ ಆದ ನಿವೇದಿತಾ ಗೌಡಗೆ ಫ್ಯಾನ್ಸ್ ಪ್ರಶ್ನೆ!