ಅಬ್ಬಬ್ಬಾ ಸೊಂಟ ಬಳುಕಿಸಿ ಮೋಡಿ ಮಾಡೋ ಬಿಗ್​ಬಾಸ್​ ಬೆಡಗಿ ನಿವೇದಿತಾ ಇಷ್ಟು ಚೆಂದ ಹಾಡ್ತಾರಾ?

Published : Dec 29, 2023, 10:31 PM IST
ಅಬ್ಬಬ್ಬಾ ಸೊಂಟ ಬಳುಕಿಸಿ ಮೋಡಿ ಮಾಡೋ ಬಿಗ್​ಬಾಸ್​ ಬೆಡಗಿ ನಿವೇದಿತಾ ಇಷ್ಟು ಚೆಂದ ಹಾಡ್ತಾರಾ?

ಸಾರಾಂಶ

ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ತಮಿಳು ಹಾಡನ್ನು ಹಾಡಿ ಅದನ್ನು ಶೇರ್​ಮಾಡಿದ್ದಾರೆ. ಇದನ್ನು ಕೇಳಿ ವ್ಹಾರೆವ್ಹಾ ಅನ್ನುತ್ತಿದ್ದಾರೆ ಫ್ಯಾನ್ಸ್​.   

ಸದ್ಯ  ಸೋಷಿಯಲ್​ ಮೀಡಿಯಾದಲ್ಲಿಯೇ ಹೆಚ್ಚು ಸದ್ದು ಮಾಡುತ್ತಿರುವ ನಟಿಯರ ಪೈಕಿ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಒಬ್ಬರು. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.      ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇಷ್ಟು ದಿನಗಳವರೆಗೆ ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡುತ್ತಿದ್ದ ನಿವ್ವಿ ಇದೀಗ ಸಹೋದರನ ಜೊತೆ ಸೇರಿ ಹಾಡು ಹೇಳಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದನ್ನು ಕೇಳಿ ನಿವೇದಿತಾಗೆ ಫ್ಯಾನ್ಸ್​ ಇನ್ನಷ್ಟು ಹೆಚ್ಚಾಗಿದ್ದಾರೆ. ಯಾವುದೇ ಡ್ರೆಸ್​ ಹಾಕಿದರೂ ಸಕತ್​ ಕ್ಯೂಟ್​ ಆಗಿ ಕಾಣಿಸೋ ನಿವೇದಿತಾ ಅವರು ಇದೀಗ ಹಾಡು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದೆ. ತಮಿಳಿನ ಹಾಡಿಗೆ ಸಕತ್​ ಧ್ವನಿ ನೀಡಿದ್ದಾರೆ  ನಿವೇದಿತಾ. ಸಹೋದರ ಮತ್ತು ನಾನು ಸಿಂಗರ್​ ಅಲ್ಲ, ಸುಮ್ಮನೇ ಈ ವಿಡಿಯೋ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೂ ಇವರ ಮಧುರ ಕಂಠಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ನನ್ನ ಹೊಸ ಹೇರ್​ ಕಲರ್​ ನೋಡಿದ್ರಾ ಅಂತ ನಿವೇದಿತಾ ಕೇಳಿದ್ರೆ ನೋಡಿದ್ದೇ ಬೇರೆ ಅನ್ನೋದಾ ಟ್ರೋಲಿಗರು!

ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

 ಸದಾ ಇಂಗ್ಲಿಷ್​ ಹಾಡಿನಿಂದಲೇ ರೀಲ್ಸ್​ ಮಾಡ್ತಿರೋ ನಟಿಗೆ ಕನ್ನಡದಲ್ಲಿ ಡ್ಯಾನ್ಸ್​ ಮಾಡಿ ಎಂದು ಹೇಳುತ್ತಿದ್ದರೂ ಇಂಗ್ಲಿಷ್​ ಹಾಡನ್ನೇ ಆಯ್ಕೆ ಮಾಡಿಕೊಳ್ಳುವುದು ನಿಂತಿಲ್ಲ. ಹಿಂದೊಮ್ಮೆ ಉದ್ದ ಕೂದಲು ಹೊಂದಿದ್ದ ನಟಿ, ಈಗ ಕೂದಲು ಕಟ್​ ಮಾಡಿಕೊಂಡು ಫ್ಯಾನ್ಸ್​ಗೆ ಬೇಸರ ತರಿಸುವುದು ಇದೆ. ಇದರ ನಡುವೆಯೇ ಇದೀಗ, DJ DIGI DIGI JAM BAM X POKE POKEMON ಹಾಡಿಗೆ ಡ್ಯಾನ್ಸ್​ ಮಾಡಿದ್ದರು. ಇದರಲ್ಲಿ ಅವರು ನನ್ನ ಹೊಸ ಹೇರ್​ ಕಲರ್​ ನೋಡಿರುವಿರಾ ಎಂದು ಕ್ಯಾಪ್ಷನ್​ ನೀಡಿದ್ದರು. ಅದರಕ್ಕೆ ಹಲವಾರು ಮಂದಿ ಬ್ಯೂಟಿಫುಲ್​ ಎಂದು ಹೇಳಿದ್ದರೆ, ಇನ್ನು ಕೆಲವರು ಹಾರ್ಟ್​ ಇಮೋಜಿ ಹಾಕಿದ್ದಾರೆ. ಆದರೆ ಮತ್ತೆ ಕೆಲವರು ನಟಿಯ ಕಾಲೆಳೆದಿದ್ದು, ಈ ರೀತಿಯ ಡ್ರೆಸ್​ ಮಾಡಿಕೊಂಡು ತಲೆಗೂದಲು ನೋಡಿ ಎಂದ್ರೆ ಹೇಗೆ? ಬೇರೆಯದ್ದೇ ನೋಡೋ ಹಾಗಿದೆಯಲ್ಲ ಎಂದು ಹೇಳಿದ್ದರು.ರನಮಗೆ ನಿಮ್ಮ ಹೇರ್​ ಕಲರ್​ ಕಾಣಿಸ್ಲೇ ಇಲ್ಲ ಎಂದು ಕೆಲವರು ಹೇಳ್ತಿದ್ರೆ, ಅದಕ್ಕೆ ರಿಪ್ಲೈ ಮಾಡಿರುವ ಇನ್ನು ಕೆಲವರು, ನಿಮಗೆ ಕಾಣಿಸ್ತಿರೋದೇ ಬೇರೆ ಅಲ್ವಾ ಅಂತ ತಮಾಷೆ ಮಾಡಿದ್ದರು.  

ಕಾಶ್ಮೀರದಲ್ಲಿ ಸಿಕ್ಕಾಕ್ಕೊಂಡ ಡಾ.ಬ್ರೋ: ಕ್ಯಾಮೆರಾ ಬಂದ್​ ಮಾಡಲ್ಲ, ಕನ್ನಡಿಗರಿಗೆ ತೋರಿಸ್ತೀನಿ ಎಂದು ಓಡಿದ ಗಗನ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್
BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?