ಗೋವಾದಲ್ಲಿ ನಿವೇದಿತಾ ಗೌಡ ಪೋಸ್​, ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ನೆಟ್ಟಿಗರು!

Published : Aug 03, 2023, 04:42 PM IST
ಗೋವಾದಲ್ಲಿ ನಿವೇದಿತಾ ಗೌಡ ಪೋಸ್​, ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ನೆಟ್ಟಿಗರು!

ಸಾರಾಂಶ

ಸ್ಯಾಂಡಲ್​ವುಡ್​ ಕ್ಯೂಟ್​ ಸ್ಟಾರ್ಸ್​ ನಿವೇದಿತಾ ಗೌಡ ಅವರು ಗೋವಾ ಟೂರ್​ನಲ್ಲಿದ್ದು, ಕ್ಯೂಟ್​ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಹೇಳಿದ್ದೇನು?  

ಅಪಾರ ಅಭಿಮಾನಿ ಬಳಗ ಹೊಂದಿರುವ ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಅವರು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ.  ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ,  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಇವರಿಬ್ಬರೂ ಜೊತೆಗಿರುವ ಹಲವಾರು ಫೋಟೋಗಳು ವೈರಲ್​ ಆಗುತ್ತಿವೆ. ಇವರ ಹಾಕುವ ವಿಡಿಯೋ, ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.  ಗಂಡ-ಹೆಂಡತಿ ನಡುವಿನ ರೊಮ್ಯಾನ್ಸ್ ಖುಲ್ಲಂಖುಲ್ಲಾ ಮಾಡುವುದಕ್ಕೆ ಟೀಕೆ ವ್ಯಕ್ತಪಡಿಸುತ್ತಲೇ ಈ ಜೋಡಿಯ ಪಬ್ಲಿಕ್​ ರೊಮ್ಯಾನ್ಸ್​ ಅನ್ನು ಆನಂದಿಸುತ್ತಿರುವವರೇ ಹೆಚ್ಚು. ತಮ್ಮ ಜನಪ್ರಿಯತೆ ಹೆಚ್ಚುತ್ತಿದ್ದಂತೆಯೇ ನಟಿ ಹೆಚ್ಚೆಚ್ಚು ಫೋಟೋ ಶೇರ್​ ಮಾಡುತ್ತಿದ್ದಾರೆ.  ರೀಲ್ಸ್​ಗಳನ್ನು ಮಾಡಿ ಫ್ಯಾನ್ಸ್​ ಗಮನ ಸೆಳೆಯುತ್ತಾರೆ.  ಕಲರ್​ಫುಲ್​  ಫೋಟೋಶೂಟ್​ ಮಾಡಿಸಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.  ಒಳ್ಳೆಯ ಕಮೆಂಟ್ಸ್​ ಮಾಡುವ ನೆಟ್ಟಿಗರಿಗೆ ಥ್ಯಾಂಕ್ಸ್​ ಹೇಳುತ್ತಾ  ಟ್ರೋಲ್​ಗಳಿಗೆ ತಲೆ ಕೆಡಿಸಿಕೊಳ್ಳದವರಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು. 

ಮೊನ್ನೆಯಷ್ಟೇ ಮುಂದಿನ ಪಯಣ ಎಲ್ಲಿಗೆ ಹೇಳಿ ಅಂತ ಏರ್ಪೋರ್ಟಲ್ಲಿ ಡ್ಯಾನ್ಸ್ ಮಾಡಿದ ಫೋಟ್ ಶೇರ್ ಮಾಡಿಕೊಂಡ ನಿವೇದಿತಾ ಗೌಡ ಇದೀಗ ಗೋವಾಗೆ ಹಾರಿದ್ದಾರೆ. ನಿವೇದಿತಾ ಗೋವಾ ಬೋಟಲ್ಲಿ ನಿಂತು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಹ್ಯಾಪಿ ಇವ್ನಿಂಗ್ ಫ್ರರ್ಮ್​ ಗೋವಾ ಎಂದು ಇದಕ್ಕೆ ಕ್ಯಾಪ್ಷನ್​ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕ ಟೂರ್​ನಲ್ಲಿತ್ತು ಈ ಜೋಡಿ. ವಿದೇಶ ಪ್ರಯಾಣದ ಮೂಡ್​ನಲ್ಲಿದ್ದ ನಿವೇದಿತಾ ಹಾಗೂ ಚಂದನ್​ ಅವರು,  ಅಮೆರಿಕದಲ್ಲಿರುವ ಸೇಂಟ್​ ಮೇರಿ ಚರ್ಚ್ ಹಾಗೂ ನಯಾಗರ ಫಾಲ್ಸ್​ ಬಳಿ ರೀಲ್ಸ್ ಮಾಡಿ ಗಮನ ಸೆಳೆದಿದ್ದರು. ಅದರ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ (instagram) ಶೇರ್​ ಮಾಡಿಕೊಂಡಿದ್ದರು. ತುಂತುರು ಮಳೆ ಬೀಳುತ್ತಿರುವಾಗ ಹೀಗೊಂದು ವಾಕಿಂಗ್​ಗೆ ಬಂದಿರುವುದಾಗಿ ನಿವೇದಿತಾ ಬರೆದುಕೊಂಡಿದ್ದರು. ಅಮೆರಿಕದ  ಹವಾಮಾನವನ್ನು ಸಕತ್​ ಎಂಜಾಯ್​ ಮಾಡುತ್ತಿರುವಂತೆ ತೋರುತ್ತಿತ್ತು. ನಯಾಗರ ಫಾಲ್ಸ್​ ಬಳಿಯ ರೀಲ್ಸ್​ ಹಂಚಿಕೊಂಡಾಗ ಫ್ಯಾನ್ಸ್​ ನೀರಿನಲ್ಲಿ ಕರಗೋಯ್ತಾ ಸಕ್ಕರೆ ಬೊಂಬೆ ಎಂದೂ ನಟಿಯ ಕಾಲೆಳೆದಿದ್ದರು.

ಏರ್ಪೋರ್ಟಲ್ಲಿ ನಿವೇದಿತಾ ಗೌಡ ಡ್ಯಾನ್ಸ್, ಕಾಮನ್ ಸೆನ್ಸ್ ಇಲ್ವಾ ಕೇಳಿದ ಫ್ಯಾನ್ಸ್!

ಆದರೆ ಮೊನ್ನೆಯಷ್ಟೇ ನಿರೂಪಕಿ, ನಟಿ ಜಾನ್ವಿ ಜೊತೆ  ನಿವೇದಿತಾ ಗೌಡ ಏರ್​ಪೋರ್ಟ್​ನಲ್ಲಿ  ಡ್ಯಾನ್ಸ್​ ಮಾಡಿ ವಿಡಿಯೋ ಶೇರ್​ ಮಾಡಿಕೊಂಡಿದ್ದರು.  ಇದು ಸಾರ್ವಜನಿಕ ಸ್ಥಳ ಆಗಿರುವ ಕಾರಣ, ಟ್ರೋಲಿಗರು ಬಾಯಿಗೆ ಬಂದ ಹಾಗೆ ಬಯ್ದರು. ಸ್ವಲ್ಪವೂ ಮ್ಯಾನರ್ಸ್​ ಬೇಡ್ವಾ ಎಂದು ಪ್ರಶ್ನಿಸಿದರು. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಪಟ್ಟೆ ಕುಣಿದು ಅಲ್ಲಿದ್ದವರಿಗೆ ಡಿಸ್ಟರ್ಬ್​ ಮಾಡುವುದು ಎಷ್ಟು ಸರಿ, ಕಾಮನ್​ ಸೆನ್ಸ್ ಎನ್ನೋದು ಸ್ವಲ್ಪನಾದ್ರೂ ಬೇಡ್ವಾ ಎಂದಿದ್ದರು. ಆದರೆ ಇದೀಗ ಗೋವಾದಲ್ಲಿ ಡೀಸೆಂಟ್​ ಆಗಿರೋ ಫೋಟೋ ಒಂದಕ್ಕೆ ನಿವೇದಿತಾ ಪೋಸ್​ ಕೊಟ್ಟಿದ್ದಾರೆ. ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಸಹಸ್ರಾರು ಮಂದಿ ಹಾರ್ಟ್​ ಇಮೋಜಿ ಶೇರ್​ ಮಾಡಿಕೊಂಡಿದ್ದಾರೆ. ಕ್ಯೂಟ್​ ಎಂದು ಇನ್ನು ಹಲವರು ಕಮೆಂಟ್​ ಮಾಡುತ್ತಿದ್ದಾರೆ. ಡೀಸೆಂಟ್​ ಲುಕ್​ನಲ್ಲಿದ್ದರೂ ಹಾಟ್​ ಆಗಿ ಕಾಣಿಸೋ ನೀವು ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ಕಮೆಂಟ್​ ಮೂಲಕ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಇಬ್ಬರು ಹಸೆಮಣೆ ಏರಿದ್ದರು. ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1,777 ಪೋಸ್ಟ್​ಗಳನ್ನು ಮಾಡಿದ್ದಾರೆ. ನಿವೇದಿತಾ ಗೌಡಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ. 

ನಯಾಗರ ಫಾಲ್ಸಲ್ಲಿ ನಿವೇದಿತಾ- ಚಂದನ್​ ಭರ್ಜರಿ ಡಾನ್ಸ್​: ಸಕ್ರೆ ಗೊಂಬೆ ಕರಗೋಗ್ತಿಯಾ ಎಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?