ಮಗಳನ್ನೇ ಮೀರಿಸ್ತಿರೋ ಅಮ್ಮ; ತುಂಡುಡುಗೆ ನಿವೇದಿತಾಗೆ, ಸೀರೆಯಲ್ಲಿ 'ಮಾಯಾವಿ ಬೆಡಗಿ' ಎಂದ ತಾಯಿ!

Published : Mar 04, 2025, 12:51 PM ISTUpdated : Mar 04, 2025, 01:00 PM IST
ಮಗಳನ್ನೇ ಮೀರಿಸ್ತಿರೋ ಅಮ್ಮ; ತುಂಡುಡುಗೆ ನಿವೇದಿತಾಗೆ, ಸೀರೆಯಲ್ಲಿ 'ಮಾಯಾವಿ ಬೆಡಗಿ' ಎಂದ ತಾಯಿ!

ಸಾರಾಂಶ

ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಾಯಿ ಹೇಮಾ ರಮೇಶ್ ಅವರ ರೀಲ್ಸ್ ವೈರಲ್ ಆಗಿದೆ. ನಿವೇದಿತಾ ತಾಯಿ ಹೇಮಾ ಅವರ ಸೌಂದರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಮಗಳ ಬಗ್ಗೆ ಗಮನಹರಿಸುವ ಬದಲು ರೀಲ್ಸ್ ಮಾಡುತ್ತಿರುವುದಕ್ಕೆ ಕೆಲವರು ಟೀಕಿಸಿದ್ದಾರೆ. ನಿವೇದಿತಾ ಮತ್ತು ಚಂದನ್ ಶೆಟ್ಟಿ 2020ರಲ್ಲಿ ಮದುವೆಯಾಗಿದ್ದರು. ಸದ್ಯ ನಿವೇದಿತಾ ದೇಹ ಪ್ರದರ್ಶನಕ್ಕೆ ಟೀಕೆ ವ್ಯಕ್ತವಾಗುತ್ತಿದೆ.

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರಂತೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಫೇಮಸ್​. ಡಿವೋರ್ಸ್​ ಬಳಿಕವಂತೂ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ನಿವೇದಿತಾ ಒಂದೆಡೆಯಾದರೆ,  ಸೌಂದರ್ಯದಲ್ಲಿ ಮಗಳಿಗೇ ಸ್ಪರ್ಧೆ ಒಡ್ಡುತ್ತಾ ಇರೋರು ನಿವೇದಿತಾ ಅಮ್ಮ ಹೇಮಾ ರಮೇಶ್​. ಬಿಗ್​ಬಾಸ್​ 5ರ ಸಮಯದಲ್ಲಿ ನಿವೇದಿತಾ ಗೌಡ ಜೊತೆ ಹೇಮಾ ಅವರೂ  ಎಲ್ಲರ ಗಮನ ಸೆಳೆದಿದ್ದರು.  ಇವರು ನೋಡಲು ಕೂಡ ಸುಮಾರಾಗಿ ಒಂದೇ ರೀತಿಯಿದ್ದು  ಅಕ್ಕ ತಂಗಿಯಂತೆ ಕಾಣಿಸುತ್ತಾರೆ. ಮಗಳು ನಿವೇದಿತಾರಂತೆ ತಾಯಿ ಹೇಮಾ  ಕೂಡ  ಸಕತ್​ ಡ್ರೆಸ್ಸಿಂಗ್ ಸೆನ್ಸ್​ ಹೊಂದಿದ್ದಾರೆ. ಅವರೂ ಮೇಕ್​ ಓವರ್​ ಮಾಡಿಕೊಂಡು ಬಿಟ್ಟರಂತೂ ನಿವೇದಿತಾ ಅಮ್ಮ ಎನ್ನಲು ಸಾಧ್ಯವೇ ಇಲ್ಲ. ಅದೇ ರೀತಿ ಮೇಕಪ್​ ಮಾಡಿಕೊಂಡು ಅವರು  ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವುದೂ ಇದೆ.  ನಿವೇದಿತಾ ಅವರ ಮೈ ಕಟ್ಟುನ್ನೇ ತಾಯಿಯೂ ಹೊಂದಿರುವುದರಿಂದ ಮಗಳಿಗೆ ಕಾಪಿಟೇಷನ್​ ನೀಡುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. 


ಇದೀಗ ಹೇಮಾ ಅವರು ರೀಲ್ಸ್​ ಒಂದನ್ನು ಮಾಡಿದ್ದಾರೆ. ಭೂಮಿ 2024ರ ವಿಡಿಯೋ ಆಲ್ಬಂನ ಮಾಯಾವಿ ಮಿನುಗು ನೀನು, ಮುಂಜಾನೆ ಬಿಸಿಲು ನೀನು, ಸಾಲದಿರೋ ಹಾಡು ನೀನು, ಬೇಕೆನಿಸೋ ಸಂಜೆ ನೀನು.. ಹಾಡಿಗೆ ಹೇಮಾ ಅವರು ರೀಲ್ಸ್​ ಮಾಡಿದ್ದಾರೆ. ಕೆಲವರು ಪಾಸಿಟಿವ್​ ಕಮೆಂಟ್​ ಹಾಕುತ್ತಿದ್ದರೆ, ಮತ್ತೆ ಕೆಲವರು ನೆಗೆಟಿವ್​ ಹಾಕುತ್ತಿದ್ದಾರೆ.  ಮಗಳ ಲೈಫ್​ ಸರಿ ಮಾಡೋದು ಬಿಟ್ಟು ನೀವೇ ಹೀಗೆ ರೀಲ್ಸ್  ಮಾಡ್ತಾ ಕುಳಿತರೆ, ಅಲ್ಲಿ ಮಗಳು ಹೇಗೆ ವೇಷ ಹಾಕಿಕೊಂಡಿರೋದರ ಬಗ್ಗೆ ಗಮನ ಹರಿಸೋದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.  

ಅಮೃತಧಾರೆ ಭೂಮಿಕಾಗೆ ಠಕ್ಕರ್​ ಕೊಟ್ಟ ನಿವೇದಿತಾ ಅಮ್ಮ! ನೀವೇ ಹೀಗಾದ್ರೆ ಮಗಳ ಗತಿಯೇನು ಕೇಳ್ತಿರೋ ನೆಟ್ಟಿಗರು

 
ಇನ್ನು,   ಹೇಮಾ ಅವರ ಪತಿ ಅಂದರೆ ನಿವೇದಿತಾ ಅವರ ತಂದೆ ಉದ್ಯಮಿಯಾಗಿದ್ದು ಇವರ ಹೆಸರು ಲಕ್ಷ್ಮಣ್​. ನಿವೇದಿತಾ ಬಾರ್ಬಿ ಡಾಲ್​ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ.  ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.  ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳುವುದಾದರೆ, ಚಂದನ್ ಮತ್ತು ನಿವೇದಿತಾ ಮದುವೆಯಾದದ್ದು  2020ರಲ್ಲಿ 26ರಂದು.  ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.  

ಇನ್ನು ನಿವೇದಿತಾ ಬಗ್ಗಂತೂ ಹೇಳುವುದೇ ಬೇಡ. ಬಾರ್ಬಿ ಡಾಲ್​ ಎಂದೇ ಫೇಮಸ್​ ಆದವರು ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದಾರೆ.  ಸದಾ ರೀಲ್ಸ್​ ಮಾಡುತ್ತಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ  ನಿವೇದಿತಾ ಗೌಡ  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಅವರನ್ನು ಮದುವೆಯಾಗಿ ಲೈಫ್​ ಎಂಜಾಯ್​ ಮಾಡುತ್ತಿರುವ ನಡುವೆಯೇ ಶಾಕ್​  ಕೊಟ್ಟವರು.  ಬಳಕುವ ಬಳ್ಳಿಯಂತೆ ಇರುವ ನಿವೇದಿತಾ ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆಯೇ ಎನ್ನುವಷ್ಟರ ಮಟ್ಟಿಗೆ ದೇಹ ಪ್ರದರ್ಶನ ಮಾಡುತ್ತಿದ್ದಾರೆ. ಇದು ವಯಸ್ಸು ಇರುವವರೆಗೆ ಚೆಂದ, ಆಮೇಲೆ ಮಗಳ ಲೈಫ್​ ಏನು ಅಂತ ಗೊತ್ತಿದ್ಯಾ ಎಂದು ಹೇಮಾ ಅವರನ್ನು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ನಿವೇದಿತಾ ಅಂತೂ ಯಾವ ಕಮೆಂಟ್​ಗೂ ಡೋಂಟ್​ ಕೇರ್​. ಆಕೆಯಂತೆಯೇ ಅಮ್ಮನೂ ಕೂಡ. ಅಷ್ಟಕ್ಕೂ ನೂಲಿನಂತೆಯೇ ಸೀರೆ ಅಲ್ಲವೆ ಎನ್ನುವುದು ಕೆಲವರ ಪ್ರಶ್ನೆ. 
 

ಶೆಡ್​ಗೆ ಬರಬೇಕಿಲ್ಲ.. ಇಲ್ಲೇ ಫಿನಿಷ್! ಕೆಟ್ಟ ಕಮೆಂಟ್​ ಮಾಡೋರಿಗೆ ನಿವೇದಿತಾ ಕೊಟ್ರಾ ಎಚ್ಚರಿಕೆ- ಹಾಗಂತ ಬಿಡ್ತಾರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!