ಕಿರುತೆರೆ ನಟಿ ನಿವೇದಿತಾ ಗೌಡ ತಮ್ಮ ಕೆಲವು ಸೆಲೆಬ್ರಿಟಿ ಸ್ನೇಹಿತೆಯರ ಜೊತೆಗೆ ಸಮುದ್ರದ ತೀರದ ಬಂಡೆಯ ಮೇಲೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಬರುತ್ತಿವೆ.
ಅಪಾರ ಅಭಿಮಾನಿ ಬಳಗ ಹೊಂದಿರುವ ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಅವರು ಸಾಮಾಜಿಕ ಜಾಲತಾಣದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಚಂದನವನದಲ್ಲಿ ನಟಿ ನಿವೇದಿತಾ ಗೌಡ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಅವರದ್ದು ಕ್ಯೂಟ್ ಜೋಡಿ. ಬಿಗ್ ಬಾಸ್ ಶೋನಲ್ಲಿ ಪರಿಚಯವಾದ ಅವರು ನಂತರ ಪರಸ್ಪರ ಪ್ರೀತಿಸಿ ಮದುವೆಯಾದರು. ಹಲವು ಸಲ ಈ ಜೋಡಿ ಕಲರ್ಫುಲ್ ಆಗಿ ಫೋಟೋಶೂಟ್ ಮಾಡಿಸಿ ಗಮನ ಸೆಳೆಯುತ್ತಾರೆ. ಈಗ ಹೆಚ್ಚಾಗಿ ನಿವೇದಿತಾ ಅವರು ಸಿಂಗಲ್ ಆಗಿಯೇ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ, ಹೆಚ್ಚಿನ ಸಲ ಟ್ರೋಲ್ ಆಗುವುದೂ ಇದೆ. ಹಾಗಂತ ಟ್ರೋಲ್ಗಳಿಗೆ ನಿವೇದಿತಾ ಗೌಡ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಯಾರು ಎಷ್ಟೇ ಏನೇ ಹೇಳಿದರೂ ರೀಲ್ಸ್ಗಳನ್ನು ಮಾಡಿ ಫ್ಯಾನ್ಸ್ ಗಮನ ಸೆಳೆಯುತ್ತಾರೆ. ಕಲರ್ಫುಲ್ ಫೋಟೋಶೂಟ್ ಮಾಡಿಸಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಒಳ್ಳೆಯ ಕಮೆಂಟ್ಸ್ ಮಾಡುವ ನೆಟ್ಟಿಗರಿಗೆ ಥ್ಯಾಂಕ್ಸ್ ಹೇಳುತ್ತಾ ಟ್ರೋಲ್ಗಳಿಗೆ ತಲೆ ಕೆಡಿಸಿಕೊಳ್ಳದವರಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು.
ಇದೀಗ ಸೆಲೆಬ್ರಿಟಿಗಳ ದೊಡ್ಡ ಬಳಗದ ಜೊತೆ ಸಮುದ್ರದ ನಡುವಿನ ಬಂಡೆಗಲ್ಲಿನ ಮೇಲೆ ನಿವೇದಿತಾ ಗೌಡ ಫೋಟೋಗೆ ಪೋಸ್ ಕೊಟ್ಟಿದ್ದು, ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರೂಪಕಿ ಜಾನ್ವಿ ರಾಯಲಾ, ಸೂಪರ್ ಜೋಡಿ ರಿಯಾಲಿಟಿ ಷೋ ಖ್ಯಾತಿಯ ಅಕ್ಷಿತಾ ರಜತ್, ಸೃಜನ್ ಲೋಕೇಶ್ ಅವರ ಪತ್ನಿ ಗ್ರೀಷ್ಮಾ, ರಾಜಾ-ರಾಣಿ-2 ರಿಯಾಲಿಟಿ ಷೋ ಖ್ಯಾತಿಯ ಶಾಲಿನಿ ಧನರಾಜ್ ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಈ ಫೋಟೋದಲ್ಲಿ ನೋಡಬಹುದು. ಎಲ್ಲರೂ ವಿನ್ನಿಂಗ್ ಸೈನ್ನೊಂದಿಗೆ ಪೋಸ್ ಕೊಟ್ಟಿದ್ದರೆ, ನಿವೇದಿತಾ ಸ್ವಲ್ಪ ಡಿಫರೆಂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ಮಾಮೂಲಿನಂತೆ ನಿವೇದಿತಾ ಅವರ ಕ್ಯೂಟ್ನೆಸ್ಗೆ ಹಾರ್ಟ್ ಎಮೋಜಿಗಳಿಂದ ಕಮೆಂಟ್ಗಳ ಸುರಿಮಳೆಯಾಗುತ್ತಿದ್ದರೆ, ಹಲವರು ಇದಕ್ಕೆ ಚಡ್ಡಿ ಗ್ಯಾಂಗ್ ಎಂದು ಕರೆದಿದ್ದಾರೆ. ಇದರಲ್ಲಿ ಬಹುತೇಕ ಸೆಲೆಬ್ರಿಟಿಗಳು ಷಾರ್ಟ್ಸ್ಗಳನ್ನು ಧರಿಸಿದ್ದರಿಂದ ಟ್ರೋಲಿಗರು ಚಡ್ಡಿ ಗ್ಯಾಂಗ್ ಎಂದು ಕರೆಯುತ್ತಿದ್ದಾರೆ. ಇನ್ನು ಕೆಲವರು ಚಡ್ಡಿ ದೋಸ್ತ್ಗಳು ಎಂದೂ ಹೇಳುತ್ತಿದ್ದಾರೆ.
ಗೋವಾದಲ್ಲಿ ನಿವೇದಿತಾ ಗೌಡ ಪೋಸ್, ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ನೆಟ್ಟಿಗರು!
ಕೆಲ ದಿನಗಳ ಹಿಂದಷ್ಟೇ ನಿವೇದಿತಾ ಗೌಡ ಅವರು, ನಿರೂಪಕಿ, ನಟಿ ಜಾನ್ವಿ (Janvi) ಜೊತೆ ಏರ್ಪೋರ್ಟ್ನಲ್ಲಿ ಡ್ಯಾನ್ಸ್ ಮಾಡಿ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಇದು ಸಾರ್ವಜನಿಕ ಸ್ಥಳ ಆಗಿರುವ ಕಾರಣ, ಟ್ರೋಲಿಗರು ಬಾಯಿಗೆ ಬಂದ ಹಾಗೆ ಬಯ್ದರು. ಸ್ವಲ್ಪವೂ ಮ್ಯಾನರ್ಸ್ ಬೇಡ್ವಾ ಎಂದು ಪ್ರಶ್ನಿಸಿದರು. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಪಟ್ಟೆ ಕುಣಿದು ಅಲ್ಲಿದ್ದವರಿಗೆ ಡಿಸ್ಟರ್ಬ್ ಮಾಡುವುದು ಎಷ್ಟು ಸರಿ, ಕಾಮನ್ ಸೆನ್ಸ್ ಎನ್ನೋದು ಸ್ವಲ್ಪನಾದ್ರೂ ಬೇಡ್ವಾ ಎಂದಿದ್ದರು. ಅದಾದ ಬಳಿಕ ಗೋವಾದಲ್ಲಿ ಡೀಸೆಂಟ್ ಆಗಿರೋ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಸಹಸ್ರಾರು ಮಂದಿ ಹಾರ್ಟ್ ಇಮೋಜಿ ಶೇರ್ ಮಾಡಿಕೊಂಡಿದ್ದರು. ಡೀಸೆಂಟ್ ಲುಕ್ನಲ್ಲಿದ್ದರೂ ಹಾಟ್ ಆಗಿ ಕಾಣಿಸೋ ನೀವು ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ಕಮೆಂಟ್ ಮೂಲಕ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದರು.
ಕಳೆದ ತಿಂಗಳಷ್ಟೇ ತಮ್ಮ ಹಿಂದಿನ ಘಟನೆಯೊಂದನ್ನು ಮೆಲುಕು ಹಾಕಿ, ತಾವು ಸಾಯುವ ದಿನ ಹತ್ತಿರದಲ್ಲಿ ಇದ್ದುಕೊಂಡಿದ್ದ ಬಗ್ಗೆ ತಿಳಿಸಿದ್ದರು. 'ಮೈಸೂರಿನಲ್ಲಿ ಒಮ್ಮೆ ನಾನು ಮ್ಯಾಜಿಕ್ ಪಾಪ್ (Magic Pop) ಸೇವಿಸಿದೆ. ಆಗ ಅದರ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ ನನ್ನ ಬ್ರೈನ್ ಪಾಪ್ ಆಗುತ್ತಿದೆ ಅಂದುಕೊಂಡು ಫುಲ್ ಹೆದರಿಕೊಂಡು ಸತ್ತು ಹೋಗುವೆ ಅಂದುಕೊಂಡಿದ್ದೆ. ಮ್ಯಾಜಿಕ್ ಪಾಪ್ ಬಗ್ಗೆ ಅವರಿಗೆ ಹೇಳಿರಲಿಲ್ಲ. ಆದರೆ ಅಂದು ನನ್ನ ಲಾಸ್ಟ್ ದಿನ ಎಂದು ಎಂಜಾಯ್ ಮಾಡಿಕೊಂಡು ಖುಷಿಯಾಗಿದ್ದೆ. ಎರಡು ದಿನಗಳ ನಂತರ ಅದು ಚಾಕೋಲೇಟ್ ಎಂದು ತಿಳಿಯಿತ್ತು' ಎಂದು ನಿವೇದಿತಾ ಹೇಳಿದ್ದರು. ಹೀಗೆ ತಾವು ಸಾಯುವ ಭಯದಲ್ಲಿದ್ದ ಬಗ್ಗೆ ಹೇಳಿದ್ದರು.
ಸಾಯುವ ಭಯದ ಮಾತನಾಡಿ ಅಮೆರಿಕಕ್ಕೆ ಹಾರಿದ ನಟಿ ನಿವೇದಿತಾ ಗೌಡ!