ತನಿಷಾ ಹೊಟೆಲ್‌ಗೆ ಬಂದ್ರು ವರ್ತೂರು ಸಂತೋಷ್; ತಿಂಡಿ ತಿಂದ್ರು, ಬಳಿಕ ಏನಂದ್ರು ನೋಡಿ..!

Published : Feb 02, 2024, 05:56 PM ISTUpdated : Feb 03, 2024, 03:55 PM IST
ತನಿಷಾ ಹೊಟೆಲ್‌ಗೆ ಬಂದ್ರು ವರ್ತೂರು ಸಂತೋಷ್; ತಿಂಡಿ ತಿಂದ್ರು, ಬಳಿಕ ಏನಂದ್ರು ನೋಡಿ..!

ಸಾರಾಂಶ

ಬಿಗ್ ಬಾಸ್ ಮನೆಯಿಂದ ಹೊರಬರುವ ವೇಳೆ ತನಿಷಾ ಅಲ್ಲಿದ್ದವರಿಗೆ ಬೇಸರ ಮಿಶ್ರಿತ ಕೋಪದಲ್ಲಿ 'ನಿಮ್ಗೆಲ್ಲಾ ನನ್ನ ಧ್ವನಿ ಇರಿಟೇಟ್ ಆಗ್ತಿತ್ತು ಅಲ್ವಾ? ಇನ್ಮುಂದೆ ಈ ಮನೆಯಲ್ಲಿ ನಿಮ್ಗೆ ನನ್ನ ಧ್ವನಿ ಕೇಳಿಸಲ್ಲಾ' ಎಂದು ಕಣ್ಣೀರು ಸುರಿಸುತ್ತಾ ಹೇಳಿ ಬಂದಿದ್ದರು...

ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ಅವರಿಬ್ಬರೂ ಬೆಸ್ಟ್ ಫ್ರಂಡ್ಸ್‌ ಎಂಬುದು ಬಹುತೇಕ ಎಲ್ಲರಗೂ ಗೊತ್ತು. ಬಿಗ್ ಬಾಸ್ ಕನ್ನಡದ ಸೀಸನ್ 10ರಲ್ಲಿ ತನಿಷಾ ಹಾಗೂ ವರ್ತೂರು ಸಂತೋಷ್ ಇಬ್ಬರೂ ಸ್ಪರ್ಧಿಗಳಾಗಿದ್ದರು. ಅವರಿಬ್ಬರ ಮಧ್ಯೆ ಪ್ರೀತಿ ಅಥವಾ ದ್ವೇಷವಿಲ್ಲದ ಒಂದು ಅರ್ಥಪೂರ್ಣವಾದ ಸ್ನೇಹವಿತ್ತು ಎನ್ನಬಹುದು. ಅಲ್ಲಿದ್ದ ಎಲ್ಲರೂ ಗೆಲ್ಲಲೆಂದೇ ಹೊರಟಿದ್ದರೂ, ತನಿಷಾ ಮತ್ತು ವರ್ತೂರು ಸಂತೋಷ್ ಇಬ್ಬರೂ ಪ್ರತಿಸ್ಪರ್ಧಿಗಳಾಗಿದ್ದರೂ ಅವರಿಬ್ಬರಲ್ಲಿ ಆ ಭಾವನೆ ಹೆಚ್ಚೇನೂ ಇರಲಿಲ್ಲ. ಟಾಸ್ಕ್‌ ಬಂದಾಗ ಇಬ್ಬರೂ ಗೆಲ್ಲಲೆಂದು ಆಡುತ್ತಿದ್ದರೂ ಅದು ಮುಗಿದ ಮೇಲೆ ಫ್ರೆಂಡ್ಸ್ ತರಹ ಇರುತ್ತಿದ್ದರು. 

ತನಿಷಾ ಅವರು ವರ್ತೂರು ಅವರಿಗಿಂತ ಸ್ವಲ್ಪ ದಿನಗಳ ಮೊದಲು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬರುವ ವೇಳೆ ತನಿಷಾ ಅಲ್ಲಿದ್ದವರಿಗೆ ಬೇಸರ ಮಿಶ್ರಿತ ಕೋಪದಲ್ಲಿ 'ನಿಮ್ಗೆಲ್ಲಾ ನನ್ನ ಧ್ವನಿ ಇರಿಟೇಟ್ ಆಗ್ತಿತ್ತು ಅಲ್ವಾ? ಇನ್ಮುಂದೆ ಈ ಮನೆಯಲ್ಲಿ ನಿಮ್ಗೆ ನನ್ನ ಧ್ವನಿ ಕೇಳಿಸಲ್ಲಾ' ಎಂದು ಕಣ್ಣೀರು ಸುರಿಸುತ್ತಾ ಹೇಳಿ ಬಂದಿದ್ದರು. ತನಿಷಾ ಮಾತು ಕೇಳಿ ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಸ್ಟನ್ ಆಗಿ ಕಂಬದಂತೆ ನಿಂತುಬಿಟ್ಟಿದ್ದರು. ಆದರೆ, ತನಿಷಾರ ಆಕ್ರೋಶ ತಾವು ಬಿಗ್ ಬಾಸ್ ಮನೆಯಿಂದ ಅನಿರೀಕ್ಷಿತವಾಗಿ ಹೋರಹೋಗಬೇಕಾಗಿ ಬಂದ ಕ್ಷಣಕ್ಕೆ ಆ ಕ್ಷಣ ಬಂದ ಪ್ರತಿಕ್ರಿಯೆ ಎನ್ನಬೇಕು, ಈಗ ತನಿಷಾ ತಣ್ಣಗಾಗಿದ್ದಾರೆ. 

ಶಿವಣ್ಣ ಜತೆ ಸಿನಿಮಾ ಮಾಡಲು ಸಜ್ಜಾಗಿ ಬಂದ್ರು ಹೇಮಂತ್‌ ರಾವ್; ವೈಶಾಖ್ ಗೌಡ ಕೊಟ್ರು ಗ್ರೀನ್ ಸಿಗ್ನಲ್!

ಬಿಗ್ ಬಾಸ್ ಸೀಸನ್ ಕನ್ನಡ 10 ಮುಗಿದು ಈಗ ಕಾರ್ತಿಕ್ ವಿನ್ನರ್ ಹಾಗೂ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ಕಾರ್ತಿಕ್ ಹಾಗೂ ತನಿಷಾ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಮೇಲೆ ಭೇಟಿಯಾಗಿ ಮಾತುಕತೆ-ಹರಟೆ ನಡೆಸಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಜತೆಗೆ, ವರ್ತೂರು ಸಂತೋಷ್ ತನಿಷಾರ ಹೊಟೆಲ್‌ಗೆ ಭೇಟಿ ಕೊಟ್ಟು, ತನಿಷಾ ಹಾಗೂ ಅಲ್ಲಿದ್ದವರ ಜತೆ ಹರಟೆ ಸಹಿತ ಹಾಯಾಹಿ ಕಾಲ ಕಳೆದು ಬಂದಿದ್ದಾರೆ. 

ಶಂಕರ್‌ನಾಗ್ ಜತೆ ಡ್ಯೂಯೆಟ್ ಹಾಡಿದ್ದ ಗೀತಾ ನಟಿ ಈಗೆಲ್ಲಿದ್ದಾರೆ, ಏನ್ ಮಾಡ್ತಿದಾರೆ; ಅಕ್ಕ ನಿಮ್ಗೆಲ್ಲಾ ಗೊತ್ತಲ್ವಾ..!?

ತನಿಷಾ ಹಾಗು ವರ್ತೂರು ಸಂತೋಷ್ ಭೇಟಿಯ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗತೊಡಗಿವೆ. ತನಿಷಾ ಹೊಟೆಲ್ ತಿಂಡಿ ತಿಂದು, ತುಂಬಾ ಚೆನ್ನಗಿದೆ ಅಂತ ಹೇಳಿ ಬಂದಿದ್ದಾರೆ. ತನಿಷಾ-ವರ್ತೂರು ಸಂತೋಷ್ ಅವರಿಬ್ಬರ ಅಪೂರ್ವ ಸ್ನೇಹಕ್ಕೆ ಸಾಕ್ಷಿಯಾಗಿ ಈ ಬೇಟಿಯೀಗ ಭಾರೀ ವೈರಲ್ ಆಗತೊಡಗಿದೆ. 'ನಮ್ಮಿಬ್ಬರ ಮಧ್ಯೆ ಲವ್ ಇಲ್ಲ, ಮ್ಯಾರೇಜ್ ಮಾಡಿಕೊಳ್ಳವ ಯೋಚನೆಯೂ ಇಲ್ಲ, ನಾವಿಬ್ಬರು ಫ್ರೆಂಡ್ಸ್‌ ಅಷ್ಟೇ' ಎಂದು ಇಬ್ಬರೂ ಬಾಯಿ ಬಿಟ್ಟು ಹೇಳಿದ್ದಾರೆ. ಹೀಗಾಗಿ ಸ್ನೇಹಕ್ಕೆ ಹೊರತಪಡಿಸಿದ ಯಾವುದೇ ಸುದ್ದಿಗೆ ಅವಕಾಶವಿಲ್ಲ  ಎನ್ನಬಹುದು.ಸಿಂಪಲ್ ಸುನಿ-ವಿನಯ್ ರಾಜ್ ಜೋಡಿಗೆ ಸಾಥ್ ಕೊಟ್ಟ ರಮ್ಯಾ; ಸೂಫಿ ಶೈಲಿ ಗೀತೆಯ ಝಲಕ್ ಮೆರಗು!

ಸಂಯುಕ್ತ ಹೆಗಡೆ 'ಕ್ರೀಮ್‌'ಗಾಗಿ ಜೀವವನ್ನೇ ಕೊಟ್ಬಿಟ್ಟಿದಾರೆ, ಅವರಿನ್ನೂ ಎತ್ತರಕ್ಕೆ ಹೋಗ್ತಾರೆ; ಅಗ್ನಿ ಶ್ರೀಧರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!