ಹಿಟ್ಲರ್ ಕಲ್ಯಾಣದ ದುರ್ಗಾ ಪಾತ್ರದಲ್ಲಿ ರಿತು, ಯಾರೀ ಹೊಸ ನಟಿ?

Published : Nov 25, 2023, 02:21 PM IST
ಹಿಟ್ಲರ್ ಕಲ್ಯಾಣದ ದುರ್ಗಾ ಪಾತ್ರದಲ್ಲಿ ರಿತು, ಯಾರೀ ಹೊಸ ನಟಿ?

ಸಾರಾಂಶ

ಹಿಟ್ಲರ್ ಕಲ್ಯಾಣ ಸೀರಿಯಲ್‌ನ ಪವರ್‌ಫುಲ್ ದುರ್ಗಾ ಪಾತ್ರದಲ್ಲಿ ಮಿಂಚುತ್ತಿದ್ದ ನಂದಿನಿ ಮೂರ್ತಿ ಬಹಳ ಹಿಂದೆಯೇ ಸೀರಿಯಲ್‌ಗೆ ಗುಡ್ ಬೈ ಹೇಳಿದ್ದರು. ಈಗ ಅವರ ಜಾಗಕ್ಕೊಬ್ಬ ಹೊಸ ನಟಿ ಬಂದಿದ್ದಾರೆ. 

ಜೀ ಕನ್ನಡದ ಜನಪ್ರಿಯ ಸೀರಿಯಲ್ ಹಿಟ್ಲರ್ ಕಲ್ಯಾಣ. ಇದೊಂದು ಸಾಂಸಾರಿಕ ಡ್ರಾಮಾ. ಒಬ್ಬ ಡಿಕ್ಟೇಟರ್‌ನಂತಿರೋ ಮಧ್ಯ ವಯಸ್ಕ ಯಜಮಾನ ಅಭಿರಾಮ್ ಜೈಶಂಕರ್ ಅರ್ಥಾತ್ ಏಜೆ, ಮನಸ್ಸಿಲ್ಲದೇ ಕಟ್ಟಿಕೊಂಡ ಆತನ ಎರಡನೇ ಹೆಂಡತಿ ಚಿಕ್ಕ ವಯಸ್ಸಿನ ಮುಗ್ಧ, ಅತೀ ಒಳ್ಳೆತನದ ಹೆಂಡತಿ ಲೀಲಾ, ಮೂವರು ಸೊಸೆಯರು,, ಇವರ ಸುತ್ತ ಸಾಗುವ ಕಥಾನಕ ಹಿಟ್ಲರ್ ಕಲ್ಯಾಣದ್ದು. ಇದೀಗ ಸೀರಿಯಲ್ ಬೇರೆ ಟರ್ನ್ ತಗೊಂಡಿದ್ದು ವಿಲನ್ ಎಂಟ್ರಿಯಾಗಿದೆ. ಏಜೆಯ ಮೊದಲ ಹೆಂಡತಿಯ ರೂಪ ಹೋಲುವ ಪ್ರಾರ್ಥನಾ ಆತನ ತೀರಿಕೊಂಡ ಹೆಂಡತಿಯಂತೇ ನಟಿಸುತ್ತಾ ಆತ ಜೊತೆಗೆ ಇದ್ದಾಳೆ. ಕೋಟ್ಯಧಿಪತಿ ಏಜೆ ಆಸ್ತಿ ಹೊಡೆಯೋದು ಆಕೆಯ ಪ್ಲಾನ್. ಮನೆಯ ಹಿರಿ ಸೊಸೆ ದುರ್ಗಾ ಲೀಲಾಳ ವಿರುದ್ಧ ಗೇಮ್ ಪ್ಲಾನ್ ಮಾಡಿ ಪ್ರಾರ್ಥನಾಳನ್ನು ಕರೆತಂದು ಟ್ರೈನಿಂಗ್ ಕೊಟ್ಟಿರುತ್ತಾಳೆ. ಆದರೆ ಯಾವಾಗ ಅವಳು ಆಸ್ತಿ ಕಬಳಿಸೋ ಪ್ಲಾನ್ ಮಾಡ್ತಾಳೋ ಆಗ ದುರ್ಗಾ ಪ್ರಾರ್ಥನಾ ವಿರುದ್ಧ ತಿರುಗಿ ಬೀಳುತ್ತಾಳೆ.

ಇದೀಗ ದುರ್ಗಾಳನ್ನು ಪ್ರಾರ್ಥನಾ ಕಿಡ್ನಾಪ್ ಮಾಡಿದ್ದಾಳೆ. ಆದರೆ ಇದು ಕತೆಯಲ್ಲಿ ಬಂದಿದ್ದಲ್ಲ. ಬದಲಿಗೆ ದುರ್ಗಾ ಪಾತ್ರಧಾರಿ ನಂದಿನಿ ಮೂರ್ತಿ ಗರ್ಭಿಣಿಯಾಗಿದ್ದು, ಆಕೆ ಸೀರಿಯಲ್ ತೊರೆದ ಕಾರಣ ಆ ಪಾತ್ರಕ್ಕೆ ಇನ್ನೊಬ್ಬ ಪಾತ್ರಧಾರಿ ಬರುವಷ್ಟು ಕಾಲ ಸೀರಿಯಲ್ ನಿಭಾಯಿಸಲು ಈ ಎಳೆ ತರಲಾಗಿತ್ತು. ಬಹಳ ಕಾಲ ದುರ್ಗಾ ಪಾತ್ರ ಕಾಣದ್ದು ನೋಡಿ ಸೋಷಿಯಲ್ ಮೀಡಿಯಾದಲ್ಲಿ (Social Media) ವೀಕ್ಷಕರು ದುರ್ಗಾ ಬಗ್ಗೆ ಪದೇ ಪದೇ ವಿಚಾರಿಸಲು ಶುರು ಮಾಡಿದ್ದರು. ಅದೊಂದು ಸ್ಟ್ರಾಂಗ್ ಪಾತ್ರ. ಆ ಪಾತ್ರವನ್ನು ಮರಳಿ ತನ್ನಿ ಎಂಬ ಒತ್ತಾಯ ಕೇಳಿ ಬಂದಿತ್ತು. ಇದೀಗ ವೀಕ್ಷಕರ ಕೋರಿಕೆಯಂತೆ ಹೊಸ ದುರ್ಗಾ ಬಂದಿದ್ದಾಳೆ. ವಿಲನ್‌ಗಳ ಕೈಯಲ್ಲಿ ಸಿಲುಕಿದ್ದಾಳೆ. ಇಲ್ಲಿ ಗೇಮ್ ಪ್ಲಾನ್ ಚೇಂಚ್ ಮಾಡಿರೋ ಪ್ರಾರ್ಥನಾ ತಾನೇ ದುರ್ಗಾಳನ್ನ ಉಳಿಸೋ ನಾಟಕ ಮಾಡ್ತಾಳೆ.

ಮದುವೆಯಾಗಿ 3 ತಿಂಗಳಿಗೆ ದೌರ್ಜನ್ಯ,ಹೆಣ್ಣು ಮಗು ಇದ್ದರೂ ಹೊಡೆದ ಪತಿ: ಚೈತ್ರಾ ಹಳ್ಳಿಕೇರಿ ಕಣ್ಣೀರು

ಅಂದ ಹಾಗೆ ದುರ್ಗಾ ಸ್ಥಾನಕ್ಕೆ ಬಂದಿರೋ ಹೊಸ ನಟಿ ರಿತು. ರಿತು ಅವರು 'ಮಂಗಳಗೌರಿ ಮದುವೆ' ಸೇರಿದಂತೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ (serial) ನಟಿಸಿದ್ದಾರೆ. ನಟಿ ರಿತು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದು ಇದೀಗ ದುರ್ಗಾ ಪಾತ್ರಕ್ಕೆ ಪವರ್ ತುಂಬಲು ಬಂದಿದ್ದಾರೆ. ಆದರೆ ಹೊಸ ದುರ್ಗಾಳ ಆಗಮನಕ್ಕೆ ವೀಕ್ಷಕರು ಎಂದಿನಂತೆ ತಕರಾರು ತೆಗೆದಿದ್ದಾರೆ. ದುರ್ಗಾಳಂಥಾ ಸ್ಟ್ರಾಂಗ್ ಪಾತ್ರಕ್ಕೆ ನಂದಿನಿ ಅವರೇ ಸೈ. ನಟನೆಯಲ್ಲಿ (acting) ಅವರನ್ನು ಸರಿಗಟ್ಟುವುದು ಬೇರೆಯವರಿಗೆ ಕಷ್ಟ ಎಂಬ ಮಾತು ಕೇಳಿಬಂದಿದೆ. ಹೊಸ ಪಾತ್ರವನ್ನು (role) ಮಾಡೋದು ಕಷ್ಟ ಅಲ್ಲ. ಆದರೆ ಒಬ್ಬರು ಮಾಡುತ್ತಿದ್ದ ಪಾತ್ರವನ್ನು ಮುಂದುವರಿಸಿಕೊಂಡು ಹೋಗೋದು, ಮೊದಲು ಆ ಪಾತ್ರದಲ್ಲಿ ನಟಿಸುತ್ತಿದ್ದ ಕಲಾವಿದರ ಸ್ಥಾನ ತುಂಬೋದು ನಿಜಕ್ಕೂ ಚಾಲೆಂಜಿಂಗ್. ವೀಕ್ಷಕರು ಆ ಪಾತ್ರದಲ್ಲಿ ಒಬ್ಬ ಕಲಾವಿದರನ್ನು ನೋಡಿರುತ್ತಾರೆ. ಈ ಶಿಫ್ಟ್‌ (shift) ಅನ್ನು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳೋದು ಅವರಿಗೂ ಕಷ್ಟ.

ಇನ್ನೊಂದೆಡೆ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಶೋನಲ್ಲಿ ನಂದಿನಿ ಅವರು ಗರ್ಭಿಣಿಯಾಗಿದ್ದರಿಂದ (pregnant) ಸೀಮಂತ (Baby Shower) ಮಾಡಲಾಗಿತ್ತು. ಆಗಲೇ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿರೋದು ಬಹಿರಂಗ (reveal) ಆಗಿತ್ತು. ನಂದಿನಿ ಮೂರ್ತಿ ಈಗಾಗಲೇ ಹಲವು ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ದೇವಿ', 'ಚಿ ಸೌ ಸಾವಿತ್ರಿ' ಧಾರಾವಾಹಿಯಲ್ಲಿ ನಂದಿನಿ ಮೂರ್ತಿ ಅವರು ನಟಿಸಿದ್ದರು. ಈ ಸೀರಿಯಲ್ ದೊಡ್ಡ ಪಾಪುಲಾರಿಟಿ ಪಡೆದಿತ್ತು. ಆ ನಂತರದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಪ್ರಶಾಂತ್ ಭಾರದ್ವಾಜ್, ವಿನುತಾ ನಟನೆಯ 'ಮಿಲನ' ಧಾರಾವಾಹಿಯಲ್ಲಿ ನಟಿಸಿದ್ದರು. ನಟ ದಿಲೀಪ್ ರಾಜ್ ಅವರು ಈ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸಿದ್ದು, ನಿರ್ಮಾಪಕರೂ ಆಗಿದ್ದಾರೆ.

ತಾಳಿ ಕಟ್ಟಿರೋ ಗಂಡ, ಅದಕ್ಕೆ ಹೊಡ್ದೆ; ಭಾಗ್ಯಗೆ ಕಪಾಳಮೋಕ್ಷ ಮಾಡಿದ ತಾಂಡವ್‌ ಮಾತಿಗೆ ನೆಟ್ಟಿಗರು ಕಿಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!