ಮದುಮಗಳು ಅಕ್ಕಿ ಸೇರು ಒದ್ದು, ಮನೆಯೊಳಗೆ ಬರೋದ್ಯಾಕೆ? ಸಂಬಂಧ, ಸಮೃದ್ಧಿ ಪ್ರತೀಕವೆಂದ ಸೀರಿಯಲ್

By Suvarna News  |  First Published Aug 12, 2023, 12:39 PM IST

ಮದುಮಗಳನ್ನು ಮನೆ ತುಂಬಿಸಿಕೊಳ್ಳುವಾಗ ಅಕ್ಕಿ, ಸೇರು, ಬೆಲ್ಲ ಒದ್ದು ಒಳ ಬರುವ ಮಹತ್ವವೇನು? ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗುವ ನೀನಾದೆ ನಾ ಧಾರಾವಾಹಿ ನಾಯಕಿ ಹೇಳ್ತಾಳೆ ಕೇಳಿ...
 


ಹಿಂದೂ ಸಂಪ್ರದಾಯಕ್ಕೆ (Hindu tradition) ತನ್ನದೇ ಆದ ಪ್ರಾಮುಖ್ಯತೆ ಇದೆ. ಇದರಲ್ಲಿ ಒಂದೊಂದು ಸಂಪ್ರದಾಯಕ್ಕೂ ಒಂದೊಂದು ಮಹತ್ವವಿದ್ದು, ಪ್ರತಿಯೊಂದಕ್ಕೂ ಒಂದೊಂದು ಅರ್ಥವಿದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಸಂಪ್ರದಾಯ, ಶಾಸ್ತ್ರಗಳನ್ನು ಮಾಡಿಕೊಂಡು ಬಂದಿರುವುದು ಇದೆ. ಈಗಿನ ಕಾಲದಲ್ಲಿ ಕೆಲವರು ಈ ಸಂಪ್ರದಾಯವನ್ನು ಕಡೆಗಣಿಸಿ ಎಲ್ಲವೂ ಗೊಡ್ಡು ಸಂಪ್ರದಾಯ ಎಂದು ಕರೆಯುವುದೂ ಉಂಟು.  ಇದರ ಹೊರತಾಗಿಯೂ ಅಲ್ಲಲ್ಲಿ ಕೆಲವೊಂದು ಶಾಸ್ತ್ರ, ಸಂಪ್ರದಾಯಗಳನ್ನು ಚಾಚೂತಪ್ಪದೇ ಪಾಲಿಸಿಕೊಂಡು ಬರಲಾಗುತ್ತಿದೆ.  ಅದರಲ್ಲಿಯೂ ಮದುವೆ ಸಂದರ್ಭದಲ್ಲಿನ ಶಾಸ್ತ್ರಕ್ಕೆ ನಮ್ಮ ಹಿರಿಯರು ಹಲವಾರು ಅರ್ಥಗಳನ್ನು ಕಲ್ಪಿಸಿದ್ದಾರೆ. ಇಂದಿನ ಅದ್ಧೂರಿ ಮದುವೆ, ವಿದೇಶಿಗರಿಂದ ಆಮದು ಮಾಡಿಕೊಂಡ ಆಚರಣೆಗಳಿಂದಾಗಿ ಇವತ್ತಿನ ಹಲ ಯುವಕ-ಯುವತಿಯರು ಅದರ ಮೊರೆ ಹೋಗುತ್ತಿರುವುದು ಸಹಜ. ಆದರೆ ಮದುವೆ ಎನ್ನುವುದು ಜನ್ಮ ಜನ್ಮದ ಅನುಬಂಧ ಎಂದೇ ಪರಿಗಣಿಸಲಾಗುವ ಹಿಂದೂ ಸಂಪ್ರದಾಯದಲ್ಲಿ, ಮದುವೆಯ ಪ್ರತಿಯೊಂದು ಶಾಸ್ತ್ರಗಳಿಗೂ ಅದರದ್ದೇ ಆದ ವಿಶೇಷತೆಗಳನ್ನು ಕಾಣಬಹುದು. ಅದರಲ್ಲಿ ಒಂದು ಹೊಸದಾಗಿ ಮದುವೆಯಾದ ಮದುಮಗಳನ್ನು ಗಂಡನ ಮನೆ ತುಂಬಿಸಿಕೊಳ್ಳುವ ಶಾಸ್ತ್ರ. 

ಅಕ್ಕಿ (Rice), ಸೇರು, ಬೆಲ್ಲ (Jaggery) ಹೊಸಲ ಮೇಲಿಟ್ಟು ಅದನ್ನು ಒದ್ದು ಮನೆತುಂಬಾ ಬೀರುವಂತೆ ಮಾಡಿ ನಂತರ ನವವಧುವನ್ನು ಗಂಡನ ಮನೆಯವರು ಮನೆತುಂಬಿಸಿಕೊಳ್ಳುವ ಸಂಪ್ರದಾಯ (Tradition) ತಲೆತಲಾಂತರಗಳಿಂದಲೂ ಬಂದಿದೆ. ಹಿಂದೂ  ಶಾಸ್ತ್ರದಲ್ಲಿ (Hindu Ritual) ಹೇಳಿರುವಂತೆ ಸೇರಿಗೆ ಕಾರಕನಾದವ ಶನಿ, ಅಕ್ಕಿಗೆ ಕಾರಕನಾದವ ಚಂದ್ರ (Moon) ಹಾಗೂ ಬೆಲ್ಲಕ್ಕೆ ಕಾರಕನಾದವ ಗುರು. ಬೆಲ್ಲ ಅಂದ್ರೆ ಮೃತ್ಯುಂಜಯ. ನವವಧು ಮನೆಗೆ ಬಂದ ಮೇಲೆ ಯಾವುದೇ ಸಾವು (Death) ನೋವು ಸಂಭವಿಸದೆ ಇರಲಿ ಎಂದು ಒಂದು ಕಡೆಯಾದರೆ ಎಲ್ಲರ ಮನಸ್ಸು ಸಿಹಿಯಾಗಿರಲಿ ಎಂಬುದು ಮತ್ತೊಂದು ಭಾವ ಎನ್ನುತ್ತದೆ ಹಿಂದೂ ಪುರಾಣ. ಇದನ್ನೇ ಸುಲಭದಲ್ಲಿ ಅರ್ಥವಾಗುವಂತೆ ವಿವರಿಸಲಾಗಿದೆ ನೀನಾದೆ ನಾ ಧಾರಾವಾಹಿಯಲ್ಲಿ.

Tap to resize

Latest Videos

Megha Shetty: ರಾಯರ ಕುದ್ರೆ ಕತ್ತೆ ಆಗಿದೆ, ಗೌರವ ಕಳ್ಕೋಬೇಡಿ... ಜೊತೆಜೊತೆಯಲಿ 'ಅನು'ಗೆ ಫ್ಯಾನ್ಸ್​ ಕ್ಲಾಸ್​!

ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗುವ ನೀನಾದೆ ನಾ (Neenade Na serial) ಧಾರಾವಾಹಿ ವಿಭಿನ್ನ ಕಥಾಹಂದರ ಹೊಂದಿದ್ದು, ಜನರಿಗೆ ಆತ್ಮೀಯವಾಗುತ್ತಿದೆ. ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನದ ಕಥಾಹಂದವನ್ನು  'ನೀನಾದೆ ನಾ' ಧಾರಾವಾಹಿ ಹೊಂದಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದರೂ ಸಂಸ್ಕಾರ ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಇರುತ್ತಾಳೆ ಈ ಧಾರಾವಾಹಿಯ ನಾಯಕಿ ವೇದಾ. ಇನ್ನು ಕಥಾ ನಾಯಕ ವಿಕ್ರಮ್. ಗುಂಡಾಗಿರಿ ಮಾಡಿಕೊಂಡಿರುವ ಈತನಿಗೆ  ಆಚಾರ-ವಿಚಾರ ಸಂಸ್ಕಾರವಂತೂ ಇಲ್ಲವೇ ಇಲ್ಲ. ಆದರೆ ಅಚಾನಕ್ ಆಗಿ ಒಂದು ದಿನ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್, ವೇದಾಳಿಗೆ ತಾಳಿ ಕಟ್ಟುತ್ತಾನೆ. ಮುಂದೇನಾಗುತ್ತದೆ ಎನ್ನುವ ಕಥಾ ಹಂದರವನ್ನು ಈ ಧಾರಾವಾಹಿ ಹೊಂದಿದೆ. ಮದುವೆಯಾದ ಮೇಲೆ ಗಂಡನ ಮನೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ   ವೇದಾ ಅಕ್ಕಿ, ಸೇರು, ಬೆಲ್ಲದ ಮಹತ್ವವನ್ನು ಸಾರಿದ್ದಾಳೆ. 

ವಿಕ್ರಮ್​ನನ್ನು ಮದುವೆಯಾಗಿ ಬರುವ ವೇದಾಳನ್ನು (Veda) ಮನೆಗೆ ತುಂಬಿಸಿಕೊಳ್ಳುವಾಗ,  ಅಕ್ಕಿ, ಸೇರು, ಬೆಲ್ಲವನ್ನು ಯಾಕೆ  ಹೊಸಲ ಮೇಲೆ ಯಾಕೆ ಇಡ್ತಾರೆ ಗೊತ್ತಾ ಎನ್ನುವ ಪ್ರಶ್ನೆ ಎದುರಾಗುತ್ತದೆ. ಆಗ ಆಕೆ,  ಮನೆಗೆ ಬರುವ ಸೊಸೆಯ ಕಾಲ್ಗುಣದಿಂದ ಗಂಡನ ಮನೆಯಲ್ಲಿ ಸದಾ ದವಸ ಧಾನ್ಯ ತುಂಬಿರಲಿ, ಬೆಲ್ಲದಷ್ಟೇ ಸಿಹಿ ಬಾಂಧವ್ಯವನ್ನು ಆಕೆ ಪತಿಯ ಮನೆಯವರಿಗೂ ನೀಡಲಿ, ಆಕೆಯ ಸಂಬಂಧ ಪತಿಯ ಮನೆಯವರ ಜೊತೆ ಬೆಲ್ಲದಷ್ಟೇ ಸಿಹಿಯಾಗಲಿರಲಿ ಎನ್ನುವ ಪ್ರತೀಕವೇ ಇದು ಎನ್ನುತ್ತಾಳೆ.  ಈ ಮೂಲಕ ಹಿಂದೂ ಸಂಪ್ರದಾಯದ ಬಗ್ಗೆ ಇಷ್ಟು ಚೆನ್ನಾಗಿ ಅರಿತದ್ದಕ್ಕೆ ಶ್ಲಾಘನೆಗೂ ಒಳಗಾಗುತ್ತಾಳೆ. 

ಚಾರಿಗಾಗಿ ಅಮ್ಮನಿಗೇ ಎಳ್ಳು ನೀರು ಬಿಟ್ಟ ಚಾರು, 'ರಾಮಚಾರಿ' ಸೂಪರ್ ಎಂದ ಪ್ರೇಕ್ಷಕರು!

 

click me!