'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ' ಬರೆದವ್ರು ಇವ್ರಂತೆ! ಹಿಟ್ಲರ್​ ಕಲ್ಯಾಣದ ಅಂತರಾ ಹೇಳ್ತಾರೆ ಕೇಳಿ...

Published : Dec 30, 2023, 03:10 PM IST
'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ' ಬರೆದವ್ರು ಇವ್ರಂತೆ! ಹಿಟ್ಲರ್​ ಕಲ್ಯಾಣದ ಅಂತರಾ ಹೇಳ್ತಾರೆ ಕೇಳಿ...

ಸಾರಾಂಶ

'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ' ಬರೆದವರು ಯಾರು ಎಂದು ಹಿಟ್ಲರ್​ ಕಲ್ಯಾಣದ ಅಂತರಾಗೆ ಕೇಳಿದ್ರೆ ಹೀಗೆ ಹೇಳೋದಾ?    

ಬಾಲ್ಯದಲ್ಲಿ ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ ಎಂಬ ಹಾಡು ಓದಿದ ನೆನಪು ಹಲವರಿಗೆ ಇರಬಹುದು. ಈ ಶಿಶು-ಗೀತೆ ಎಂದೆಂದಿಗೂ ಜನಜನಿತವೇ. ವಯಸ್ಸು ಎಷ್ಟೇ ಆದರೂ ಇಂಥ ಕೆಲವು ಹಾಡುಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇಂದಿನ ಮಕ್ಕಳ ಪಠ್ಯಪುಸ್ತಕದಲ್ಲಿ ಹಲವು ಶಿಶುಗೀತೆಗಳು ಕಣ್ಮರೆಯಾಗುತ್ತಿರುವುದು ವಿಷಾದಕರವಾದರೂ ಇಂದಿಗೂ ತಾವು ಬಾಲ್ಯದಲ್ಲಿ ಕಲಿತ ಇಂಥ ಹಾಡುಗಳನ್ನು ಅಜ್ಜಿಯಂದಿರು ಮಕ್ಕಳು, ಮೊಮ್ಮಕ್ಕಳಿಗೆ ಹೇಳಿಕೊಡುವುದು ಉಂಟು.  ಬಣ್ಣದ ತಗಡಿನ ತುತ್ತೂರಿ, ನಮ್ಮ ಮನೆಯಲೊಂದು ಪುಟ್ಟ ಪಾಪ, ಕೂಸು ಮರಿ ಬೇಕೇ? ಕೂಸುಮರಿ ಇಂಥ ಅದೆಷ್ಟೋ ಹಾಡುಗಳು ಮನದಲ್ಲಿ ಹಾಸುಹೊಕ್ಕಾಗಿ ಕುಳಿತುಬಿಡುತ್ತವೆ. ಅಷ್ಟಕ್ಕೂ ಇಂಥ ಶಿಶುಗೀತೆಯನ್ನು ಬರೆದವರು ಯಾರು ಎಂಬ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಅಸಲಿಗೆ ಇದನ್ನು ಬರೆದವರು  ಮಕ್ಕಳ ಮನಸನ್ನು ಅರ್ಥ ಮಾಡಿಕೊಂಡ  ಜಿ.ಪಿ.ರಾಜರತ್ನಂ ಅವರು. 

ಆದರೆ ಇದೀಗ  ಹಿಟ್ಲರ್​ ಕಲ್ಯಾಣದ ಅಂತರಾ ಅವರು 'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ' ಪದ್ಯವನ್ನು ಬರೆದವರು ಯಾರು ಎಂದು ಕೇಳಿದಾಗ ಯೋಗರಾಜ್​ ಭಟ್​ ಅವರ ಹೆಸರನ್ನು ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿರುವ ಅವರು, ಯೋಗರಾಜ್​ ಭಟ್​ ಅವ್ರೇ ತಾನೆ ನಾಯಿ, ಕೋತಿ, ಕರಡಿ ಅಂತೆಲ್ಲಾ ಬರೆಯುವುದು ಎಂದು ತಮಾಷೆಯ ರೀಲ್ಸ್​ ಮಾಡಿದ್ದಾರೆ. ಇವರ ಆ್ಯಕ್ಟಿಂಗ್​ನ ನೆಟ್ಟಿಗರು ಭೇಷ್​ ಭೇಷ್​ ಅನ್ನುತ್ತಿದ್ದರೂ ಈ ರೀತಿ ಒಂದು ಶಿಶುಗೀತೆಯ ಬಗ್ಗೆ ರೀಲ್ಸ್​ ಮಾಡುವುದು ಸರಿಯಲ್ಲ ಎಂದೂ ಹೇಳುತ್ತಿದ್ದಾರೆ. 

ಅಪ್ಪನ ವಯಸ್ಸಿನವ ಜೊತೆ ಮದ್ವೆಯಾಗಿ ಈಗ್ಯಾಕೆ ಮುಖ ಮುಚ್ಕೊತ್ಯಾ? ಅರ್ಬಾಜ್​ ಪತ್ನಿ ಸಕತ್​ ಟ್ರೋಲ್​

ಅಂದಹಾಗೆ ಜಿ.ಪಿ.ರಾಜರತ್ನಂ ಅವರು ಈ ಗೀತೆ ರಚನೆಯ ಮಾಡುವ ಹಿಂದೆಯೂ ಇಂಟರೆಸ್ಟಿಂಗ್​ ಸ್ಟೋರಿ ಇದೆ. ಅದೇನೆಂದರೆ, ರಾಜರತ್ನಂ ಅವರು 30ರ ದಶಕದಲ್ಲಿಯೇ ಎಂ.ವಿ ಪದವಿ ಪಡೆದವರು. ಆದರೆ ಅವರಿಗೆ ಇಷ್ಟವಾಗಿರುವ ಉದ್ದಯೋಗ ಸಿಕ್ಕಿರಲಿಲ್ಲ. ಅಷ್ಟರಲ್ಲಿಯೇ ಶಿಕ್ಷಕರಾಗಿದ್ದ ತಂದೆಯ ಆರೋಗ್ಯ ಕೆಟ್ಟಿದ್ದರಿಂದ ಅವರ ಪರವಾಗಿ ತಾವೇ ಶಿಕ್ಷಕರಾಗಿ ಹೋಗಿದ್ದರು. ಎಲ್ಲವೂ ದೈವಲೀಲೆ ಎನ್ನುತ್ತಾರಲ್ಲ, ಇಲ್ಲಿಯೂ ಹಾಗೆಯೇ ಆಯಿತು. ಅಂದಿನ ಪಠ್ಯದಲ್ಲಿನ ಹಾಡುಗಳನ್ನು ನೋಡಿದ ಜೆಪಿ ಅವರಿಗೆ ಯಾಕೋ ಅದು ಸರಿ ಎನಿಸಲಿಲ್ಲವಂತೆ. ಮಕ್ಕಳಿಗೆ ಇಷ್ಟ ಆಗುವ ಹಾಗೆ ಏನಾದರು ಬರಿಯಬೇಕು ಎನ್ನಿಸತೊಡಗಿತು. 

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸ್ನಾನ ಘಟ್ಟದಲ್ಲಿ  ಕುಳಿತುಕೊಂಡು ಇದರ ಬಗ್ಗೆ ಯೋಚಿಸುತ್ತಲೇ ಅವರ  ಮನದಾಳದಿಂದ ರೂಪುಗೊಂಡ ಪದ್ಯವೇ "ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ". ಇದನ್ನು ಮಕ್ಕಳಿಗೆ ಹೇಳಿದಾಗ ಮಕ್ಕಳೆಲ್ಲಾ ಕುಣಿದು ಕುಪ್ಪಳಿಸಿದರು. ನಂತರ ಮಕ್ಕಳಿಗೆ ಯಾವುದು ಇಷ್ಟ ಎಂದು ಅರಿತ ಅವರು, ಒಂದೊಂದೇ ಶಿಶುಗೀತೆಯನ್ನು ಬರೆಯತೊಡಗಿದರು. ಆಗಲೇ ಮೂಡಿಬಂದದ್ದು ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ ಎನ್ನುವುದು. ನಂತರ ಇವರು ಬರೆದ ಹಾಡುಗಳನ್ನು  ಎ. ವೆಂಕಟ ರಾವ್ ಎಂಬ ಪುಸ್ತಕ ಮಾರುವ, ಮುದ್ರಿಸುವ  ಪ್ರೋಗ್ರೆಸ್ಸ್ ಬುಕ್ ಸ್ಟಾಲ್​ನವರಿಗೆ ಇಷ್ಟವಾಗಿ  ಪುಸ್ತಕವನ್ನು ಪ್ರಕಟಿಸಿದರು.

1+1=5 ಅಂದ್ರೂ ನಿಜನೇ: ಇದು ಕರೀನಾ ಕಪೂರ್​ ಹೊಸ ವರ್ಷದ ಮಂತ್ರವಂತೆ! ಏನಿದರ ಅರ್ಥ ಗೊತ್ತಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?