
ಮನೆಯಲ್ಲಿ ಮೂರು ವಾರ್ಡ್ರೋಬ್ ಇದೆ ಅಂದ್ಕೊಳ್ಳಿ, ಅದ್ರಲ್ಲಿ ಎರಡು ಬೀರು ಹೆಂಡ್ತಿ ಪಾಲು. ಇರೋ ಒಂದ್ರಲ್ಲೂ ಅರ್ಧ ಜಾಗವನ್ನು ಹೆಂಡ್ತಿಗೆ ನೀಡೋ ಸ್ಥಿತಿ ಗಂಡನದ್ದು. ಇದ್ದಿದ್ರಲ್ಲೆ ಎಲ್ಲ ಇಟ್ಕೊಂಡು, ಯಾವ್ದೆ ಪಂಕ್ಷನ್ಗಾದ್ರೂ ಫಟ್ ಅಂತ ರೆಡಿಯಾಗುವ ಎಲ್ಲ ಗಂಡಸರು, ಪ್ರತಿ ಸಾರಿ ಹೆಂಡ್ತಿ ಬಾಯಿಂದ ಬರುವ ಒಂದು ಡೈಲಾಗ್ ಕೇಳಿ ಸೋತೋಗಿದ್ದಾರೆ. ಅದ್ಯಾವುದು ಅಂದ್ರಾ?
ಜೀ ಕನ್ನಡ (Zee Kannada )ದಲ್ಲಿ ಪ್ರಸಾರ ಆಗ್ತಿರುವ ನಾವು ನಮ್ಮವರು (Navu Nammavaru) ಶೋನಲ್ಲಿ ತಾರಮ್ಮನ ಗಮನ ಸೆಳೆದಿದ್ದು, ಶ್ರಾವಣಿ ಬ್ಲೌಸ್. ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಶ್ರಾವಣಿ, ಈ ಬಾರಿ ಸ್ವಲ್ಪ ಡಿಫರೆಂಟ್ ಬ್ಲೌಸ್ ಹಾಕಿ ಬಂದಿದ್ರು. ಸಾಂಪ್ರದಾಯಿಕ ಸೀರೆಗೆ ಸ್ಟೈಲಿಶ್ ಬ್ಲೌಸ್ ನೋಡಿದ ತಾರಮ್ಮನ ಕುತೂಹಲ ತಡೆಯೋಕೆ ಆಗ್ಲಿಲ್ಲ. ಈ ಸ್ಟೈಲ್ ಗೆ ಏನು ಹೇಳ್ತಾರೆ ಅಂತ ತಾರಮ್ಮ ಕೇಳ್ತಿದ್ದಂತೆ ಸಮೀರ್ ಆಚಾರ್ಯ ಸಮಸ್ಯೆ ಹೊರ ಬಿತ್ತು.
ಶ್ರಾವಣಿ ಅವರ ಕಾಸ್ಟ್ಯೂಮ್ ಡಿಸೈನರ್ ಸಮೀರ್ ಆಚಾರ್ಯ ಅಂತೆ. ಅದಕ್ಕೆ ಕಾರಣ ಶ್ರಾವಣಿಯ ಪ್ರತಿ ವಾರದ ಸಮಸ್ಯೆ. ಸಮೀರ್ ಮನೆಯ ಐದು ಕಪಾಟಿನಲ್ಲಿ ಶ್ರಾವಣಿ ಸೀರೆ ಇದೆ. ಒಂದರಲ್ಲಿ ಮಾತ್ರ ಸಮೀರ್ ಆಚಾರ್ಯ ಬಟ್ಟೆ ಇದೆ. ಇಷ್ಟೆಲ್ಲ ಇದ್ರೂ, ವಾರದ ಶೂಟಿಂಗ್ ಟೈಂನಲ್ಲಿ, ನಾನು ಯಾವ ಸೀರೆ ಉಟ್ಟುಕೊಳ್ಳಲಿ, ಹೊಸ ಸೀರೆ ಕೊಡ್ಸಿ, ಹೊಸ ಬ್ಲೌಸ್ ಕೊಡಸಿ ಅಂತಾರಂತೆ ಶ್ರಾವಣಿ. ಇದ್ರಿಂದ ಬೇಸತ್ತ ಸಮೀರ್ ಆಚಾರ್ಯ, ತಾವೇ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಹೆಂಡ್ತಿ ಸೀರೆಗೆ ಹೊಸ ಬ್ಲೌಸ್ ತರೋ ಬದಲು, ಇರೋದ್ರಲ್ಲೇ ಮ್ಯಾಚ್ ಮಾಡ್ತಾರೆ.
ಎಲ್ಲ ಗಂಡಂದಿರ ಸಮಸ್ಯೆ ಇದು : ಸಮೀರ್ ಈ ಮಾತು ಕೇಳ್ತಿದ್ದಂತೆ ನಿರಂಜನ್, ಇದು ನಿಮ್ಮ ಸಮಸ್ಯೆ ಮಾತ್ರ ಅಲ್ಲ ಎಲ್ಲರದ್ದೂ ಅಂದಿದ್ದಾರೆ. ಇಷ್ಟೇ ಅಲ್ಲ ನಿರಂಜನ್ ಸರ್ವೆ ಕೂಡ ಮಾಡಿದ್ದಾರೆ. ಯಾರ ಮನೆಯಲ್ಲಿ ಎಷ್ಟು ಸೀರೆ, ಪಂಚೆ ಇದೆ ಅಂತ ಲೆಕ್ಕ ಶುರು ಮಾಡಿದ್ರು. ಸಾರ್ವತ್ರಿಕ ಸತ್ಯ ಒಪ್ಪಿಕೊಂಡ ತಾರಮ್ಮ, ಬೇರೆಯವರಿಗೆ ಸೀರೆ ತರೋಕೆ ಅಂತ ಹೋದ್ರೆ ಅವರಿಗಿಂತ ನಾನೇ ಹೆಚ್ಚು ಸೀರೆ ಖರೀದಿ ಮಾಡ್ತೇನೆ ಎಂದಿದ್ದಾರೆ. ಇನ್ನು ಅಮೂಲ್ಯ ಮನೆಯಲ್ಲಿ ಬರೀ 50 ಸೀರೆ ಇದ್ಯಂತೆ. ಎಲ್ಲ ಸ್ಪರ್ಧಿಗಳೂ ತಮ್ಮ ಸೀರೆ ಕೌಂಟ್ ಹೇಳಿದ್ರೆ ಖಂಡಿತ ಸೋತಿದ್ದು ಪಂಚೆ. ನಟ ಶರಣ್ ಮನೆಯಿಂದ ಹಿಡಿದು ಬಹುತೇಕ ಎಲ್ಲ ಗಂಡಸರ ಬಳಿ ಇರೋದು ಎರಡರಿಂದ ನಾಲ್ಕು ಪಂಚೆ ಮಾತ್ರ.
ಈ ವಿಡಿಯೋ ನೋಡಿದ ವೀಕ್ಷಕರು, ಹೌದು, ಹೌದು, ನಮ್ಮ ಮನೆಯದ್ದೂ ಇದೇ ಕಥೆ ಅಂತಿದ್ದಾರೆ. ಬಹುತೇಕ ಎಲ್ಲರ ಮನೆಯ, ಎಲ್ಲ ಗಂಡಸರ ಗೋಳು ಇದು. ಅದೆಷ್ಟೇ ಸೀರೆ, ಡ್ರೆಸ್ ಇರಲಿ, ಹುಡುಗಿಯರು ಹೊಸ ಫಂಕ್ಷನ್ ಬಂದಾಗ ಹೊಸ ಡ್ರೆಸ್ ಹುಡುಕ್ತಾರೆ. ಒಂದು ಬಾರಿ ಹಾಕಿದ ಸೀರೆನಾ ಇನ್ನೊಮ್ಮೆ ಉಡೋದೇ ದೊಡ್ಡ ಕಷ್ಟ. ಈಗಾಗ್ಲೇ ಈ ಸೀರೆನಲ್ಲಿ ಸಾಕಷ್ಟು ಫೋಟೋ, ವಿಡಿಯೋ ಇದೆ, ಸ್ಟೇಟಸ್, ಸೋಶಿಯಲ್ ಮೀಡಿಯಾಗೆ ಪೋಸ್ಟ್ ಆಗಿದೆ. ಮತ್ತೆ ಇದನ್ನೇ ಉಡ್ಬೇಕಾ ಎನ್ನುವ ಟೆನ್ಷನ್ ಮಹಿಳೆಯರಿಗೆ. ಇದೇ ಕಾರಣಕ್ಕೆ ಹೊಸ ಫಂಕ್ಷನ್ ಅಂತಿದ್ದಂಗೆ ಗಂಡನ ಹಿಂದೆ ಬೀಳ್ತಾರೆ. ನೂರು, ನೂರೈವತ್ತು ಸೀರೆ ಕಪಾಟಿನಲ್ಲಿದ್ರೂ ಯಾವ್ದೂ ಸರಿ ಬರೋದಿಲ್ಲ. ಪಂಕ್ಷನ್ ಗೆ ಹೋಗೋ ಮೊದಲು ಗಂಡನ ಜೊತೆ ಗಲಾಟೆ ಖಾಯಂ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.