ತೆಲಗು ಬಿಗ್​ಬಾಸ್​ನಲ್ಲಿ ಕನ್ನಡದ ಕಂಪು! ಅಗ್ನಿಸಾಕ್ಷಿ ನಟಿ, ಸ್ಯಾಂಡಲ್​ವುಡ್​ ತಾರೆಯನ್ನು ಸಿಕ್ಕ ಅಪೂರ್ವ ಕ್ಷಣ...

By Suvarna News  |  First Published Oct 18, 2023, 5:46 PM IST

ತೆಲುಗು ಬಿಗ್​ಬಾಸ್​ನಲ್ಲಿ ಇಬ್ಬರು ಕನ್ನಡದ ನಟಿಯರು ಕನ್ನಡದಲ್ಲಿಯೇ ಮಾತನಾಡಿ ಸಕತ್​ ಖುಷಿ ಕೊಟ್ಟಿದ್ದಾರೆ.  ! ಅಗ್ನಿಸಾಕ್ಷಿ ನಟಿ ಶೋಭಾ ಶೆಟ್ಟಿ ಅವರು, ಸ್ಯಾಂಡಲ್​ವುಡ್​ ತಾರೆ ಶ್ರೀಲೀಲಾ ಅವರನ್ನು ಸಿಕ್ಕ ಅಪೂರ್ವ ಕ್ಷಣ...
 


ಈಗ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಗ್​ಬಾಸ್​ನ ಫೀವರ್​ ಜೋರಾಗಿಯೇ ನಡೆಯುತ್ತಿದೆ. ಇತ್ತ ಕನ್ನಡದ ಸೀಸನ್​ 10 ಬಿಗ್​ಬಾಸ್​ ಶುರುವಾಗಿದ್ದರೆ, ಅತ್ತ ತೆಲುಗುವಿನ 7ನೇ ಸೀಸನ್​ ಶುರುವಾಗಿದೆ. ಇದರಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿ ಶೋಭಾ ಶೆಟ್ಟಿ ಕೂಡ ಪ್ರವೇಶ ಮಾಡಿದ್ದಾರೆ.  ಆಗಸ್ಟ್ ತಿಂಗಳಿನಿಂದ ಬಿಗ್​ಬಾಸ್​ ಶುರುವಾಗಿದ್ದು, ನಟ ನಾಗಾರ್ಜುನ ಅಕ್ಕಿನೇನಿ ಅವರು ಎಂದಿನಂತೆ ಈ ಶೋನ ನಿರೂಪಣೆ ಮಾಡುತ್ತಿದ್ದಾರೆ.  . ಹಲವು ಸ್ಪರ್ಧಿಗಳಲ್ಲಿ ಶೋಭಾ ಕೂಡ ಇದ್ದಾರೆ. ಸದ್ಯ  ಶೋಭಾ ಶೆಟ್ಟಿ  ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ತೆಲುಗು ಬಿಗ್​ಬಾಸ್​ ಮನೆಯಲ್ಲಿದ್ದಾರೆ.  6 ವರ್ಷಗಳಿಗೂ ಅಧಿಕ ಕಾಲ ಕಲರ್ಸ್​ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಪ್ರಸಾರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ  ತನು ಪಾತ್ರದಲ್ಲಿ ನಟಿಸಿದ್ದರು.   

ಇವರು ಎಲ್ಲಾ ಸ್ಪರ್ಧಿಗಳಿಗಿಂತಲೂ  ಅತಿ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಂದರೆ  ಒಂದು ವಾರಕ್ಕೆ 1.25 ಲಕ್ಷ ರೂಪಾಯಿಯಿಂದ 1.50 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿದೆ ಎನ್ನಲಾಗುತ್ತಿದೆ. ಅದೇನೇ ಇದ್ದರೂ ಇದೀಗ ತೆಲುಗು ಬಿಗ್​ಬಾಸ್​ನಲ್ಲಿ ಕನ್ನಡದ ಕಂಪು ಹರಿದಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಹೊರ ರಾಜ್ಯಗಳಿಗೆ ಅಥವಾ ಹೊರ ದೇಶಗಳಿಗೆ ಹೋದಾಗ ಕನ್ನಡದ ಮಾತು ಕೇಳಿದರೆ ಅದೆಷ್ಟು ಹಿತವಾಗುತ್ತದೆ ಅಲ್ಲವೆ? ನಮ್ಮದೇ ಮಾತೃಭಾಷೆಯನ್ನು  ನಾವಿರುವ ಜಾಗದಲ್ಲಿ ಕಡೆಗಣನೆ ಮಾಡುವವರು ಕೆಲವರು. ಆದರೆ ಅವರಿಗೂ ಹೊರಗಡೆ ಹೋದಾಗ ಅವರ ಮಾತೃಭಾಷೆ ಮಾತನಾಡುವವರನ್ನು ಕೇಳಿದಾಗ ರೋಮಾಂಚನವಾಗುವುದು ಉಂಟು. ಅಂಥದ್ದರಲ್ಲಿ ಬೇರೆ ಭಾಷೆಯ ಬಿಗ್​ಬಾಸ್ ಮನೆಯೊಳಕ್ಕೆ ಕನ್ನಡದ ಕಂಪು ಹರಿದರೆ ಏನಾಗಬಹುದು?

Tap to resize

Latest Videos

ಲವರ್​ ಇದ್ರೆ ಹೇಳಿಬಿಡು, ಮದ್ವೆ ಮಾಡಿಸ್ತೇನೆ ಅಂದೆ ಡ್ರೋನ್​ಗೆ: ಪ್ರತಾಪನ ಹಾಡಿ ಹೊಗಳಿದ ಸ್ನೇಕ್​ ಶ್ಯಾಮ್​

ಇಲ್ಲಿಯೂ ಅದೇ ಆಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇಲ್ಲಿ ತೆಲುಗು ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿ, ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಶೋಭಾ ಶೆಟ್ಟಿ ಬಿಗ್​ಬಾಸ್​ ಮನೆಯಲ್ಲಿದ್ದು, ಆಕೆ ಕನ್ನಡವರಾಗಿದ್ದರಿಂದ ನಟಿ ಶ್ರೀಲೀಲಾ ಅವರನ್ನು ಬಿಗ್​ಬಾಸ್​ ವೇದಿಕೆಯ ಮೇಲೆ ಅತಿಥಿಯಾಗಿ ಕರೆತರಲಾಗಿತ್ತು. ಆ ಸಮಯದಲ್ಲಿ ಬಿಗ್​ಬಾಸ್​ ಮನೆಯ ಒಳಗಿನಿಂದ ಇವರಿಬ್ಬರೂ ಕನ್ನಡದಲ್ಲಿ ಮಾತನಾಡಿದ್ದಾರೆ. ಹೀಗಿದ್ದೀರಾ ಎಂದೆಲ್ಲಾ ಇಬ್ಬರೂ ಕನ್ನಡದಲ್ಲಿಯೇ ಕುಶಲೋಪ ವಿಚಾರಿಸಿಕೊಂಡಿದ್ದಾರೆ. ಕನ್ನಡದವರೊಬ್ಬರು ಬಿಗ್​ಬಾಸ್​  ಮನೆಯೊಳಕ್ಕೆ ಆಂಧ್ರದಲ್ಲಿ ಇರುವುದನ್ನು ಕಂಡು ಖುಷಿಯಿಂದ ಇರುವ ನಟಿ ಶ್ರೀಲೀಲಾ ಕರ್ನಾಟಕ ಮೀಟ್ಸ್​ ಕರ್ನಾಟಕ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

ಅಂದಹಾಗೆ ಶ್ರೀಲೀಲಾ ಅವರ ನಟನೆಯ ಭಗವಂತ ಕೇಸರಿ ಚಿತ್ರ ನಾಳೆ ಅಂದರೆ ಅಕ್ಟೋಬರ್​ 19ರಂದು ಥಿಯೇಟರ್​ಗಳಲ್ಲಿ ಬಿಡುಗಡೆ ಕಾಣಲಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾನು ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ನನಗೂ ಈ ಪಾತ್ರ ತುಂಬಾ ಇಷ್ಟವಾಗಿದೆ ಎಂದು ಚಿತ್ರದ ಬಗ್ಗೆ ಶ್ರೀಲೀಲಾ ಟ್ರೇಲರ್ ಲಾಂಚ್ ಸಮಯದಲ್ಲಿ ಹೇಳಿದ್ದರು. ನಿರ್ದೇಶಕ ಅನಿಲ್ ರವಿಪುಡಿ ಸೋಲ್ ಕನೆಕ್ಟ್ ಆಗುವ ಪಾತ್ರ ಕೊಟ್ಟಿದ್ದಾರೆ. ತುಂಬಾ ಧನ್ಯವಾದಗಳು. ಇತರ ಸಿನಿಮಾಗಿಂತ ಈ ಪಾತ್ರ ನನಗೆ ಹೆಚ್ಚಾಗಿ ಕನೆಕ್ಟ್ ಆಗಿದೆ. ಸಿನಿಮಾ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದಿದ್ದರು. ಈ ಚಿತ್ರಕ್ಕೆ ನಟಿ ಶೋಭಾ ಶೆಟ್ಟಿ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. 

BIGG BOSS: ಎಣ್ಣೆ ಮಸಾಜ್​ ಮಾಡ್ತಾ ಮಾಡ್ತಾ ಲವ್ ಶುರು? ಕಾರ್ತಿಕ್​- ಸಂಗೀತಾ ಪ್ರೇಮ್​ ಕಹಾನಿ

click me!