ಅಮ್ಮಾ-ಅಪ್ಪಾ ತಪ್ಪು​ ಮಾಡ್ಬಿಟ್ಟೆ, ತುಂಬಾ ನೋವಾಗ್ತಿದೆ ಎಂದು ಕಣ್ಣೀರು ಹಾಕಿದ ನಮ್ರತಾ: ಕಾಲೆಳೀತಿರೋ ನೆಟ್ಟಿಗರು!

By Suvarna News  |  First Published Dec 12, 2023, 12:36 PM IST

ಬಿಗ್​ಬಾಸ್​ ಕ್ಯಾಮೆರಾದ ಎದುರು ಬಂದಿರುವ ನಮ್ರತಾ ತಾವು ತಪ್ಪು ಮಾಡಿದ ಕುರಿತು ಕಣ್ಣೀರು ಹಾಕಿದ್ದಾರೆ. ನೆಟ್ಟಿಗರು ಹೇಗೆ ರಿಯಾಕ್ಟ್​ ಮಾಡ್ತಿದ್ದಾರೆ ನೋಡಿ.
 


ಬಿಗ್​ಬಾಸ್​​ ಎರಡನೆಯ ತಿಂಗಳಿಗೆ ಕಾಲಿಡುತ್ತಿದ್ದಂತೆಯೇ ಹಲವು ಸ್ಪರ್ಧಿಗಳು ಎಲಿಮಿನೇಟ್​ ಆಗಿದ್ದಾರೆ. ಈಗಿರುವ ಸ್ಪರ್ಧಿಗಳ ನಡುವೆ ಪೈಪೋಟಿ ಜಾಸ್ತಿಯಾಗುತ್ತಿದೆ. ಟಾಸ್ಕ್​ ಹೆಸರಿನಲ್ಲಿ ಇದಾಗಲೇ ಸಾಕಷ್ಟು ವಿವಾದಗಳೂ ಸೃಷ್ಟಿಯಾಗಿವೆ. ಬಿಗ್​ಬಾಸ್​ ಮನೆಯಲ್ಲಿ ಪ್ರೀತಿ, ಪ್ರೇಮ, ಪ್ರಯಣ, ದ್ವೇಷ, ಜಗಳ ಇದ್ಯಾವುದಕ್ಕೂ ಕೊರತೆಯೇ ಇಲ್ಲ. ಅದೇ ರೀತಿ ನಮ್ರತಾ ಮತ್ತು ಸ್ನೇಹಿತ್​ ತುಂಬಾ ಸ್ನೇಹಿತರಾಗಿದ್ದರು. ಬಿಗ್ ಬಾಸ್‌ ಮನೆಯಿಂದ  64 ದಿನಗಳ ಸುದೀರ್ಘ ಪಯಣವನ್ನು ಮುಗಿಸಿ ಸ್ನೇಹಿತ್ ಹೊರ ಬಂದಿದ್ದಾರೆ. ಈ ಸಂದರ್ಭದಲ್ಲಿ ಸಹಜವಾಗಿ ನಮ್ರತಾ ಅವರಿಗೆ ಬೇಸರವಾಗಿದೆ. ತಮಗೆ ನಮ್ರತಾ ಬಗ್ಗೆ ಫೀಲಿಂಗ್​ ಇತ್ತು ಎಂದು ಖುದ್ದು ಸ್ನೇಹಿತ್​ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದಾಗಲೂ ಹೇಳಿಕೊಂಡಿದ್ದಾರೆ. 

ಇದೀಗ ಸಂಗೀತಾ ತುಂಬಾ ಅಪ್​ಸೆಟ್​ ಆದ ಹಾಗಿದೆ. ಬಿಗ್​ಬಾಸ್​​ ಕ್ಯಾಮೆರಾ ಎದುರಿಗೆ ಬಂದು ತಮ್ಮ ತಂದೆ-ತಾಯಿಯನ್ನು ಸಂಬೋಧಿಸುತ್ತಾ ಕಣ್ಣೀರು ಹಾಕಿದ್ದಾರೆ. ಅಮ್ಮಾ, ಅಪ್ಪಾ... ಹೇಗೋ ಮ್ಯಾನೇಜ್​ ಮಾಡುತ್ತಿದ್ದೇನೆ. ಇಲ್ಲಿ ಬಂದು ತುಂಬಾ ಅಳುತ್ತಿದ್ದೇನೆ. ಸ್ಟ್ರಾಂಗ್​ ಆಗಿ ಆಚೆಗೆ ಬರ್ತೇನೆ. ಟಾಸ್ಕ್​ಗೋಸ್ಕರ್​ ಯಾರನ್ನಾದರೂ ಹರ್ಟ್​ ಮಾಡುವುದು ನನಗೆ ಆಗಲ್ಲ, ಅದು ಅನ್​ಇನ್​ಫಾರ್ಮಲ್​ ಅನಿಸತ್ತೆ. ನಾನು ಅದರಲ್ಲಿ ಭಾಗಿಯಾಗಿದ್ದೆ. ಅದು ನನಗೆ ತುಂಬಾ ಹಿಂಸೆ ಆಗ್ತಿಲ್ಲ. ಅವರು ನನ್ನ ಕೈಯಲ್ಲಿ ಏನೇನೋ ಮಾಡಿಸಿದ್ರು. ಎಂಜಲು ಎರೆಚಿಸಿದ್ರು, ಕಸ ಎರೆಚಿಸಿದ್ರು... ಇವೆಲ್ಲಾ ತುಂಬಾ ಹಿಂಸೆ ಅನಿಸ್ತಿದೆ. ನಮ್ಮ ಟೀಂ ನವರಿಗೆ ಅವರು ಹಿಂಸೆಯ ರೀತಿಯಲ್ಲಿ ನೀರು ಎರೆಚಿದ್ರು ಎಂದು ನಾನು ಕೂಡ ಅದನ್ನೇ ಮಾಡಿದ್ದು ತಪ್ಪು. ಸೋ ಅದು ನನಗೆ ತುಂಬಾ ಮೈಂಡ್​ ಡಿಸ್ಟರ್ಬ್​ ಆಗಿದೆ ಎಂದು ಹೇಳಿದ್ದಾರೆ.

Tap to resize

Latest Videos

ಸ್ವರ್ಗದಷ್ಟೇ ಬಿಗ್​ಬಾಸ್​ ಸುರಕ್ಷಿತ ಎಂದದ್ದು ಇದಕ್ಕೇನಾ? ಸಂಗೀತಾ ಸಹೋದರ ಕಿಡಿ- ಸುದೀಪ್​ಗೆ ಪತ್ರ?

ಇದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿ ನೆಟ್ಟಿಗರು ನಮ್ರತಾ ಕಾಲೆಳೆಯುತ್ತಿದ್ದಾರೆ. ಮಾಡೋದೆಲ್ಲಾ ಮಾಡಿಬಿಟ್ಟು ನಾಮಿನೇಷನ್​ ಟೈಂ ಹತ್ತಿರ ಬಂದಾಗ ಡೌ ಮಾಡ್ತಿಯಾ ಎಂದು ಕೇಳುತ್ತಿದ್ದಾರೆ. ಈಕೆ ಚಮಚಾ ರಾಣಿ, ಯಾರೂ ನಂಬಬೇಡಿ ಎಂದು ಮತ್ತೊಂದಿಷ್ಟು ಮಂದಿ ಕಮೆಂಟ್​ನಲ್ಲಿ ಹೇಳಿದ್ದಾರೆ. ಇನ್ನು ಸಂಗೀತಾ ಫ್ಯಾನ್ಸ್​ ಕೂಡ ನಮ್ರತಾ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸಂಗೀತಾ ನಿಂಗೆ ನೋವು ಕೊಟ್ಟೋರು ಪಶ್ಚಾತಾಪ ಪಟ್ಟೆ ಪಡ್ತಾರೆ ನೋಡು. ಈಕೆ ಇನ್ನು ಎಷ್ಟು ವಾರ ನಾಟಕ ಮಾಡ್ತಾಳೆ ನೋಡೋಣ. ಮಾಡೋದೆಲ್ಲ ಮಾಡಿ ಕೊನೆಗೆ  ನಾನವಳಲ್ಲ ನಾನವಳಲ್ಲ ನಾನವಳಲ್ಲ ಎಂದ್ರೆ ಆಗತ್ತಾ ಅಂತಿದ್ದಾರೆ. ಇನ್ನು ಕೆಲವರು ನಮ್ರತಾಗೆ ಸಪೋರ್ಟ್​ ಮಾಡುತ್ತಿದ್ದಾರೆ. 

ಅದೇ ಇನ್ನೊಂದೆಡೆ, ಮೊದಲೇ ಹೇಳಿದಂತೆ ಸ್ನೇಹಿತ್​ ಹೋಗುತ್ತಿದ್ದಂತೆಯೇ ನಮ್ರತಾ ಡಲ್​ ಆಗಿದ್ದಾರೆ. ಸ್ನೇಹಿತ್ ಮನೆಗೆ ಬಂದಾಗಿನಿಂದಲೂ ನಮ್ರತಾ ಜೊತೆ ಒಳ್ಳೆಯ ಸ್ನೇಹ ಬೆಳೆಸಿಕೊಂಡ್ರು. ನೀವಂದ್ರೆ ನನಗೆ ಇಷ್ಟ ಅಂತ ಹೇಳ್ತಾನೆ ಇದ್ದಾರೆ. ಆದ್ರೆ ನಮ್ರತಾ ನಾವಿಬ್ಬರು ಫ್ರೆಂಡ್ಸ್ ಎನ್ನುತ್ತಿದ್ರು. ಇದೀಗ ಸ್ನೇಹಿತ್ ಮನೆಯಿಂದ ಹೊರ ಹೋಗುವುದನ್ನು ಕಂಡು ನಮ್ರತಾ ಕಣ್ಣೀರು ಹಾಕಿದ್ರು. ನಮ್ರತಾ ನೀವು ನಿಮಗಾಗಿ ಮಾತ್ರವಲ್ಲ ಇನ್ಮುಂದೆ ನನಗಾಗಿ ಕೂಡ ಆಡಲೇಬೇಕು ಎಂದು ಸ್ನೇಹಿತ್ ಹೇಳಿದ್ದಾರೆ. ಸ್ನೇಹಿತ್ ಪ್ರೀತಿಯ ಮಾತು ಕೇಳಿ ನಮ್ರತಾ ಮನಸ್ಸು ಕರಗಿದೆ.  

ಮರೆಯಲಾಗದ ಕಹಿ ಘಟನೆಗಳ ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಬಿಗ್​ಬಾಸ್​ ಸ್ಪರ್ಧಿಗಳು

 

click me!