ಇವತ್ತು ರಾತ್ರಿಯ ಮಜಾ.. ಎಂದು ಡಾನ್ಸ್​ ಮಾಡಿದ ಹಿಟ್ಲರ್​ ಕಲ್ಯಾಣ ಸೀರಿಯಲ್​ ಅಂತರಾ...

By Suchethana D  |  First Published Nov 19, 2024, 2:27 PM IST

ಆಜ್​ ಕೀ ರಾತ್​... ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ ಹಿಟ್ಲರ್​ ಕಲ್ಯಾಣದ ಅಂತರಾ ಉರ್ಫ್​ ರಜನಿ. ವಿಡಿಯೋ ಶೇರ್​ ಮಾಡಿದ ನಟಿ.  
 


ಜಿ ಟಿವಿಯಲ್ಲಿ ಪ್ರಸಾರ ಆಗ್ತಿದ್ದ ಹಿಟ್ಲರ್​ ಕಲ್ಯಾಣ ಸೀರಿಯಲ್​ ಮುಗಿದು ತಿಂಗಳುಗಳೇ ಆಗಿವೆ. ಆದರೆ ಅದರಲ್ಲಿ ನಟಿಸಿರುವ ನಟ-ನಟಿಯರನ್ನು ಇನ್ನೂ ಅಭಿಮಾನಿಗಳು ಮರೆತಿಲ್ಲ. ಅದರಲ್ಲಿಯೂ ಡಬಲ್​ ಷೇಡ್​ನಲ್ಲಿ ಕಾಣಿಸಿಕೊಂಡವರು ನಟಿ ರಜನಿ. ಎಜೆ ಮೊದಲ ಪತ್ನಿ ಅಂತರಾ ಆಗಿ ಕೊನೆಗೆ ವಿಲನ್​ ಪ್ರಾರ್ಥನಾ ಆಗಿ ಕಾಣಿಸಿಕೊಂಡ ರಜನಿ ನೆಗೆಟಿವ್​ ಷೇಡ್​ನಿಂದಲೇ ಎಲ್ಲರ ಮನ ಗೆದ್ದವರು. ಒಬ್ಬರೇ ವ್ಯಕ್ತಿ ಒಮ್ಮೆ ಅತಿ ಒಳ್ಳೆಯವರಂತೆ, ಇನ್ನೊಮ್ಮೆ ಅತಿ ಕೆಟ್ಟವರಂತೆ ಆ್ಯಕ್ಟಿಂಗ್​ ಮಾಡುವುದು ತುಸು ಕಷ್ಟವೇ. ಇಂಥ ಕಲೆ ಕೆಲವರಿಗೆ ಮಾತ್ರ ಕರಗತವಾಗಿರುತ್ತದೆ. ಅಂಥವರಲ್ಲಿ ಒಬ್ಬರು ರಜನಿ.  ಮೊದಲಿಗೆ ಸೌಮ್ಯ ರೂಪದ ಅಂತರಾಳ ರೂಪವನ್ನೇ ಪಡೆದಿರುವ ವಿಲನ್​ ಪ್ರಾರ್ಥನಾ ತಾನೇ ಅಂತರಾ ಎಂದುಕೊಂಡು ಮನೆಯವರನ್ನು ನಂಬಿಸಿದ್ದಳು. ಕೊನೆಗೂ ಸಿಕ್ಕಿಬಿದ್ದಳೆನ್ನಿ.  ಅದೇನೆ ಇದ್ದರೂ ಅಂತರಾ ಹಾಗೂ ಪ್ರಾರ್ಥನಾ ಪಾತ್ರಕ್ಕೆ ಜೀವ ತುಂಬಿರುವ ನಟಿ ರಜನಿ.  

ಸೋಷಿಯಲ್​  ಮೀಡಿಯಾದಲ್ಲಿ ರಜನಿ ಸಕತ್​ ಬಿಜಿಯಾಗಿದ್ದಾರೆ.  ಆಗಾಗ್ಗೆ ರೀಲ್ಸ್​ಗಳನ್ನು ಶೇರ್​ ಮಾಡುತ್ತಿರುತ್ತಾರೆ. ಇದೀಗ ಅವರು ಹಿಂದಿನ ಆಜ್​ ಕೀ ರಾತ್​ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ್ದಾರೆ.  ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿ ಇರೊ ಕಾಟು ಮೇಲಾ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಇವರ ರೀಲ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ವೈಟ್​ ಡ್ರೆಸ್​ ನಿಮಗೆ ತುಂಬಾ ಚೆನ್ನಾಗಿ ಕಾಣುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Tap to resize

Latest Videos

undefined

ನಿಮ್ಮ ಬಯೋಪಿಕ್​ಗೆ ನಟ ಯಾರಾಗ್ಬೇಕು ಎಂಬ ಪ್ರಶ್ನೆಗೆ ಶಿವರಾಜ್​ ಕುಮಾರ್​ ಕೊಟ್ಟ ಉತ್ತರ ನೋಡಿ...

 ಅಂದಹಾಗೆ ರಜನಿ ಕುರಿತು ಹೇಳುವುದಾದರೆ,  ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ರಜನಿ, ನಂತರ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲೂ ನಟಿ ಸದಾ ಆಕ್ಟೀವ್ ಆಗಿರುತ್ತಾರೆ. ಯಾವಾಗಲೂ ರೀಲ್ಸ್ ಮಾಡುತ್ತಾ, ಅಥವಾ ಫೋಟೋ ಶೂಟ್ ಮಾಡಿಸಿ  ಶೇರ್ ಮಾಡುತ್ತಿರುತ್ತಾರೆ.  ಕೆಲ ದಿನಗಳ ಹಿಂದೆ ನಟಿ ಮೈಚಳಿ ಬಿಟ್ಟು ಇದೀಗ ಆಜ್​ ಕೀ ರಾತ್​ ಹಾಡಿಗೆ ಡ್ಯಾನ್ಸ್​ ಮಾಡಿದ್ದು, ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. 

ಕೊನೆಗೆ ಸ್ಲಿಟ್​ ಡ್ರೆಸ್​ನಲ್ಲಿ ಸುಂದರ ಕಾಲಿನಪ್ರದರ್ಶನ ಮಾಡುತ್ತಾ ಹಾಟ್​ ಆಗಿ ಕಾಣಿಸಿಕೊಂಡಿದ್ದರು. ಇವರು ವಿಡಿಯೋ ಶೇರ್​ ಮಾಡಿದಾಗಲೆಲ್ಲಾ ಇವರ ಕಾಲಿನ ಮೇಲೆ ನೆಟ್ಟಿಗರ ಕಣ್ಣು ಹೋಗಿರುತ್ತದೆ. ಈಗಲೂ ಕಾಲು ಸೂಪರ್​ ಎಂದು ಕೆಲವರು ಹೇಳಿದ್ದಾರೆ.  

ಪ್ರಥಮಾ ನಿಂಗೆ ಬುದ್ಧಿ ಇಲ್ವೆನೊ... ಬೇಲ್​ ಕ್ಯಾನ್ಸಲ್​ ಮಾಡ್ಸಿಲ್ಲಾ ಅಂದ್ರೆ ನನ್​ ಹೆಸ್ರು.... ಜಗದೀಶ್​​ ಗುಡುಗು

 
 
 
 
 
 
 
 
 
 
 
 
 
 
 

A post shared by Rajini (@rajiniiofficial)

click me!