ನಮ್ಮನೆ ಯುವರಾಣಿ ನಟಿಗೆ ನಟನೆಯಷ್ಟೇ ಮುಖ್ಯ ಈ 2 ವಿಷಯ

Suvarna News   | Asianet News
Published : Feb 10, 2021, 03:24 PM ISTUpdated : Feb 10, 2021, 03:46 PM IST
ನಮ್ಮನೆ ಯುವರಾಣಿ ನಟಿಗೆ ನಟನೆಯಷ್ಟೇ ಮುಖ್ಯ ಈ 2 ವಿಷಯ

ಸಾರಾಂಶ

ನಮ್ಮನೆ ಯುವರಾಣಿ ಸೀರಿಯಲ್ ನಟಿ ಅಂಕಿತಾ ಹಾಡೋದ್ರಲ್ಲೂ, ಡ್ಯಾನ್ಸ್‌ನಲ್ಲೂ ಎಕ್ಸ್‌ಪರ್ಟ್‌. ನಟನೆಯ ಜೊತೆ ಸಂಗೀತದ ಬಗ್ಗೆಯೂ ಸಿಕ್ಕಾಪಟ್ಟೆ ಒಲವು ಈಕೆಗೆ

ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಮೀರಾ ಪಾತ್ರದಲ್ಲಿ ಮಿಂಚುತ್ತಿರುವ ಅಂಕಿತಾ ಸಿಂಪಲ್ & ಕ್ಯೂಟ್ ಹುಡುಗಿ. ಇವರು ನಟನೆಯಷ್ಟೇ ಪ್ರಾಮುಖ್ಯತೆಯನ್ನು ಬೇರೆ ವಿಚಾರಗಳಿಗೂ ಕೊಡ್ತಾರೆ.

ನಟಿಯ ಡ್ಯಾನ್ಸ್ ಮಾಡೋದರಲ್ಲಿ ಮತ್ತು ಹಾಡೋದರಲ್ಲಿಯೂ ಎತ್ತಿದ ಕೈ. ಸುಶ್ರಾವ್ಯವಾಗಿ ಹಾಡುತ್ತಾರೆ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೃತ್ಯವನ್ನೂ ಮಾಡುತ್ತಾರೆ ಈಕೆ. ಈಕೆಯ ಇತ್ತೀಚಿನ ವಿಡಿಯೋ ವೈರಲ್ ಅಗಿದೆ.

ಬಾಯಲ್ಲೇ ಗಟ್ಟಿಮೇಳದ ರೌಡಿ ಬೇಬಿ ಚಿತ್ರ ಬಿಡಿಸಿದ ಅಭಿಮಾನಿ

ಇತ್ತೀಚಿನ ನಟಿಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅಶ್ವತ್‌ಪುರ ಸಂಕೀರ್ತನೆ ಎಂಬ ಕ್ಯಾಪ್ಶನ್ ಅಡಿಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್ ಪೇಜ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ.

ಇದರಲ್ಲಿ ತಂಡದ ಸದಸ್ಯರು ಸುಶ್ರಾವ್ಯವಾಗಿ ಹಾಡುತ್ತಾ,  ತಾಳ ಹಾಕುತ್ತಿದ್ದರೆ ಮೀರಾ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಿದ್ದನ್ನು ಕಾಣಬಹುದು. ನೀಲಬಣ್ಣದ ಸೀರೆಯಲ್ಲಿ ಅಂದವಾಗಿ ಕಾಣಿಸಿದ್ದಾರೆ ಅಂಕಿತಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ