ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿರುವ ಕನ್ನಡದ ಧಾರಾವಾಹಿ ಯಾವುದು ಗೊತ್ತಾ?

Suvarna News   | Asianet News
Published : May 04, 2021, 05:14 PM IST
ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿರುವ ಕನ್ನಡದ ಧಾರಾವಾಹಿ ಯಾವುದು ಗೊತ್ತಾ?

ಸಾರಾಂಶ

ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ರೆಕಾರ್ಡ್‌ ಬ್ರೇಕ್ ಮಾಡಿರುವ ಧಾರಾವಾಹಿಗಳು ಒಂದಾ, ಎರಡಾ? ಅದರಲ್ಲೂ ಜನತಾ ಕರ್ಫ್ಯೂ ಜಾರಿಗೊಂಡ ನಂತರ ಧಾರಾವಾಹಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕೆಲವೊಂದು ಧಾರಾವಾಹಿ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ....

ಕಿರುತೆರೆಯ ಯಾವ ಧಾರಾವಾಹಿ ಅತಿ ಹೆಚ್ಚು ವೀಕ್ಷಣೆ ಪಡೆದಿದೆ ಎಂಬುದನ್ನು ಟಿಆರ್‌ಪಿ ಮೂಲಕ ತಿಳಿದುಕೊಳ್ಳಬಹುದು. ವಾರ ವಾರವೂ ಕತೆಗಳಲ್ಲಿ ಟ್ವಿಸ್ಟ್‌ ಇರುವ ಕಾರಣ ವಾರ ವಾರವೂ ಜನರ ಆಯ್ಕೆ ಬದಲಾಗುತ್ತದೆ. ಸದಾ ಟಾಪ್‌ ಓನ್‌ ಸ್ಥಾನದಲ್ಲಿದ್ದ ಧಾರಾವಾಹಿಗಳು ಕೆಳಗೆ ಬಿದ್ದರೆ, ಹಿಂದಿದ್ದ ಧಾರಾವಾಹಿಗಳು ಮುಂದೆ ಬಂದಿದೆ.

ಇನ್ನೆರಡು ವರ್ಷಗಳಲ್ಲಿ ಮಂಜು ಪಾವಗಡ ಸಾಧನೆ ಲಿಸ್ಟ್‌ನಲ್ಲಿ ಏನೆಲ್ಲಾ ಇವೆ ಗೊತ್ತಾ? 

ಹೌದು! ರಾಜೀವ ಹಾಗೂ ಗೌರಿ ನಡುವೆ ಪ್ರೀತಿ ಹೆಚ್ಚಾದರೆ ಟಿಆರ್‌ಪಿನೂ ಹೆಚ್ಚಾಗುತ್ತದೆ. ಆದರೆ 5ನೇ ಸ್ಥಾನದಲ್ಲಿದ್ದ ಮಂಗಳಗೌರಿ ಮದುವೆ ಇದೀಗ 6ನೇ ಸ್ಥಾನ ಪಡೆದುಕೊಂಡಿದೆ. 2012ರಲ್ಲಿ ಆರಂಭವಾದ ಧಾರಾವಾಹಿಯ ಎರಡನೇ ಭಾಗ ಇದಾಗಿದೆ. ಇತ್ತೀಚಿಗೆ ಬರುತ್ತಿರುವ ಹೊಸ ಧಾರಾವಾಹಿಗಳ ಜೊತೆ ಟಫ್‌ ಫೈಟ್ ಕೊಡುತ್ತಿದೆ. ಇದೆಲ್ಲವೂ ಖಾಸಗಿ ಮಾಧ್ಯಮ ವರದಿ ಮಾಡಿರುವ ಪ್ರಕಾರ.

ಇನ್ನು 5ನೇ ಸ್ಥಾನದಲ್ಲಿ ನಾಗಿಣಿ-2 ಧಾರಾವಾಹಿ ಇದೆ. ತ್ರಿಶೂಲ್ ಹಾಗೂ ಶಿವಾನಿ ಪ್ರೇಮ ಕತೆ ಮದುವೆ ವಿಚಾರ ಕೊಂಡ ರೋಚಕವಾಗಿದ್ದು ವೀಕ್ಷರ ಗಮನ ಸೆಳೆಯುತ್ತಿದೆ. ಮೂರನೇ ಸ್ಥಾನದಲ್ಲಿ ಅನುರಾಗವಿದೆ ಅಂದ್ರೆ ಜೊತೆ ಜೊತೆಯಲಿ ಧಾರಾವಾಹಿ. ಅರ್ಯ ತನ್ನ ಇನ್ನೊಂದು ಮುಖ ಬಯಲು ಮಾಡಲು ಅನು ಸಿರಿಮನೆ ಪಟ್ಟ ಸಾಹಸಕ್ಕೆ ಇಷ್ಟು ವೀಕ್ಷಣೆ ಬಂದಿರಬಹುದು. ಎಲ್ಲವನ್ನೂ ಒಪ್ಪಿಕೊಂಡು ಆರ್ಯ ಜೊತೆ ಜೀವನ ಮಾಡಲು ಅನು ತಯಾರಾಗಿರುವ ಕಾರಣ ಮತ್ತೆ ಲವ್ ಕಮ್ ಮ್ಯಾರೇಜ್ ಸ್ಟೋರಿ ಶುರುವಾಗುತ್ತದೆ. 

ಲೋಟ ಮುರಿದು ಹಾಕಿದ ನಿಧಿ ಸುಬ್ಬಯ್ಯಗೆ ಬಿಗ್‌ ಬಾಸ್‌ ಕೊಟ್ಟ ಶಿಕ್ಷೆ ಇದು! 

ಇತ್ತೀಚಿಗೆ 100 ಸಂಚಿಕೆ ಪೂರೈಸಿದ 'ಸತ್ಯ' ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಸತ್ಯ ಪ್ರೀತಿಸುತ್ತಿರುವ ಹುಡುಗನೇ ತನ್ನ ಅಕ್ಕನನ್ನೂ ಮದುವೆ ಆಗುತ್ತಿರುವುದು ಎಂದು ಸ್ನೇಹಿತರಿಗೆ ಬಿಟ್ಟರೆ ಯಾರಿಗೂ ತಿಳಿದಿಲ್ಲ. ಸಿರಿವಂತ ಹುಡುಗನೇ ಬೇಕು ಎನ್ನುತ್ತಿದ್ದ ಅಕ್ಕ ಈಗ ದೇವಸ್ಥಾನದಲ್ಲಿ ಮದುವೆ ಆಗುತ್ತಾಳಾ? ಈಗ ಮೊದಲ ಸ್ಥಾನದಲ್ಲಿ ಸೊಳ್ಳೆಪೊಳ್ಳೆ ಲವ್ ಸ್ಟೋರಿ ಬಂದು ಕೂತಿದೆ. ಅಂದ್ರೆ 'ಗಟ್ಟಿಮೇಳ' ಧಾರಾವಾಹಿ. ವೇದಾಂತ್ ತನ್ನ ಬಾಳ ಸಂಗಾತಿಯನ್ನು ಮಾಧ್ಯಮಗಳ ಎದುರು ಪರಿಚಯ ಮಾಡಿಕೊಟ್ಟ ನಂತರ ಹಾಸಿಗೆ ಹಿಡಿದಿದ್ದ ಮಾಜಿ ಪ್ರೇಮಿ, ಕತೆಗೆ ಎಂಟ್ರಿ ಕೊಟ್ಟಿದ್ದಾಳೆ. ದಿನದಿಂದ ದಿನಕ್ಕೆ ಈ ಕಥೆಗೆ ಹೊಸ ಟ್ವಿಸ್ಟ್‌ ನೀಡುತ್ತಿದ್ದಾರೆ.  

ಒಟ್ಟಿನಲ್ಲಿ ಜನತಾ ಕರ್ಫ್ಯೂನಿಂದ ಮನೆಯಲ್ಲಿರುವ ಜನರಿಗೆ ಆಲ್‌ ಟೈಮ್ ಎಂಟರ್ಟೈನ್‌ಮೆಂಟ್‌ ನೀಡುತ್ತಿದೆ ನಮ್ಮ ಕಿರುತೆರೆ ವಾಹಿನಿಗಳು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಅಲ್ಲಿ ಸಾಯಿಸೋಕೇ ರೆಡಿಯಾಗಿದ್ರೆ ಇಲ್ಲಿ ಕುಣೀತಿದ್ದಾಳಲ್ಲಪ್ಪಾ Na Ninna Bidalaare ದುರ್ಗಾ?