ಇನ್ನೆರಡು ವರ್ಷಗಳಲ್ಲಿ ಮಂಜು ಪಾವಗಡ ಸಾಧನೆ ಲಿಸ್ಟ್‌ನಲ್ಲಿ ಏನೆಲ್ಲಾ ಇವೆ ಗೊತ್ತಾ?

Suvarna News   | Asianet News
Published : May 04, 2021, 02:27 PM IST
ಇನ್ನೆರಡು ವರ್ಷಗಳಲ್ಲಿ ಮಂಜು ಪಾವಗಡ ಸಾಧನೆ ಲಿಸ್ಟ್‌ನಲ್ಲಿ ಏನೆಲ್ಲಾ ಇವೆ ಗೊತ್ತಾ?

ಸಾರಾಂಶ

ಆತ್ಮೀಯ ಸ್ನೇಹಿತೆ ದಿವ್ಯಾ ಸುರೇಶ್ ಬಳಿ ತಮ್ಮ ಜೀವನದ ಮುಂದಿನ ಕನಸುಗಳನ್ನು ಹಂಚಿಕೊಂಡ ಮಂಜು ಪಾವಗಡ.

ಬಿಗ್ ಬಾಸ್‌ 8 ಸೀಸನ್‌ನಲ್ಲಿ ಹಾಸ್ಯ ಕಲಾವಿದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಒಳ್ಳೆಯ ಸ್ನೇಹಿತರು. ಅದೇನೇ ಕಷ್ಟ ಬಂದರೂ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಬೇಷ್ ಎನ್ನುತ್ತಾ, ತಪ್ಪು ಮಾಡಿದಾಗ ಮುಖಕ್ಕೆ ಹೊಡೆದಂತೆ ಮಾತನಾಡುವಷ್ಟು ಆತ್ಮೀಯತೆ ಹೊಂದಿರುವ ಸ್ನೇಹಿತರು. 

ಹುಷಾರು ಕಣ್ರೋ ಚಕ್ರವರ್ತಿ ಚಂದ್ರಚೂಡ್‌ ಸಾಯಿಸೋಕೆ ಬಂದಿರೋದು: ಲ್ಯಾಗ್ ಮಂಜು 

ದಿನದ ಅಂತ್ಯದಲ್ಲಿ ಇಬ್ಬರೂ ಕೂತು ದಿನ ಹೇಗಿತ್ತು, ಏನೆಲ್ಲಾ ಮಾಡಿದರು ಹಾಗೂ ಯಾರು ಏನು ತಪ್ಪು ಮಾಡಿದರೆಂಬುವುದಾಗಿ ಚರ್ಚೆ ಮಾಡುತ್ತಾರೆ. ಈ ವೇಳೆ ದಿವ್ಯಾ '2 ವರ್ಷಗಳ ನಂತರ  ನಿನ್ನನ್ನು ನೀನು ಎಲ್ಲಿ ನೋಡಿಕೊಳ್ಳೊಕೆ ಬಯಸುತ್ತೀಯಾ' ಎಂದು ಕೇಳಿದರು. ಒಂದು ನಿಮಿಷ ಗಾಡವಾಗಿ ಚಿಂತಿಸಿದ ಮಂಜು ಉತ್ತರ ನೀಡಿದ್ದು ಹೀಗೆ....

'ನಾನು ಒಳ್ಳೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು. ಬಹುಶಃ ಕ್ಯಾರೆಕ್ಟರ್ ಆರ್ಟಿಸ್ಟ್ ಎಂದರೆ ತಪ್ಪಾಗಬಹುದು. ಹೀಗಾಗಿ, ನಾನೊಬ್ಬ ಒಳ್ಳೆ ನಟ ಆಗಬೇಕು. ನನಗೆ ಯಾವ ಪಾತ್ರ ಕೊಟ್ಟರೂ ಜೀವಿಸಬೇಕು. ಅನಂತ್ ನಾಗ್, ಪ್ರಕಾಶ್ ರೈ, ಸುದೀಪ್ ಅವರು ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಅವರ ತರ ನಾನು ಆಗಬೇಕು. ಒಬ್ಬ ಕಥೆ ಬರೆಯುವಾಗ ಪಾತ್ರ ಸೃಷ್ಟಿ ಮಾಡುವಾಗ ಬರಿ 20% ಮಾತ್ರ ಕಲ್ಪನೆ ಮಾಡಿಕೊಂಡಿರುತ್ತಾರೆ. ಆ ಪಾತ್ರಕ್ಕೆ ಜೀವ ತುಂಬೋದು ನಟನ ಕೆಲಸ. ಮಂಜುಗೆ ಪಾತ್ರ ಕೊಟ್ಟರೆ ಸಾಕು ಅದನ್ನು ಸರಿಯಾಗಿ ನಿರ್ವಹಿಸುತ್ತಾನೆ ಎಂಬ ಭರವಸೆ  ನಿರ್ದೇಶಕರಿಗೆ ಬರಬೇಕು ಅಂತಹ ಸಾಧನೆ ಮಾಡಬೇಕು,'ಎಂದು ಮಂಜು ತಮ್ಮ ಕನಸನ್ನು ಬಿಚ್ಚಿಟ್ಟರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?
ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?