ಸತ್ತರೂ ಬದುಕೋದು, ಸ್ಕೂಟರನ್ನು ವಿಮಾನದಂತೆ ಹಾರಿಸೋದು ಸಾಧ್ಯವಾಗಿಸೋ ಟಿವಿ ಸೀರಿಯಲ್ಸ್!

Published : Jul 07, 2023, 03:59 PM IST
ಸತ್ತರೂ ಬದುಕೋದು, ಸ್ಕೂಟರನ್ನು ವಿಮಾನದಂತೆ ಹಾರಿಸೋದು ಸಾಧ್ಯವಾಗಿಸೋ ಟಿವಿ ಸೀರಿಯಲ್ಸ್!

ಸಾರಾಂಶ

ಧಾರಾವಾಹಿಗಳಲ್ಲಿ ಬರುವ ಕಲ್ಪನಾತೀತ ಪಾತ್ರಗಳಿಗೆ ಲೆಕ್ಕವೇ ಇಲ್ಲ. ನೋಡುಗರಲ್ಲಿ ನಗು ಹುಟ್ಟಿಸುವ ಅಸಮಾನ್ಯ ಎನ್ನಿಸುವ ಕೆಲವು ದೃಶ್ಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.   

ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ನಟನೆಯ ಪುಟ್ಟ ಗೌರಿ ಮದುವೆ ನೆನಪಿರಬಹುದು ನಿಮಗೆ. ಸಾನ್ಯಾ ಅಯ್ಯರ್ (Sanya Iyer) ಬಾಲ ನಟಿಯಾಗಿ ಅಭಿನಯಿಸಿದ ಈ ಸೀರಿಯಲ್ ಹಿಂದಿಯ ಬಾಲಿಕಾ ವಧುವಿನ ಕನ್ನಡ ಅವತರಿಣಿಕೆ. ಬಾಲ್ಯ ವಿವಾಹವಾಗಿ ಜೀವನದಲ್ಲಿ ಹೋರಾಡುವ ಗೌರಿಯ ಕಥೆ ಇದು. ಕಡೆ ಕಡೇಗಂಥೂ ಈ ಸೀರಿಯಲ್‌ನಲ್ಲಿ ಆ್ಯನಿಮೇಷನ್‌ದ್ದೇ ಆಟ ಹೆಚ್ಚಾಗಿತ್ತು. ಕಾಡಲ್ಲಿ ಹೋಗಿ ಸಿಂಹ, ಹುಲಿ ಜೊತೆ ಸೆಣಸಾಡೋ ಗೌರಿ, ಎಂಥದ್ದೇ ಅಪಾಯ ಎದುರಾದರೂ ಸಾಯುವುದಿಲ್ಲ. ಕನ್ನಡ ಸೀರಿಯಲ್ ಈ ಎಪಿಸೋಡ್ಸ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಇದೇನಪ್ಪಾ, ಗೌರಿ ಸಾಯುವುದೇ ಇಲ್ವಾ? ಅಂತ ಸೋಷಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಲೆಳೆಯುತ್ತಿದ್ದರು. ಅಷ್ಟೇ ಅಲ್ಲ, ಒಮ್ಮೆ ಸತ್ತು ಹೋದ ಗೌರಿಯನ್ನು, ಮಣ್ಣಿನಲ್ಲಿ ಹೂಳಿದ ಮೇಲೂ ಬದುಕಿ ಬಂದಿದ್ದು ಈ ಸೀರಿಯಲ್ ವಿಶೇಷ. ಅಂದ ಮಾತ್ರಕ್ಕೆ ಇದು ಕನ್ನಡ ಧಾರಾವಾಹಿಗಳಲ್ಲಿ ಅಂದುಕೊಳ್ಳಬೇಡಿ. ಎಲ್ಲಾ ಭಾಷೆಯ ಧಾರಾವಾಹಿಗಳಲ್ಲಿಯೂ ಇದೇ ಕಥೆ. ಒಟ್ಟಿನಲ್ಲಿ ಸೀರಿಯಲ್‌ಗಳು ಮಾತ್ರ ಇಂಥ ಚಿತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಲು ಸಾಧ್ಯವಾಗಿದ್ದು, ಈ ಕೆಳಗಿನ ಸೂಪರ್ ವಂಡರ್ಸ್ ಸಹ ಸೀರಿಯಲ್‌ನಲ್ಲಿಯೇ ಮಾತ್ರ ನಡೆಯುತ್ತೆ! 

ಇಷ್ಕ್ ಕಿ ದಾಸ್ತಾನ್ - ನಾಗಮಣಿ ಶೋ (Ishq Ki Dastaan – Naagmani show) ಧಾರಾವಾಹಿಯಲ್ಲಿ  ಪಾರೋ ಪಾತ್ರಧಾರಿಯಾಗಿರುವ ಅಲೆಯಾ ಘೋಷ್  ಪತಿಯನ್ನು ರಕ್ಷಿಸಲು  ಸ್ಕೂಟರ್ ಸವಾರಿ ಮಾಡಿ ಚಂದ್ರನ ಮೇಲೆ ಇಳಿಯುತ್ತಾಳೆ!  ಹಾವಾಗಿಯೂ ಬದಲಾಗಬಲ್ಲ ಪಾರೋ, ಉಪಗ್ರಹದಲ್ಲಿ ಸಿಲುಕಿರುವ ತನ್ನ ಪತಿ ಮತ್ತು ಮಗುವನ್ನು ರಕ್ಷಿಸಲು  ಟೆರೇಸ್‌ ಮೇಲಿರುವ  ಸ್ಕೂಟರ್​ನಿಂದ ನೇರವಾಗಿ  ಚಂದ್ರನ ಮೇಲೆ  ಇಳಿಯುತ್ತಾಳೆ. ಈ ವಿಲಕ್ಷಣ ಕ್ಲಿಪ್‌ಗೆ ಯಾರ ರೀತಿಯ ಪ್ರತಿಕ್ರಿಯೆಗಳು ಬಂದಿರಬಹುದು ಎಂದು ಬೇರೆ ಹೇಳಬೇಕಾಗಿಲ್ಲ.  ಅದೇ ರೀತಿ,  ಇಷ್ಕ್ ಮೇ ಮರ್​ಜಾನಾ-2 (Ishq Mein Marjawan 2)ನಲ್ಲಿ ರಿದ್ಧಿಮಾ ಪಾತ್ರವನ್ನು ನಿರ್ವಹಿಸಿದ ಹೆಲ್ಲಿ ಷಾಳ ತಲೆ ಗೋಡೆಗೆ ಗುದ್ದಿದಾಗ ಆಕೆ ನೇರವಾಗಿ ಸೂಟ್‌ಕೇಸ್‌ನಲ್ಲಿ ಬೀಳುತ್ತಾಳೆ! ನಂತರ  ದುಷ್ಕರ್ಮಿಗಳು ಈ ಸೂಟ್​ಕೇಸ್​ ಅನ್ನು ಹೊತ್ತುಕೊಂಡು ಹೋಗಿ ಕೊಳದಲ್ಲಿ ಎಸೆಯುತ್ತಾರೆ.

ನಟ ಅವಿನಾಶ್​ ಮೋಸ ಮಾಡ್ದ, ತಂದೆಗೆ ಹೃದಯಾಘಾತವಾಯ್ತು ಎಂದು ಕಣ್ಣೀರಿಟ್ಟ ಕಿರುತೆರೆ ನಟಿ

‘ತೇರೆ ವಾಸ್ತೆ ಚಾಂದ್ ತಾರೆ ಥೋಡ್ ಲಾವೂ’ (Tere vaaste Chaand Taare tod lau) ಧಾರಾವಾಹಿಯಲ್ಲಿ  ದೇವದೂತರ ಶಕ್ತಿಯನ್ನು ಹೊಂದಿರುವ  ನಾಯಕಿ ರೋಷನಿ,  ತನಗಾಗಿ ಚಂದ್ರನನ್ನು ತರುವ  ವ್ಯಕ್ತಿಯನ್ನು ಮದುವೆಯಾಗುವುದಾಗಿ ಘೋಷಿಸುತ್ತಾಳೆ.  ನಂತರ ನಾಯಕ  ಚಂದ್ರನನ್ನು ಕೆಳಕ್ಕೆ ಎಳೆಯಲು ಹಗ್ಗವನ್ನು ಬಳಸುತ್ತಾನೆ. ಆದರೆ ಅದು  ಕೆಲಸ ಮಾಡದಿದ್ದಾಗ, ಚಂದ್ರನ ತುಂಡನ್ನು ಪಡೆಯಲು ಅವನು ತನ್ನ ಕಾರಿನಲ್ಲಿ ಬಾಹ್ಯಾಕಾಶಕ್ಕೆ ಹೋಗುತ್ತಾನೆ! ಇನ್ನು ಥಪ್ಕಿ ಪ್ಯಾರ್ ಕಿ (Thapki Pyaar Ki) ಧಾರಾವಾಹಿಯ  ಸಿಂಧೂರ್ ದೃಶ್ಯದ ಪ್ರೋಮೋ ಸಕತ್​ ವೈರಲ್​ ಆಗಿದೆ. ಇದರಲ್ಲಿ  ನಾಯಕಿ ಥಪ್ಕಿ  ಸ್ನಾನದ ನಂತರ ಕನ್ನಡಿಯ ಮುಂದೆ ನಿಂತಿರುವುದು ಕಂಡುಬರುತ್ತದೆ, ಆಕೆಯ ಹಣೆಯ ಮೇಲೆ ಸಿಂಧೂರ ಇರುವುದಿಲ್ಲ. ಅದೇ ಸಮಯದಲ್ಲಿ  ಆಕೆಯ ಪತಿ, ಪುರಬ್ ನೆಲದ ಮೇಲೆ ಇದ್ದ ನೀರಿನಲ್ಲಿ ಕಾಲಿಟ್ಟು ಜಾರುತ್ತಾನೆ. ನಂತರ  ತೋಳುಗಳಿಂದ ಪತ್ನಿಯನ್ನು ಬಳಸಿಕೊಳ್ಳುತ್ತಾನೆ. ಆತನ ಕೈಯಲ್ಲಿ ಸಿಂಧೂರ ತಂತಾನೇ ಬರುತ್ತದೆ. ಅದು ಆತನಿಗೆ ತಿಳಿಯದೇ  ಅವಳ ಹಣೆಗೆ ಲೇಪನಗೊಳ್ಳುತ್ತದೆ.
 
ಸಂಗೀತಾ ಘೋಷ್ ಅಭಿನಯದ ಸ್ವರಣ್ ಘರ್ (Swaran Ghar)ನಲ್ಲಿ  ನಾಯಕಿ ಸ್ವರ್ಣಾ  ತನ್ನ ದುಪಟ್ಟಾವನ್ನು ಹೆಗಲ ಮೇಲೆ ಹಾಕಿಕೊಳ್ಳುವಾಗ  ಆಕಸ್ಮಿಕವಾಗಿ ಆನ್​ ಆಗಿರುವ  ಫ್ಯಾನ್​ಗೆ  ಸಿಲುಕಿಕೊಳ್ಳುತ್ತದೆ. ಅದನ್ನು ಸರಿಪಡಿಸಿಕೊಳ್ಳಲು ಹೋದಾಗ  ಅವಳ ಕುತ್ತಿಗೆಗೆ ದುಪ್ಪಟ್ಟಾ ಬಿಗಿಯುತ್ತದೆ  ಜೀವಕ್ಕಾಗಿ ಹೋರಾಡುತ್ತಾಳೆ. ಆ ಸಮಯದಲ್ಲಿ ನಾಯಕ ನಟ ಅಜಿತ್  ಸ್ವರ್ಣಳನ್ನು ಉಳಿಸಲು ಹಾರಿ ಹೋಗಿ  ಹಲ್ಲುಗಳಿಂದ ದುಪಟ್ಟಾವನ್ನು ಹರಿದು ಹಾಕುತ್ತಾನೆ!

ಹುಡುಗಿ ಪಾತ್ರ ಮಾಡೋದೇ ಇಲ್ಲ ಜನರು ಅಣಕಿಸುತ್ತಿದ್ದಾರೆ: ಗಿಚ್ಚಿ ಗಿಲಿಗಿಲಿ ರಾಘು ಕಣ್ಣೀರು!  

ಇವೆಲ್ಲಕ್ಕಿಂತಲೂ ಟಾಪ್​ನಲ್ಲಿ ಇರುವುದು ಸಾಥ್ ನಿಭಾನ ಸಾಥಿಯಾದ (Saath Nibhaana Saathiya) ಧಾರಾವಾಹಿ.  ಗೋಪಿ ಬಹು (ಗಿಯಾ ಮಾನೆಕ್) ಲ್ಯಾಪ್‌ಟಾಪ್ ಅನ್ನು ಸೋಪಿನೊಂದಿಗೆ ತೊಳೆಯುವ ದೃಶ್ಯವಿದೆ. ಇದಂತೂ ಹಲವಾರು ರೀತಿಯ ಮೀಮ್ಸ್​ ಜೊತೆ ಸಕತ್​ ವೈರಲ್​  ಆಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?