ವೇದಿಕೆ ಮೇಲೆ ಸೀಮಂತ; ಕುಣಿದು ಕುಪ್ಪಳಿಸಿದ ಗರ್ಭಿಣಿ ಮಯೂರಿ!

Published : Jan 09, 2021, 11:29 AM IST
ವೇದಿಕೆ ಮೇಲೆ ಸೀಮಂತ; ಕುಣಿದು ಕುಪ್ಪಳಿಸಿದ ಗರ್ಭಿಣಿ ಮಯೂರಿ!

ಸಾರಾಂಶ

ಸಂಕ್ರಾಂತಿ ಹಬ್ಬಕ್ಕೆ ಬರಲಿದೆ ಸ್ಟಾರ್ ಸುವರ್ಣ ಸ್ಪೆಷಲ್ ಕಾರ್ಯಕ್ರಮ. ನಟಿ ಮಯೂರಿ ಸೀಮಂತ ಮಾಡಿದ ನಟಿಮಣಿಯರು... 

ಪಾಚು ಅಲಿಯಾಸ್ ಶಾಲಿನಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ 'ಸುವರ್ಣ ಸೂಪರ್ ಸ್ಟಾರ್‌' ರಿಯಾಲಿಟಿ ಶೋನಲ್ಲಿ ಇದೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ನಟಿ ಮಯೂರಿಗೆ ಸೀಮಂತ  ಮಾಡಿದ್ದಾರೆ. ಪತಿ ಅರುಣ್ ಜೊತೆ ಮಯೂರಿ ಹೆಜ್ಜೆ ಹಾಕಿರುವುದನ್ನು ನೋಡಿ ವೀಕ್ಷಕರ ಮೆಚ್ಚಿಕೊಂಡಿದ್ದಾರೆ.

ಸಂಕ್ರಾಂತಿ ಸಂಚಿಕೆಯಲ್ಲಿ ಶಾಲಿ  ನಡೆಸಿಕೊಡುವ ಕಾರ್ಯಕ್ರಮದಲ್ಲಿ ಸ್ಪರ್ಶ ರೇಖಾ, ವನಿತ ವಾಸು ಹಾಗೂ ಸಂಗೀತ ಸ್ಪರ್ಧಿಗಳಾಗಿ ಆಗಮಿಸಲಿದ್ದಾರೆ.  ಇದೇ ಎಪಿಸೋಡ್‌ನಲ್ಲಿ ನಟಿ ಮಯೂರಿಗೆ ಸೀಮಂತ ಮಾಡಲಾಗುತ್ತದೆ. ಜೊತೆ ಮಯೂರಿ ಪತಿ ಅರುಣ್ ಜೊತೆ ಹೆಜ್ಜೆ ಹಾಕಿದ್ದಾರೆ. ಪ್ರೋಮೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.

ನಟಿ ಮಯೂರಿ ಸರಳ ಸೀಮಂತ; ಪುಟ್ಟ ಕಂದಮ್ಮನ ಆಗಮಕ್ಕೆ ಕಾಯುತ್ತಿದೆ ಕುಟುಂಬ! 

ಜೂ.12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಯೂರಿ ಶೀಘ್ರವೇ ಕುಟುಂಬಕ್ಕೆ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಮಯೂರಿ ತನ್ನ ಪ್ರೆಗ್ನೆಂಸಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಹಾಗೂ ಇನ್ನಿತ್ತರ ಗರ್ಭಿಣಿಯರ ಜೊತೆ ಕೆಲವೊಂದು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈ ಬಾರಿ ಬಿಗ್ ಬಾಸ್ ಗೆದ್ದವರಿಗೆ ಸಿಗುವ ಬಹುಮಾನ ಮೊತ್ತವೆಷ್ಟು? ನಾಳೆ ಗ್ರ್ಯಾಂಡ್ ಪ್ರೀಮಿಯರ್
BBK 13: ಬಿಗ್‌ ಬಾಸ್ ಆರಂಭಕ್ಕೂ ಮುನ್ನವೇ ಕಿಚ್ಚನ ಸರ್ಪ್ರೈಸ್ ಎಂಟ್ರಿ: ಹೊಸ ಮನೆ ಹೇಗಿದೆ ಗೊತ್ತಾ?