ಕೊರೋನಾ ಕಾಟ: ಬಿಗ್ ಬಾಸ್‌ ರಿಯಾಲಿಟಿ ಶೋಗೆ ತಟ್ಟಿದ ಬಿಸಿ, ಶೋ ಕ್ಯಾನ್ಸಲ್!

Suvarna News   | Asianet News
Published : Mar 18, 2020, 02:54 PM IST
ಕೊರೋನಾ ಕಾಟ: ಬಿಗ್ ಬಾಸ್‌ ರಿಯಾಲಿಟಿ ಶೋಗೆ ತಟ್ಟಿದ ಬಿಸಿ, ಶೋ ಕ್ಯಾನ್ಸಲ್!

ಸಾರಾಂಶ

ಎಲ್ಲೆಡೆ ಹಬ್ಬುತ್ತಿದೆ ಕೊರೋನಾ ವೈರಸ್‌. ಖ್ಯಾತ ರಿಯಾಲಿಟಿ ಶೋಗೂ ಬಿತ್ತು ಬ್ರೇಕ್. ಈಗಾಗಲೇ ಹಲವು ಧಾರಾವಾಹಿ ಹಾಗೂ ಚಿತ್ರಗಳ ಶೂಟಿಂಗ್ ಸ್ಥಗಿತಗೊಂಡಿದೆ. ಆದರೆ, ಅರಮನೆಯಂಥ ಮನೆಯಲ್ಲಿ ಬಂಧಿತರಾಗಿ, ಆಡುವ ಬಿಗ್‌ಬಾಸ್‌ಗೂ ಬಿತ್ತು ಬ್ರೇಕ್! 

ಕೊರೋನಾ ವೈರಸ್‌ ಹೆಚ್ಚಾದ ಕಾರಣ ಮನೋರಂಜನಾ ಕ್ಷೇತ್ರದಲ್ಲಿ ನಡೆಯಬೇಕಿದ್ದ ಸಾಕಷ್ಟು ಕಾರ್ಯಕ್ರಮಗಳಿಗೆ ಈಗಾಗಲೇ ಬಿಗ್ ಬ್ರೇಕ್‌ ಬಿದ್ದಿದೆ. ಅದರಲ್ಲೂ ಮಾಲಯಾಳಂ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್‌ ಸೀಸನ್-2' ಸಹ ಇದೀಗ ಸೇರ್ಪಡೆಯಾಗಿದೆ.

ಸೀಸನ್‌ ಶುರುವಾದಾಗಿನಿಂದಲೂ ಅಡೆ ತಡೆಗಳನ್ನು ಎದುರಿಸುತ್ತಾ, ಸಂಕಷ್ಟದಲ್ಲಿರುವ ರಿಯಾಲಿಟಿ ಶೋಗೆ ಬ್ರೇಕ್‌ ಬಿದ್ದಿರುವುದನ್ನು ಕೇಳಿ ವೀಕ್ಷಕರು ಬೇಸರಗೊಂಡಿದ್ದಾರೆ. ಕಾರ್ಯಕ್ರಮ ನಿರ್ಮಾಪಕರಾದ Endemol Shine ಸಂಸ್ಥೆ ಇತ್ತೀಚಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. 'ಕೊರೋನಾ ವೈರಸ್‌ ಕಡಿಮೆ ಆಗುವವರೆಗೂ ಆಡಳಿತ ಮತ್ತು ನಿರ್ಮಾಣ ಇಲಾಖೆ ಕೆಲಸಗಳು ಸ್ಥಗಿತಗೊಳ್ಳುತ್ತದೆ' ಎಂದು. ಆದರೆ ರಿಯಾಲಿಟಿ ಶೋ ನಡೆಯುವುದರ ಬಗ್ಗೆ ಯಾವುದೇ ಖಚಿತ ಮಾಹಿತಿಯೂ ನೀಡಿಲ್ಲ.

ಕೊರೋನಾ ಎಚ್ಚರಿಕೆ ಪಾಲಿಸಿದ ಬಿಗ್ ಬಾಸ್ ಸ್ಪರ್ಧಿ ಅರೆಸ್ಟ್!

ಒಬ್ಬೊಬ್ಬರಾಗಿ ಸ್ಪರ್ಧಿಗಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್‌ಜೆ ರಾಘು, ಅಲಾಸಂದ್ರಾ, ಸುಜೋ, ದಯಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ತಕ್ಷಣವೇ ಸಂಸ್ಥೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ರಜತ್‌ ಕುಮಾರ್‌ ಖಾರದ ಪುಡಿಯನ್ನು ಪ್ರತಿಸ್ಪರ್ಧಿ ರೇಷ್ಮಾಳಿಗೆ ಎರಚಿದ ಕಾರಣ ಕಣ್ಣಿನ ಸೋಂಕು ಆಗಿದ್ದು ರಿಯಾಲಿಟಿ ಶೋನಿಂದಾನೇ ಹೊರ ಹೋಗಿದ್ದಾರೆ. 

ಬಿಗ್ ಬಾಸ್‌ ಸೀಸನ್‌-2, 10 ಸ್ಪರ್ಧಿಗಳ ಜೊತೆ ಕೇವಲ ನಾಲ್ಕು ವಾರದಲ್ಲಿ ಫಿನಾಲೆ ತಲುಪುವುದರಲ್ಲಿತ್ತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?