ಪ್ರಸಾರ ನಿಲ್ಲಿಸಿದ ಸೃಜನ್ ಲೋಕೇಶ್ 'ಮಜಾ ಟಾಕೀಸ್'!

Suvarna News   | Asianet News
Published : Jul 05, 2021, 05:31 PM IST
ಪ್ರಸಾರ ನಿಲ್ಲಿಸಿದ ಸೃಜನ್ ಲೋಕೇಶ್ 'ಮಜಾ ಟಾಕೀಸ್'!

ಸಾರಾಂಶ

ಹೊಸ ರೂಪದಲ್ಲಿ ವೀಕ್ಷಕರನ್ನು ಮನೋರಂಜಿಸಲು ಮಜಾ ಟಾಕೀಸ್‌ಗೆ ಸ್ವಲ್ಪ ಬ್ರೇಕ್.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಟಾಕ್‌ ಶೋ 'ಮಜಾ ಟಾಕೀಸ್‌'ಗೆ ಸ್ವಲ್ಪ ದಿನಗಳ ಕಾಲ ಬ್ರೇಕ್‌ ಬೀಳಲಿದೆ. ಲೋಕೇಶ್ ಪ್ರೊಡಕ್ಷನ್‌ನಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್‌ ಜುಲೈ 3 ಮತ್ತು 4ರಂದು ಗ್ರ್ಯಾಂಡ್ ಫಿನಾಲೆ ಮುಗಿಸಿದೆ. 

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗಿಯಾಗಿದ್ದರು. ಮಜಾ ಟಾಕೀಸ್‌ ಮತ್ತು ಲೋಕೇಶ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರಿಗೂ ಸೃಜನ್ ವೇದಿಕೆಯ ಮೇಲೆ ಕರೆದು, ಧನ್ಯವಾದಗಳನ್ನು ತಿಳಿಸಿದ್ದಾರೆ. ಹೊಸ ರೂಪದಲ್ಲಿ ಜನರನ್ನು ಮನೋರಂಜಿಸಲು ಸೃಜನ್ ರೆಡಿಯಾಗುತ್ತಿದ್ದಾರೆ. ಕಾರ್ಯಕ್ರದ ಅಂತ್ಯದಲ್ಲಿ ಉಪೇಂದ್ರ ಡಾ.ರಾಜ್‌ಕುಮಾರ್ ಹೇಳಿದ ಮಾತನ್ನು ನೆನೆದಿದ್ದಾರೆ. 

'ರಾಮ ರಾಜ್ಯ ಬಿಟ್ಟು ವನವಾಸಕ್ಕೆ ಹೋಗುವಾಗ ಎಲ್ಲರೂ ಉಟ್ಟ ಬಟ್ಟೆಯಲ್ಲಿ ಆತನನ್ನು ಹಿಂಬಾಲಿಸುತ್ತಾರೆ. ಅಣ್ಣ ಪಾದುಕೆ ಹಿಡಿದು ರಾಜ್ಯ ನಡೆಸುವೆ ಎಂದು ಭರತ ಹೇಳುತ್ತಾನೆ. ಅಲ್ಲೇ ಅರ್ಥ ಆಗಬೇಕು ರಾಮ ಎಂಥ ಗ್ರೇಟ್ ವ್ಯಕ್ತಿ ಎಂದು. ಈಗ  ಎಲ್ಲಕ ಮಾತು ಕೇಳಿದರೆ ನನ್ನ ಸೃಜನ್‌ ಕೂಡ ರಾಮ್ ಅನಿಸುತ್ತಾರೆ,' ಎಂದು ಉಪೇಂದ್ರ ಹೇಳಿದ್ದಾರೆ. ವೀಕ್ಷಕರಿಗೆ ಹಾಗೂ ತಮ್ಮ ತಂಡದವರಿಗೆ ಸೃಜನ್  ಮಂಡಿಯೂರಿ ನಮಸ್ಕರಿಸಿದ್ದಾರೆ.

ಸೃಜನ್ ಲೋಕೇಶ್ ಯೂಟ್ಯೂಬ್ ಚಾನಲ್ ಆರಂಭ! 

ನಟ ಹಾಗೂ ನಿರೂಪಕನಾಗಿ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಇದೀಗ ಯುಟ್ಯೂಬ್ ಚಾನೆಲ್‌ವೊಂದನ್ನು ತೆರೆದಿದ್ದಾರೆ. ರೈಡರ್, ಟ್ರಾವೆಲರ್ ಮತ್ತು ಒಳ್ಳೆಯ ಕುಕ್ ಕೂಡ ಆಗಿರುವ ಸೃಜನ್‌ ತಮ್ಮ ಪ್ರತಿಭೆಗಳ ಅನಾವರಣ ಇಲ್ಲಿ ನಡೆಯಲಿದೆ. ಅಲ್ಲದೆ ನಟಿ ಗಿರಿಜಾ ಲೋಕೇಶ್ ಕೂಡ ಚಿತ್ರರಂಗಕ್ಕೆ ಹಾಗೂ ಜೀವನಕ್ಕೆ ಸಂಬಂಧಿಸಿ ಕಥೆಗಳನ್ನು ಈ ಚಾನೆಲ್‌ನಲ್ಲಿ ಹಂಚಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?