
ಬಿಗ್ ಬಾಸ್ ಸೀಸನ್ 8ರಲ್ಲಿ ಯಾರು, ಯಾರಿಗೆ ಬೆಸ್ಟ್ ಫ್ರೆಂಡ್? ಯಾರು ಯಾರಿಗೆ ದುಶ್ಮನ್ ಅಂತ ಮಾತ್ರ ಹೇಳೋಕೆ ಆಗೋಲ್ಲ ನೋಡಿ. ಹಾವು ಮುಂಗುಸಿ ತರ ಕಿತ್ತಾಡುತ್ತಿದ್ದ ಪ್ರಿಯಾಂಕಾ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ವೀಕೆಂಡ್ ಮಾತುಕತೆ ನಂತರ ದೊಡ್ಡ ಮಟ್ಟದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪ್ರಿಯಾಂಕಾ ಮುಖದಲ್ಲಿ ಕೋಪ ಕಂಡು ಸದಸ್ಯರು ಗಾಬರಿ ಆಗಿದ್ದಾರೆ.
ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ 3 ಕೆಜಿ ತೂಕ ಇಳಿಸಿದೆ: ಪ್ರಿಯಾಂಕಾ ತಿಮ್ಮೇಶ್
ಸುದೀಪ್ ಎದರು ಪ್ರಿಯಾಂಕಾಳ ವ್ಯಕ್ತಿತ್ವದ ಬಗ್ಗೆ ಚಕ್ರವರ್ತಿ ದೂರು ನೀಡಿದ ಕಾರಣ ಇಬ್ಬರ ನಡುವೆ ಮನಸ್ತಾಪ ಸೃಷ್ಚಿಯಾಗಿದೆ. ಪ್ರಿಯಾಂಕಾ ಎಲ್ಲರೊಂದಿಗೆ ಉತ್ತಮ ಸ್ನೇಹಿ ಹೊಂದಿದ್ದಾರೆ. ಆದರೆ ನಾನು ಮಾತನಾಡಿಸಿದರೆ ಮಾತ್ರ ತಪ್ಪಾಗಿ ವರ್ತಿಸುತ್ತಾರೆ ಎಂದು ಹೇಳಿದ್ದಾರೆ. ಚಕ್ರವರ್ತಿ ಮಾತಗಳನ್ನು ನೆಟ್ಟಿಗರು ತಪ್ಪಾಗಿ ತೆಗೆದುಕೊಳ್ಳುತ್ತಾರೆ, ಬಿಗ್ ಬಾಸ್ ಮನೆಯಿಂದ ಹೊರಗೆ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ಬರುತ್ತಿದೆ ಎಂದು ಪ್ರಶಾಂತ್ ಮತ್ತು ಶಮಂತ್ ಬಳಿ ಪ್ರಿಯಾಂಕಾ ಅಳುತ್ತಾರೆ.
ಈ ವಿಚಾರಕ್ಕೆ ಪ್ರಶಾಂತ್ ಸಂಬರಗಿ-ಚಕ್ರವರ್ತಿ ಚಂದ್ರಚೂಡ್ ನಡುವೆ ಬಿರುಕು?
ದೂರದಿಂದ ಪ್ರಿಯಾಂಕಾ ಅಳುವುದನ್ನು ಗಮನನಿಸಿದ ಚಕ್ರವರ್ತಿ ಮತ್ತೆ ಮಾತು ಶುರು ಮಾಡುತ್ತಾರೆ. ಕಣ್ಣೀರಿಡುತ್ತಾ ಡ್ರಾಮ ಮಾಡುತ್ತಿರುವೆ, ವೀಕೆಂಡ್‌ನಲ್ಲಿ ಏನೇ ಮಾಡಿದರೂ ಹೈಲೈಟ್ ಆಗುತ್ತದೆ ಎಂದು ಹೇಳುತ್ತಾರೆ. 'ನಾನು ಕಣ್ಣೀರು ಹಾಕಿಕೊಂಡು ನಾಟಕ ಮಾಡುತ್ತಿ,ಲ್ಲ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಿ,' ಎಂದು ಮೆಲು ಧ್ವನಿಯಲ್ಲಿ ಕೂಗುತ್ತಾರೆ. ಇದರಿಂದ ಇಡೀ ಮನೆ ಇವರಿಬ್ಬರನ್ನು ತಡೆಯಲು ಮುಂದಾಗುತ್ತದೆ. ಚಕ್ರವರ್ತಿ ಸಹವಾಸವೇ ಬೇಡ ಎಂದು ಪ್ರಿಯಾಂಕಾ ದೂರ ಸರಿದಿದ್ದಾರೆ. ಸೌಂದರ್ಯಾ ತರ ಇದ್ದ ಪ್ರಿಯಾಂಕಾ ಒಂದೇ ಕ್ಷಣದಲ್ಲಿ ನಾಗವಲ್ಲಿಯಾಗಿದ್ದರು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.