ನಿವೇದಿತಾ ಗೌಡ ನಿನ್ನ ವೈಯಾರ, ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ.. ಎಂದ ನೆಟ್ಟಿಗರು!

By Sathish Kumar KH  |  First Published Jul 16, 2024, 7:16 PM IST

ನಟಿ ನಿವೇದಿತಾ ಗೌಡ ಅವರು ಸಿನಿಮಾಗಾಗಿ ಮೇಕಪ್ ಮಾಡಿಸಿಕೊಂಡು ವಿಡಿಯೋ ಶೇರ್ ಮಾಡಿದರೆ, ನಿನ್ನ ವೈಯಾರ,ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ ಎಂದು ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.


ಬೆಂಗಳೂರು (ಜು.16): ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ - ನಿವೇದಿತಾ ಗೌಡ ದಾಂಪತ್ಯದಿಂದ ದೂರವಾಗಿ ತಿಂಗಳು ಕಳೆದಿದೆ. ಸ್ವತಃ ದಂಪತಿಯೇ ದೂರವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಇಬ್ಬರ ಮೇಲಿನ ಕೋಪವನ್ನು ಮಾತ್ರ ಮರೆಯುತ್ತಿಲ್ಲ. ಸಿನಿಮಾ ಪಾತ್ರವೊಂದಕ್ಕೆ ಮೇಕಪ್ ಮಾಡಿಸಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ 'ನಿನ್ನ ವೈಯಾರ,ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ' ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.

ಹೌದು, ಟಿಕ್‌ಟಾಕ್ ಆಪ್ ಇದ್ದಾಗ ಮಾರುದ್ದ ಜಡೆ, ತೆಳ್ಳಗಿನ ಮೈಕಟ್ಟು, ದಂತದ ಗೊಂಬೆಯಂತೆ ತಿದ್ದಿ ತೀಡಿ ಆರ್ಡರ್ ಕೊಟ್ಟು ಮಾಡಿಸಿದಂತಹ ಸುಂದರಿ ಆಗಿದ್ದ ನಿವೇದಿತಾ ಗೌಡ ಅಷ್ಟೇ ಮುಗ್ದೆಯೂ ಆಗಿದ್ದಳು. ನಿವೇದಿತಾ ಗೌಡ ವಿಡಿಯೋ ಮಾಡಿ ಶೇರ್ ಮಾಡಿದರೆ ಲಕ್ಷಾಂತರ ಜನರು ನೋಡಿ ಲೈಕ್ ಮಾಡುತ್ತಿದ್ದರು. ಆದರೆ, ಟಿಕ್‌ಟಾಕ್ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಾ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ಹೀಗಿರುವಾಗ ಬಿಗ್‌ಬಾಸ್ ಮನೆಗೆ ಸೆಲೆಬ್ರಿಟಿಗಳು ಮಾತ್ರವಲ್ಲ ಸಾಮಾನ್ಯ ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ ಎಂಬ ಥೀಮ್‌ನಲ್ಲಿ ಟಿಕ್‌ಟಾಕ್ ರೀಲ್ಸ್‌ನಿಂದ ಫೇಮಸ್ ಆಗಿದ್ದ ನಿವೇದಿತಾ ಗೌಡಗೂ ಅವಕಾಶ ಸಿಕ್ಕಿತ್ತು.

Tap to resize

Latest Videos

ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು; ನಿವೇದಿತಾ ಗೌಡಗೆ ಇದೆಂಥಾ ಕಾಮೆಂಟ್!

ಬಿಗ್‌ಬಾಸ್ ಮನೆಗೆ ಬಂದ ನಿವೇದಿತಾ ಗೌಡ ಮೇಲೆ ರ್ಯಾಪರ್ ಚಂದನ್ ಶೆಟ್ಟಿಗೆ ಕ್ರಶ್ ಆಗಿತ್ತು. ಆದರೆ, ಬಿಗ್‌ಬಾಸ್ ಮನೆಯಲ್ಲಿ ಇದನ್ಯಾವುದನ್ನೂ ತೋರ್ಪಡಿಸದೇ ಸೈಲೆಂಟ್ ಆಗಿದ್ದ ಜೋಡಿ, ಬಿಗ್‌ಬಾಸ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆಯೇ ಒಟ್ಟಿಗೆ ಕಾಣಿಸಿಕೊಂಡು ಪ್ರೀತಿಯಲ್ಲಿ ಬಿದ್ದಿರುವುದನ್ನು ಹೊರಗೆಡವಿದ್ದಾರೆ. ಇದಾದ ನಂತರ ಮೈಸೂರು ದಸರಾ ಮಹೋತ್ಸವದಲ್ಲಿ ಇಬ್ಬರೂ ಪ್ರೇಮ ನಿವೇದನೆ ಮಾಡಿಕೊಂಡು, ಮನೆಯವರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆಯಾಗಿ ಕೆಲ ವರ್ಷ ಸಂಸಾರವನ್ನೂ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಇವರಿಬ್ಬರ ಜೋಡಿಯನ್ನು ನೋಡಿ ದೃಷ್ಟಿ ಮಾಡಿಕೊಂಡವರೇ ಹೆಚ್ಚೆಂದು ಹೇಳಬಹುದು.. ದಂತದ ಗೊಂಬೆಯಂಥಿದ್ದ ನಿವೇದಿತಾ ಗೌಡಳನ್ನು ಮದುವೆಯಾದ ಚಂದನ್‌ಶೆಟ್ಟಿ ಅದೃಷ್ಟವಂತ ಎಂದು ಹೇಳುವವರೂ ಸಾಕಷ್ಟಿದ್ದರು. ಇದಾದ ನಂತರ ಕೆಲವು ರಿಯಾಲಿಟಿ ಶೋಗಳು, ಕಿರುತೆರೆ ಕಾರ್ಯಕ್ರಮಗಳನ್ನು ಕಾಣಿಸಿಕೊಂಡ ನಿವೇದಿತಾ ಗೌಡಗೆ ಮದುವೆ ಆಗಿದ್ದರೂ ಸಂಸಾರ ನಡೆಸುವ ಕಲೆ ಸಿದ್ಧಿಸಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಆಗ ನಿವೇದಿತಾ ಗೌಡಗೆ ಚಂದನ್‌ಶೆಟ್ಟಿಯಂತಹ ಗಂಡ ಸಿಕ್ಕಿರುವುದು ಆಕೆಯ ಪುಣ್ಯ ಎಂದು ಹೇಳುತ್ತಿದ್ದರು.

ಜನರ ಹೊಗಳಿಕೆ, ತೆಗಳಿಕೆಗೆ ತಲೆ ಕೆಡಿಸಿಕೊಳ್ಳದ ಜೋಡಿ ದಾಂಪತ್ಯವನ್ನು ಮುಂದುವರೆಸಿದ್ದರು. ಆದರೆ, ಕಳೆದೊಂದು ತಿಂಗಳ ಹಿಂದೆ ಅದೇನಾಯ್ತೋ ಗೊತ್ತಿಲ್ಲ, ಇಬ್ಬರೂ ಮಾಧ್ಯಮಗಳ ಮುಂದೆ ಹಾಜರಾಗಿ ತಾವು ಡಿವೋರ್ಸ್ ಪಡೆದುಕೊಂಡಿದ್ದೇವೆ ಎಂದು ಹೇಳಿ ಹೋದರು. ಕೈ ಕೈ ಹಿಡಿದುಕೊಂಡು ಕೋರ್ಟಿಗೆ ಬಂದು, ಡಿವೋರ್ಸ್ ಪಡೆದು ಕೈ ಕೈ ಹಿಡಿದುಕೊಂಡು ಕಾರಿನಲ್ಲಿ ಕುಳಿರು ತಮ್ಮ ತಮ್ಮ ಮನೆಗೆ ಹೋದರು. ಈಗ ಅವರಿಬ್ಬರು ದೂರವಾಗಿ ಒಂದು ಮಾಸವೇ ಕಳೆದಿದೆ. ಈಗ ಇನ್ನರೂ ತಮ್ಮ ಸಿನಿಮಾ ಕಾರ್ಯಗಳಲ್ಲಿ ಬ್ಯೂಸಿ ಆಗಿದ್ದಾರೆ. ಇನ್ನು ರೀಲ್ಸ್ ಮಾಡುವುದರ ಮೂಲಕವೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸುಂದರಿ ನಿವೇದಿತಾ ಗೌಡ, ಡಿವೋರ್ಸ್ ನಂತರವೂ ಎಂದಿನಂತೆ ರೀಲ್ಸ್ ಮಾಡಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ನಿವೇದಿತಾಳ ಪ್ರತಿ ಪೋಸ್ಟ್ಗೂ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. 

ಬೆಡ್ ರೂಮ್ ವಿಡಿಯೋ ಹಂಚಿಕೊಂಡ ನಿವೇದಿತಾ ಗೌಡ; ಇದಕ್ಕಂತಲೇ ಡಿವೋರ್ಸ್ ಕೊಟ್ಟಿದ್ದಾ ಎಂದ ಚಂದನ್ ಫ್ಯಾನ್ಸ್

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಿವೇದಿತಾ ಗೌಡ ಎಂಬ ಖಾತೆಯಿಂದ ಹಂಚಿಕೊಂಡ ಮೇಕಪ್ ಮಾಡಿಕೊಳ್ಳುವ ವಿಡಿಯೋಗೆ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು 'ಅಂದ ಇದ್ರೇ ಸಾಲದು ಕಣಮ್ಮಿ ಒಳ್ಳೆ ಗುಣ ನಡತೆ,ಸಂಸ್ಕಾರ ಇರಬೇಕು, ನಿನ್ನ ವೈಯಾರ,ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ, ಹೆಣ್ಣಿಗೆ ಹೆಣತನದ ಬಗ್ಗೆ ಹೆಮ್ಮೆ ಬರುವುದು ಅವಳು ತಾಯಿ ಆದಾಗ ಮಾತ್ರ ಬಟ್ ನೀನು ಅದನ್ನೇ ತಿರಸ್ಕಾರ ಮಾಡಿ ಅದ್ಯಾವ ಸಾಧನೆ ಮಾಡೋಕ್ಕೆ ಹೊರಟಿದಿಯಾ ನಾ ಕಾಣೆ'.... ಎಂದು ನಿವೇದಿತಾ ಗೌಡ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನಕ್ಕೆ ಹೀಗೆ ಧಕ್ಕೆ ತರುವುದು ಒಳಿತಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.

click me!