ಇನ್ನು ಮುಂದೆ ವಿಜಯಲಕ್ಷ್ಮಿ ನಕ್ಷತ್ರ ಅಲ್ಲ ಮೈನಾ. ಮಾಸ್ ಎಂಟ್ರಿ ನೋಡಿ ಶಾಕ್ ಆದ ವೀಕ್ಷಕರು.
ನಕ್ಷತ್ರ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ನಟಿಯಾಗಿರುವ ವಿಜಯಲಕ್ಷ್ಮಿ ಉರ್ಫ್ ಲಕ್ಷಣ ಈಗ ಮತ್ತೊಂದು ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮಿಡಲ್ ಕ್ಲಾಸ್ ಮನೆ ಹುಡುಗ ಸಿರಿವಂತ ಹುಡುಗನನ್ನು ಮದುವೆಯಾಗಿ, ಕಪ್ಪಿರುವ ಕಾರಣ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾಳೆಂದು ಲಕ್ಷಣದಲ್ಲಿ ಅದ್ಭುತವಾಗಿ ತೋರಿಸಲಾಗಿತ್ತು. ಈಗ ಮೈನಾ ಅಗಿ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. ಸುಮಾರು 2 ವರ್ಷಗಳ ಕಾಲ ಅಂದ್ರೆ 569 ಸಂಚಿಕೆ ಗಳಲ್ಲಿ ವಿಜಯಲಕ್ಷ್ಮಿ ನಕ್ಷತ್ರ ಆಗಿ ಕಾಣಿಸಿಕೊಂಡಿದ್ದರು.
'ಪ್ರತಿಯೊಂದು ಪಾತ್ರವೂ ಕಲಾವಿದರಿಗೆ ದೊಡ್ಡ ಚಾಲೆಂಜ್ ಅಗಿರುತ್ತದೆ. ಪವರ್‌ಫುಲ್ ಪಾತ್ರದಲ್ಲಿ ನಕ್ಷತ್ರಾ ಕಾಣಿಸಿಕೊಂಡಿದ್ದಳು ಈಗ ಅಷ್ಟೇ ಶಕ್ತಿ ಮತ್ತು ಎಮೋಷನಲ್ ಡೆಪ್ತ್ ಇರುವ ಮೈನಾ ಪಾತ್ರದಲ್ಲಿ ವಿಜಯಲಕ್ಷ್ಮಿ ನಟಿಸಲಿದ್ದಾರೆ. ವಿಭಿನ್ನ ಪಾತ್ರಗಳನ್ನು ಮಾಡಬೇಕು ಅನ್ನೋ ಆಸೆ ಹೆಚ್ಚಿದೆ. ನಕ್ಷತ್ರಾಗೆ ಸಿಕ್ಕ ಪ್ರೀತಿನೇ ಮೈನಾಗೂ ಸಿಗಬೇಕು' ಎಂದು ವಿಜಯಲಕ್ಷ್ಮಿ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.
ಇದು ಶರ್ಟಾ ಸ್ವೆಟ್ರಾ?; ಹೋಟೆಲ್ ವೇಟರ್ ತರ ಕಾಣಿಸುತ್ತಿರುವೆ ಎಂದು 'ಲಕ್ಷಣ' ಕಾಲೆಳೆದ ನೆಟ್ಟಿಗರು!
undefined
'ಓಪನಿಂಗ್ ಎಪಿಸೋಡ್‌ಗಳನ್ನು ಹೆಚ್ಚಾಗಿ ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಊರುಗಳಲ್ಲಿ ಸಖತ್ ಬಿಸಿಲು. ಚಿತ್ರೀಕರಣದ ವೇಳೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಕಷ್ಟ ಹೀಗಾಗಿ ಬ್ರೇಕ್ ಸಿಕ್ಕಾಗಲೆಲ್ಲಾ ಜಿಮ್ ಮಾಡುತ್ತೀನಿ. ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತೀನಿ. ಶ್ರೀ ನಾಗಾಭರಣ ಅವರ ಜೊತೆ ಕೆಲಸ ಮಾಡುತ್ತಿರುವ ಖುಷಿ ಇದೆ ಏಕೆಂದರೆ ಪ್ರತಿದಿನವೂ ಪಾಠ ಕಲಿಯಬಹುದು ಇದೊಂದು ಸಂಸ್ಥೆ ರೀತಿ ಇರುತ್ತದದೆ' ಎಂದಿದ್ದಾರೆ ವಿಜಯಲಕ್ಷ್ಮಿ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ಮೈನಾ ಉರ್ಫ್ ವಿಜಯಲಕ್ಷ್ಮಿ ಸಖತ್ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮೈಲಾರ ಕೋಟೆ ಮೈನಾ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡಿದ್ದಾರೆ. ವೀಕ್ಷಕರ ನಿರೀಕ್ಷೆ ಹೆಚ್ಚಾಗಿದೆ.