ಕಲರ್ಸ್ ಸೂಪರ್‌ನಲ್ಲಿ ಮಗಳು ಜಾನಕಿ ಸಂವಾದ!

Published : Feb 28, 2019, 09:47 AM IST
ಕಲರ್ಸ್ ಸೂಪರ್‌ನಲ್ಲಿ ಮಗಳು ಜಾನಕಿ ಸಂವಾದ!

ಸಾರಾಂಶ

ಟಿ.ಎನ್.ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯ ಕುರಿತು ಇತ್ತೀಚೆಗೆ ಬೆಂಗಳೂರಿನಲ್ಲಿ ಕಲಾವಿದರು ಹಾಗೂ ಪ್ರೇಕ್ಷಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಮಾರ್ಚ್ 2 ಮತ್ತು 3 ರಂದು ರಾತ್ರಿ 9 ಗಂಟೆಗೆ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗಲಿದೆ.   

ಮಧ್ಯಮ ವರ್ಗದ ಸಂವೇದನೆಗಳನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟು ಮನೆ ಮಾತಾಗಿರುವ ಈ ಧಾರಾವಾಹಿಯ ಕುರಿತು ಪ್ರೇಕ್ಷಕರ ಒತ್ತಾಯದ ಮೇರೆಗೆ ಧಾರಾವಾಹಿ ತಂಡ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಧಾರಾವಾಹಿ ತಂಡದ ಜನಪ್ರಿಯ ಕಲಾವಿದರು, ತಂತ್ರಜ್ಞರ ಜತೆಗೆ ಪ್ರೇಕ್ಷಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಮರಳಿ ಬಾ ಮನ್ವಂತರವೇ’ ಹೆಸರಿನ ಈ ವಿಶೇಷ ಗೋಷ್ಠಿಯಲ್ಲಿ ಕಲಾವಿದರಾದ ಸೀತಾ ಕೋಟೆ, ಮಾಳವಿಕಾ ಅವಿನಾಶ್, ಮೇಘಾ ನಾಡಿಗೇರ್, ವೀಣಾ ಸುಂದರ್, ಜಯಶ್ರೀ ರಾಜ್, ಸುಷ್ಮಾ ಭಾರದ್ವಾಜ್, ಅಶ್ವಿನಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅವರೊಂದಿಗೆ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ, ನ್ಯಾಯಧೀಶರಾದ ಎ.ಜೆ. ಸದಾಶಿವ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮತ್ತಿತರರು ಹಾಜರಿದ್ದರು.

ಸಂಗೀತ ದಿನಕ್ಕೆ ಇನ್ನೇನು ಬೇಕು? ‘ಮಗಳು ಜಾನಕಿ’ ಸಾಂಗ್ ಸಾಕಲ್ಲವೇ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?