ಬಿಗ್ ಬಾಸ್ ಭುವನ್‌ಗೆ ಅರೆಸ್ಟ್ ವಾರೆಂಟ್!

Published : Feb 24, 2019, 11:04 AM IST
ಬಿಗ್ ಬಾಸ್ ಭುವನ್‌ಗೆ ಅರೆಸ್ಟ್ ವಾರೆಂಟ್!

ಸಾರಾಂಶ

ಬಿಗ್ ಬಾಸ್ ಸೀಸನ್-4 ಖ್ಯಾತಿ ಸ್ಪರ್ಧಿಗಳಾದ ಭುವನ್ ಪೊನ್ನಣ್ಣ ಹಾಗೂ ಒಳ್ಳೆ ಹುಡುಗ ಪ್ರಥಮ್ ನಡುವಿನ ಕಿಚ್ಚು ಹೆಚ್ಚಾಗಿ ಈಗ ಭುವನ್‌ಗೆ ಅರೆಸ್ಟ್ ವಾರೆಂಟ್ ಜಾರಿ ಆಗಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್‌- 4 ನಲ್ಲಿ ಒಬ್ಬ ಲವರ್‌ ಬಾಯ್ ಮತ್ತೊಬ್ಬ ಒಳ್ಳೆ ಹುಡುಗ. ಇವರಿಬ್ಬರ ಕಾಂಬಿನೇಷನ್ ಯಾಕೋ ಏನೋ ವರ್ಕೌಟ್ ಅಗಿಲ್ಲ. ಮನೆಯಲ್ಲಿದ್ದಾಗಲೂ ಜಗಳ ಹೊರ ಬಂದ ಮೇಲೂ ಜಗಳ ಮುಂದುವರೆದಿದೆ.

ಇನ್ನು, ಯಾಕಪ್ಪಾ ಭುವನ್‌ಗೆ ಅರೆಸ್ಟ್ ವಾರೆಂಟ್ ಅಂತಾನಾ? ಬಿಗ್ ಬಾಸ್ ಸೀಸನ್-4 ನಲ್ಲಿ ಎಲ್ಲಾರಿಗಿಂತ ಹೆಚ್ಚು ಗಮನ ಸೆಳೆದದ್ದು ಪ್ರಥಮ್, ಭುವನ್ ಹಾಗೂ ಸಂಜನ ಕಾಂಬಿನೇಷನ್. ಸಂಜನಾ ವಿಚಾರಕ್ಕೆ ಇವರಿಬ್ಬರಿಗೂ ಹಲವಾರು ಬಾರಿ ಮಾತಿನ ಚಕಮಕಿ ನಡೆದಿದೆ. ಆದರೆ ಇದು ಅಲ್ಲಿಗೆ ನಿಂತಿಲ್ಲ . ಅವರು ಬಿಗ್ ಬಾಗ್ ಮನೆಯಿಂದ ಹೊರ ಬಂದ ಮೇಲೆ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದು ಅಲ್ಲಿಯೂ ಕಿರಿಕ್ ಮಾಡಿಕೊಂಡಿದ್ದಾರೆ.

ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಲೇರಿದೆ. ಇದಕ್ಕೆ ಸಂಬಂಧಪಟ್ಟ ವಿಚಾರಣೆಗೆಂದು ಭುವನ್‌ಗೆ 15 ಬಾರಿ ನೋಟಿಸ್ ನೀಡಿದರೂ ಹಾಜರ್ ಆಗಲಿಲ್ಲ ಎಂಬ ಕಾರಣಕ್ಕೆ ಸೆಷನ್ಸ್ ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾದ ಭುವನ್‌ ನೋಟಿಸ್ ಗೆ ತಲೆಕೆಡಿಸಿಕೊಳ್ಳದ ಪರಿಣಾಮ ಈಗ ಬಂಧನ ಭೀತಿ ಎದುರಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪತ್ನಿ ಜೊತೆ ಶಿರಡಿಗೆ ತೆರಳಿದ ಬ್ರೋ ಗೌಡ… ಸಾಯಿ ಬಾಬಾ ಪವಾಡ ಬಿಚ್ಚಿಟ್ಟ ಮೇಘನಾ
Yajamana Serial: ಝಾನ್ಸಿ-ರಾಘು ಒಂದಾಗ್ತಾರಾ ಇಲ್ಲವೋ ಚಿಂತೆ ಮಧ್ಯೆ ಹೊಸ ಪಾತ್ರದ ಎಂಟ್ರಿಯಾಯ್ತು!