ಬಿಗ್ ಬಾಸ್ 9; ಪ್ರೋಮೋ ಶೂಟ್‌ಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚಿದ ಕಿಚ್ಚ ಸುದೀಪ್

Published : Jul 13, 2022, 03:43 PM IST
ಬಿಗ್ ಬಾಸ್ 9; ಪ್ರೋಮೋ ಶೂಟ್‌ಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚಿದ ಕಿಚ್ಚ ಸುದೀಪ್

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 9 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗವಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ. ಹೌದು, ಇಂದು (ಜುಲೈ 13) ಬಿಗ್ ಬಾಸ್ ಸೀಸನ್ 9ರ ಪ್ರೋಮೋವನ್ನು ಶೂಟ್ ಮಾಡಲಾಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 9ನ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಮೂಡಿಬರುವ ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್‌’. ಬಿಗ್ ಬಾಸ್ ಸೀಸನ್ 9ಗಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 9 ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿ ಕೇಳಿಬರುತ್ತಿದೆ.  ಮುಂದಿನ ತಿಂಗಳು ಆಗಸ್ಟ್ ನಲ್ಲೇ ಬಿಗ್ ಬಾಸ್ ಎಂದು ಕೇಳಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಬಹುನಿರೀಕ್ಷೆಯ ಬಿಗ್ ಬಾಸ್ ಆಗಸ್ಟ್‌ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ರಿವೀಲ್ ಈಗಾಗಲೇ ರಿವೀಲ್ ಆಗಿದೆ. ಬಗ್ಗೆ ಸ್ವತಃ ಅಭಿನಯ ಚಕ್ರವರ್ತಿ ಕಿಚ್ಚ ಮಾಹಿತಿ ನೀಡಿದ್ದರು. ಕಿಚ್ಚನ ಈ ಹೇಳಿಕೆ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿತ್ತು. ಅಂದಹಾಗೆ ಈ ಬಾರಿಯ ಬಿಗ್ ಬಾಸ್ ಮತ್ತಷ್ಟು ವಿಶೇಷವಾಗಿ ಮೂಡಿಬರಲಿದೆಯಂತೆ. ಈ ಬಾರಿ ಎರೆಡೆರಡು ಬಿಗ್ ಬಾಸ್ ಮೂಡಿ ಬರಲಿದೆ ಎನ್ನಲಾಗುತ್ತಿದೆ.  

ಬಿಗ್ ಬಾಸ್ (Bigg Boss) ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗವಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ. ಹೌದು, ಇಂದು (ಜುಲೈ 13) ಬಿಗ್ ಬಾಸ್ ಸೀಸನ್ 9ರ ಪ್ರೋಮೋವನ್ನು ಶೂಟ್ ಮಾಡಲಾಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 9ನ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಭರ್ಜರಿಯಾಗಿ ಪ್ರೋಮೋ ಶೂಟ್ ನಡೆಯುತ್ತಿದ್ದು ವೈಟ್ ಶರ್ಟ್ ಧರಿಸಿ ಫಾರ್ಮಲ್ಸ್ ನಲ್ಲಿ ಮಿಂಚಿರುವ ಕಿಚ್ಚನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.   

ಅಂದಹಾಗೆ ಇತ್ತೀಚಿಗಷ್ಟೆ ಬಿಗ್ ಬಾಸ್ ಕನ್ನಡ ಸೀಸನ್ 9ಗೆ (BBK9) ತಯಾರಿ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದರು. ಬಿಗ್ ಬಾಸ್ ಆಯೋಜಕರಾಗಿರುವ ಪರಮೇಶ್ವರ್ ಗುಂಡ್ಕಲ್ ಈ ಬಗ್ಗೆ ಅಪ್ ಡೇಟ್ ನೀಡಿದ್ದರು. ಬಿಗ್ ಮನೆಯ ಕೆಲಸ ಪ್ರಾರಂಭವಾಗಿದೆ ಎಂದು ಹೇಳಿದ್ದರು.  ಬಿಗ್ ಬಾಸ್‌ನ ಹೈಲೆಟ್ ಗಳಲ್ಲಿ ಬಿಗ್ ಹೌಸ್ ಕೂಡ ಒಂದು. ಹಾಗಾಗಿ  ಆಕರ್ಷಕವಾಗಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಬಿಗ್ ಬಾಸ್ ಮನೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದ್ದರು. 

'ಬಿಗ್ ಬಾಸ್ 9'ಗೆ ಭರ್ಜರಿ ಸಿದ್ಧತೆ; ಈ ಬಾರಿ ಹೇಗಿದೆ ಬಿಗ್ ಹೌಸ್? ಇಲ್ಲಿದೆ ಅಪ್‌ಡೇಟ್

ಫೋಟೋ ಶೇರ್ ಮಾಡುವ ಮೂಲಕ ಬಿಗ್ ಬಾಸ್ ಸೀಸನ್ 9 ಕೆಲಸ ಪ್ರಾರಂಭವಾಗಿದೆ ಎಂದಿದ್ದರು. ಬಿಗ್ ಮನೆಯ ಮುಂದೆ ನಿಂತು ಫೋಟೋ ಶೇರ್ ಮಾಡಿರುವ ಪರಮೇಶ್ವರ್ ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದ್ದರು.

ಬಿಗ್ ಬಾಸ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ ಕಿಚ್ಚ; ಆಗಸ್ಟ್‌‌ನಲ್ಲಿ ಆರಂಭ, ಈ ಬಾರಿ ಇದೆ ಹಲವು ವಿಶೇಷ

ವೂಟ್‌ನಲ್ಲಿ ಮಿನಿ ಬಿಗ್ ಬಾಸ್ 

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ವೂಟ್ ನಲ್ಲಿ ಪ್ರಸಾರವಾಗುವ ಮಿನಿ ಬಿಗ್ ಬಾಸ್ ಕಲರ್ಸ್‌ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರ ಆರಂಭವಾಗುವ ಮೊದಲೇ ಆರಂಭವಾಗಲಿದೆ. ಈ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದ್ದು, ಇಂಟರ್‌ನೆಟ್‌ ಸ್ಟಾರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದಿನಿಂತೆ ಸುದೀಪ್‌ ವಾರದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಮಿನಿ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಯಲ್ಲಿ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಬಿಗ್‌ ಬಾಸ್‌ನಲ್ಲಿ ಭಾಗವಹಿಸುತ್ತಾರೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ ಬಾಸ್‌ 90 ದಿನಗಳ ಕಾಲ ಪ್ರಸಾರವಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ