ಸೀರಿಯಲ್​ನಲ್ಲಿ ಮಿನಿ ಡ್ರೆಸ್​ ಹಾಕ್ದೇ ಶಾಕ್​ ಕೊಟ್ರೆ, ರಿಯಲ್​ನಲ್ಲಿ ಅದೇ ಉಡುಗೆ ತೊಟ್ಟ ಭಾಗ್ಯಳಿಗೆ ಫಿದಾ!

By Suchethana D  |  First Published Nov 3, 2024, 11:33 AM IST

ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಉರ್ಫ್​ ಸುಷ್ಮಾ ರಾವ್​ ರಿಯಲ್​ ಆಗಿ ಮಿನಿ ಡ್ರೆಸ್​ ತೊಟ್ಟು ಪೋಸ್​ ಕೊಟ್ಟಿದ್ದಾರೆ.  ಹೀಗಿದೆ ನೋಡಿ ವಿಡಿಯೋ
 


ಬಂದ ನೆಂಟರ ಎದುರು ಮರ್ಯಾದೆ ತೆಗೆಯುವುದಕ್ಕಾಗಿ ತಾಂಡವ್​, ಪತ್ನಿ ಭಾಗ್ಯಳಿಗೆ ಮಿನಿ ಡ್ರೆಸ್​ ತಂದುಕೊಟ್ಟಿದ್ದ. ಅವಳ ಮಾನ ಹರಾಜು ಮಾಡುವುದಕ್ಕಾಗಿಯೇ ಒಂದಿಷ್ಟು ಮಂದಿಗೆ ದುಡ್ಡು ಕೊಟ್ಟು ಕರೆಸಿದ್ದ. ಅವರೆಲ್ಲರೂ ಭಾಗ್ಯಳ ಈ ವೇಷ ನೋಡಿ ಅವಮಾನ ಮಾಡಲು ಮೊಬೈಲ್​ ವಿಡಿಯೋ ಆನ್​ ಮಾಡಿಯೂ ಕುಳಿತಿದಿದ್ದಾರೆ. ಯಾರು ಏನು ಡೈಲಾಗ್​ ಹೇಳಬೇಕು ಎನ್ನುವುದೂ ಮೊದಲೇ ಪ್ರಿಪೇರ್​ ಆಗಿತ್ತು. ಅವಮಾನ ಸಹಿಸಲಾಗದೇ ಭಾಗ್ಯ ಮತ್ತು ಮನೆಯವರು ನಾಚಿಕೆಯಿಂದ ತಲೆ ತಗ್ಗಿಸಿ ಕುಗ್ಗಿ ಹೋಗುವುದನ್ನು ನೋಡಿ ಖುಷಿ ಪಡುವ ಕನಸು ಕಾಣುತ್ತಿದ್ದ ತಾಂಡವ್​. ಆದ್ರೆ ಅಲ್ಲಿ ಆದದ್ದೇ ಬೇರೆ! ಭಾಗ್ಯ ಡ್ರೆಸ್​ ಹಾಕಿಕೊಳ್ಳದೇ ಲಕ್ಷಣವಾಗಿ ಸೀರೆಯುಟ್ಟು ಬಂದಳು. ಇದನ್ನು ನೋಡಿ ಬಂದವರು ಹಾಗೂ ತಾಂಡವ್​ ಸ್ಥಿತಿ ಇಂಗು ತಿಂದ ಮಂಗನಂತಾಗಿದ್ದರೆ, ಕುಸುಮಾ, ಪೂಜಾ, ಸುಂದ್ರಿ ಎಲ್ಲರಿಗೂ ತಾಂಡವ್​ ಕೊಟ್ಟ ಡ್ರೆಸ್​ ಭಾಗ್ಯ ಹಾಕಲಿಲ್ಲ ಎನ್ನುವ ಸಿಟ್ಟು ಬಂದಿದೆ. 

ಸೀರಿಯಲ್​ ಏನೇ ಆಗಿರಲಿ, ಈಗ ಅದೇ ಡ್ರೆಸ್​ ಅನ್ನು  ಭಾಗ್ಯ ಅರ್ಥಾತ್​ ಸುಷ್ಮಾ ಕೆ. ರಾವ್​ ಅವರು ಧರಿಸಿಕೊಂಡು ರೀಲ್ಸ್​ ಮಾಡಿದ್ದಾರೆ. ಭಾಗ್ಯಳನ್ನು ಮಿನಿ ಡ್ರೆಸ್​ನಲ್ಲಿ ನೋಡಲು ಕಾತರರಾಗಿದ್ದವರಿಗೆ ಬೇಸರ ಆಗಿದ್ದರಿಂದ ಈಗ ಅದೇ ಡ್ರೆಸ್​ ತೊಟ್ಟು ಸುಷ್ಮಾ ಕಾಣಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರೋ ನಟಿ, ಇದೀಗ ಸೀರಿಯಲ್​ ಗಂಡ ಕೊಟ್ಟ ಉಡುಗೆಯನ್ನು ರಿಯಲ್​ ಆಗಿ ಹಾಕಿಕೊಂಡು ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ. ತುಂಬಾ ಕ್ಯೂಟ್​ ಆಗಿ ಕಾಣಿಸೋ ಸುಷ್ಮಾ ಅವರನ್ನು ನೋಡಿ ಅಭಿಮಾನಿಗಳಿಂದ ಲವ್​ ಇಮೋಜಿಗಳ ಸುರಿಮಳೆಯಾಗುತ್ತಿದೆ. ಇದನ್ನೇನಾದ್ರೂ ತಾಂಡವ್​ ನೋಡಿದ್ರೆ, ಶ್ರೇಷ್ಠಾಳನ್ನು ಬಿಟ್ಟು ಓಡಿ ಬರೋದು ಗ್ಯಾರೆಂಟಿ ಅಂತಿದ್ದಾರೆ ಅಭಿಮಾನಿಗಳು.

Tap to resize

Latest Videos

undefined

ತುಂಡುಡುಗೆ ಭಾಗ್ಯಂಗೆ ಅವಮಾನ ಮಾಡಲು ಕಾಯ್ತಿದ್ದ ತಾಂಡವ್​ಗೆ ಬಿಗ್​ ಶಾಕ್​! ಕಣ್​ ಕಣ್​ ಬಿಟ್ಟ ಮನೆಮಂದಿ...

ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.  

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಅಷ್ಟಕ್ಕೂ  ಕುಸುಮಾ ಒಂದು ತಿಂಗಳಿನಲ್ಲಿ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ.  ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಅದೇ ರೀತಿ ಭಾಗ್ಯಳನ್ನು ಚೆನ್ನಾಗಿ ರೆಡಿ ಮಾಡಿದ್ದಳು. ಅರೆ ಕ್ಷಣ ಭಾಗ್ಯಳ ಸೌಂದರ್ಯ ನೋಡಿ ತಾಂಡವ್​ ಖುಷಿ ಪಟ್ಟರೂ ಕೊನೆಗೆ ಇನ್ನಿಲ್ಲದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗೂಬೆ, ಕತ್ತೆ ಎಂದಿದ್ದ. ಗೂಬೆಗೆ ಸೌಂದರ್ಯ ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು ದೋಸೆ, ಚಪಾತಿಗೆ ಏಪ್ರಾನ್​ ಸಾಕು, ಇದೆಲ್ಲಾ ಯಾಕೆ ಎಂದು ನಿಂದಿಸಿದ್ದ.  ಆದರೂ ಈಗ ತಾಂಡವ್​ ಭಾಗ್ಯಳನ್ನು ಒಪ್ಪಿಕೊಳ್ಳುವಂತೆ ಮಾಡುವ ಪಣ ಬಿಡಲಿಲ್ಲ ಕುಸುಮಾ.  

ನೀಲಿ ಚಿತ್ರದಲ್ಲಿ ನಟಿಸಲು ಆಫರ್​ ಬಂದಿದೆ ಎಂದ ಮಗ! ಅಮ್ಮನ ರಿಯಾಕ್ಷನ್​ ನೋಡಿ- ವಿಡಿಯೋ ವೈರಲ್​

click me!