ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನವೇ ಗಲಾಟೆಗೆ ನಾಂದಿ ಹಾಡಿದ ಚೈತ್ರಾ ಕುಂದಾಪುರ, ಉಗ್ರಂ ಮಂಜು ಪಿತ್ತ ನೆತ್ತಿಗೆ!

By Gowthami K  |  First Published Sep 30, 2024, 7:26 PM IST

ಬಿಗ್‌ಬಾಸ್‌ ಕನ್ನಡ ಸೀಸನ್ 11 ರ ಮೊದಲ ದಿನವೇ ಮನೆಯಲ್ಲಿ ಗಲಾಟೆ ಶುರುವಾಗಿದೆ. ಚೈತ್ರಾ ಕುಂದಾಪುರ  ಘರ್ಷಣೆಗೆ ನಾಂದಿ ಹಾಡಿದ್ದಾರೆ. ಮೂಲಭೂತ ಸೌಕರ್ಯಗಳಿಗಾಗಿ ಸ್ವರ್ಗ ಮತ್ತು ನರಕ ನಿವಾಸಿಗಳ ನಡುವೆ ವಾಗ್ವಾದ ನಡೆದಿದೆ.


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್ 11 ನಲ್ಲಿ ಈ ಬಾರಿ ಸ್ಪರ್ಗ ಮತ್ತು ನರಕ ಎಂಬ ಎರಡು ಮನೆಗಳಿದೆ. ಮೊದಲ ದಿನಕ್ಕೆ ಹಲವು ಪ್ರೋಮೋಗಳನ್ನು ಇಲ್ಲಿವರೆಗೆ ಬಿಡುಗಡೆ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಬಂದ ಮೊದಲ ದಿನವೇ  ಮನೆಯಲ್ಲಿ ದೊಡ್ಡ ಗಲಾಟೆಯಾಗಿದೆ. ಚೈತ್ರಾ ಕುಂದಾಪುರ ಈ ಜಗಳಕ್ಕೆ ನಾಂದಿ ಹಾಡಿದ್ದಾರೆ. ಮೊದಲ ದಿನ ಬಿಗ್‌ ಬಾಸ್‌ ಲೈಫ್‌ ಗೆ ಹೊಂದಿಕೊಳ್ಳೋ ಯತ್ನದಲ್ಲಿ ಸ್ಪರ್ಧಿಗಳಿದ್ದಾರೆ. 

ಮನೆ ಕೆಲಸದ ಎಲ್ಲಾ ಜವಾಬ್ದಾರಿಗಳು ನರಕ ನಿವಾಸಿಗಳು ಮಾಡಬೇಕಿದ್ದು, ಈ ಹಿನ್ನೆಲೆಯಲ್ಲಿ ಸ್ವರ್ಗ ನಿವಾಸಿಗಳು ಪ್ರೂಟ್‌ ಒಂದನ್ನು ತೊಳೆದು ಕಟ್‌ ಮಾಡಿ ಕೊಡುವಂತೆ ಹೇಳಿದ್ದಾರೆ. ಅದನ್ನು ಉಗ್ರಂ ಮಂಜು ಕೈನಿಂದ ತೆಗೆದುಕೊಂಡ ಚೈತ್ರಾ ಕುಂದಾಪುರ ತಿಂದು ನರಕದ ಮನೆ ಕಡೆ ಬಿಸಾಡಿದ್ದಾರೆ. ಇದು ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಯಮುನಾ ಅವರು ರೂಲ್ಸ್ ಬಗ್ಗೆ ಧ್ವನಿ ಎತ್ತಿದ್ದಾರೆ. ಮಾತನಾಡಬಾರದು ಎಂದು ರೂಲ್ ಬುಕ್‌ ನಲ್ಲಿ ಇದ್ದರೆ ತೋರಿಸಿ ನಾನು ಮಾತನಾಡುದಿಲ್ಲ ಎಂದು ಚೈತ್ರಾ ಕೌಂಟರ್ ಕೊಟ್ಟಿದ್ದಾರೆ.   ಉಗ್ರಂ ಮಂಜು ಕೂಡ ಕೋಪಗೊಂಡಿದ್ದಾರೆ. 

Tap to resize

Latest Videos

undefined

ಇನ್ನೊಂದು ಕಡೆ ನರಕವಾಸಿಗಳು ಸ್ವರ್ಗವಾಸಿಗಳ ಬಳಿ ಬಿಸಿ ನೀರಿಗಾಗಿ ಅಂಗಲಾಚಿದ್ದಾರೆ. ಇದಕ್ಕೆ ಬಿಸಿ ನೀರು ಕೊಡಿ ಎಂದು ಲಾಯರ್ ಜಗದೀಶ್ ಹೇಳಿದ್ದು, ಹಾಗೇ ಕೊಡುವಂತಿಲ್ಲ ಅವರು ಬಿಗ್‌ಬಾಸ್ ಗೆ ಮನವಿ ಮಾಡಿಕೊಳ್ಳಬೇಕೆಂದು ಭವ್ಯಾ ಗೌಡ ಹೇಳಿದ್ದಾರೆ. ಅದಕ್ಕೆ ನರವಾಸಿಗಳ ಬಳಿ ಹೋದ ಲಾಯರ್ ಜಗದೀಶ್ ಇವರೇ ಬಿಗ್‌ಬಾಸ್‌ ಅಂದುಕೊಳ್ಳುತ್ತಿದ್ದಾರೆಂದಿದ್ದಾರೆ. ಗೋಲ್ಡ್ ಸುರೇಶ್ ಮತ್ತೆ ಉಗ್ರಂ ಮಂಜು ಬಳಿ ಬೆಳಗ್ಗಿನಿಂದ ಬಿಸಿನೀರು ಇಲ್ಲ ಸ್ವಲ್ಪ ಕೊಟ್ಟು ಬಿಡಿ ಎಂದಿದ್ದಾರೆ. ಬಿಗ್‌ಬಾಸ್‌ ಬಳಿ ಕೇಳಬೇಕು ಎಂದು ಮಂಜು ಹೇಳಿದಾಗ ಅಣ್ಣ ಕೇಳಿದ್ದೀವಿ ಏನೂ ಉತ್ತರ ಬಂದಿಲ್ಲ ಎಂದು ಸುರೇಶ್ ಉತ್ತರ ಕೊಟ್ಟಾಗ,  ಬಂದಿಲ್ಲ ಎಂದರೆ ತಾಳ್ಮೆ ಇರಬೇಕು.  ನಾವು ಬಿಗ್‌ ಬಾಸ್‌ ಅಲ್ವಲ್ಲ 120 ದಿನಕ್ಕೆ ಯೋಚನೆ ಮಾಡಿಕೊಂಡು ಬಂದವರು 1 ದಿನಕ್ಕೆ ಯಾಕೆ ಯೋಚನೆ ಮಾಡ್ತಿರಿ ಎಂದು ಮಂಜು ಕೇಳಿದ್ದಾರೆ. ಇದು ಒಂದು ದಿನದ ಪ್ರಶ್ನೆ ಅಲ್ಲ ನೀರು ಕೊಡಬಹುದು ಎಂದು ಸುರೇಶ್ ಹೇಳಿದ್ದಾರೆ. 

ನಟ ರಂಜಿತ್ ಅವರು ಜಿಮ್‌ ಡಂಬಲ್ಸ್ ಇಲ್ಲದೆ ಬಕೆಟ್‌ ಅನ್ನು ಕೈನಲ್ಲಿ ಹಿಡಿದು ವ್ಯಾಯಾಮ ಮಾಡುತ್ತಿರುವುದು ಕಂಡುಬಂದಿದೆ. ಯಾಕೆಂದರೆ ನರಕದಲ್ಲಿರುವ ಇವರಿಗೆ ಜಿಮ್‌ ಸಲಕರಣೆಗಳು ಲಭ್ಯವಿಲ್ಲ. ಇನ್ನೊಂದೆಡೆ ಚೈತ್ರಾ ಕುಂದಾಪುರ ಅವರನ್ನು ಫೀಮೇಲ್‌ ಡಾನ್ ಎಂದು ಲಾಯರ್ ಜಗದೀಶ್ ಕರೆದಿದ್ದು, ಮೇಲ್ ಡಾನ್ ನಾನು ಎಂದು ಹೇಳಿದ್ದಾರೆ.

ಮತ್ತೊಂದು ಪ್ರೋಮೋದಲ್ಲಿ ಧನ್‌ ರಾಜ್ ಅವರನ್ನು ಕನ್ಫೆಶನ್ ರೋಂ ಗೆ ಬಿಗ್‌ಬಾಸ್‌ ಕರೆದಿದ್ದಾರೆ. ಇದರಲ್ಲಿ ಧನ್‌ರಾಜ್ ನನಗೆ ಕೇಳಿಸುತ್ತಿಲ್ಲ ನಿಮ್ಮ ವಾಯ್ಸ್ ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಗ್‌ಬಾಸ್‌ ಮೈಕ್‌ ಸರಿ ಹಾಕಿಕೊಳ್ಳುವಂತೆ ಬಿಗ್‌ಬಾಸ್‌ ಗೆ ಹೇಳಿದ ಮೊತ್ತ ಮೊದಲ ಸ್ಪರ್ಧಿ ನೀವೇ ಎಂದಿದ್ದಾರೆ. ಇದಕ್ಕೆ ಕನ್ಫೆಶನ್ ರೋಂನಲ್ಲಿ ಧನ್‌ರಾಜ್ ತಬ್ಬಿಬ್ಬು ಆಗಿದ್ದು, ಥ್ಯಾಂಕ್ಯೂ ಎಂದಿದ್ದಾರೆ. ಸುದೀಪ್‌ ಅವರು ಧನ್‌ರಾಜ್  ಜಿಂಕೆ ಇದ್ದಂತೆ ಎಂದು ಸ್ಟೇಜ್ ಮೇಲೆ ಹೇಳಿದ್ದನ್ನು ನೆನೆಪಿಸಿದ ಬಿಗ್‌ಬಾಸ್‌ ಧನ್‌ ರಾಜ್‌ ಜಿಂಕೆಯಂತೆ ನಡೆದುಕೊಂಡು ಇರಬೇಕು ಎಂದು ಹೇಳಿ ಮನೆಯವರಿಗೆ ಪತ್ರ ನೀಡಿ ಕಳಿಸಿದ್ದಾರೆ.

ಇನ್ನು ನರಕದಲ್ಲಿರುವವರು ಸರಿಯಾಗಿ ಕ್ಲೀನ್ ಮಾಡಿಲ್ಲ ಎಂದು ಲಾಯರ್ ಜಗದೀಶ್ ಮನೆ ಟಾಯ್ಲೆಟ್‌ ಕ್ಲೀನ್ ಮಾಡಿದ್ದು, ರೂಲ್ಸ್ ಬ್ರೇಕ್ ಮಾಡಿ ಸ್ವರ್ಗ ನಿವಾಸಿಗಳ ಸಿಟ್ಟಿಗೆ ಗುರಿಯಾಗಿದ್ದಾರೆ. ಇನ್ನೊಂದೆಡೆ ಗೌತಮಿ ಅವರು ವಿಗ್‌ ತೆರೆದು ತನ್ನ ನಿಜರೂಪದ ಉದ್ದ ಕೂದಲನ್ನು ತೋರಿಸುತ್ತಿದ್ದಾರೆ. ಅದರಲ್ಲಿ ವಿಗ್ ಹಾಕಿಕೊಂಡಿರುವುದಕ್ಕೆ ಟಾಸ್ಕ್ ಮಾಡುವಾಗ ಬಿದ್ದು ಹೋದರೆ ಹೇಗೆ ಎಂದು ಕೆಲವರು ತಮಾಷೆ ಮಾಡಿದ್ದಾರೆ. 

ಒಟ್ಟು 17 ಮಂದಿ ಸ್ಪರ್ಧಿಗಳು ಮನೆಯಲ್ಲಿದ್ದು,  ಸ್ವರ್ಗದಲ್ಲಿ, ಭವ್ಯಾ ಗೌಡ, ಯಮುನಾ, ಧನ್ ರಾಜ್, ಗೌತಮಿ, ಧರ್ಮ, ಜಗದೀಶ್, ತ್ರಿವಿಕ್ರಮ್, ಹಂಸಾ, ಐಶ್ವರ್ಯ ಮತ್ತು ಮಂಜು ಇದ್ದರೆ. ನರಕದಲ್ಲಿ ಅನುಷಾ ರೈ, ಶಿಶಿರ್, ಮಾನಸಾ, ಗೋಲ್ಡ್ ಸುರೇಶ್, ಚೈತ್ರಾ, ಮೋಕ್ಷಿತಾ ಮತ್ತು ರಂಜಿತಾ ಇದ್ದಾರೆ. ಸ್ವರ್ಗದಲ್ಲಿರುವವರಿಗೆ ಐಶಾರಾಮಿ ಸೌಲಭ್ಯಗಳಿದ್ದು, ನರಕದಲ್ಲಿರುವವರಿಗೆ ಸಾಮಾನ್ಯ ಜೀವನ ನಡೆಸಬೇಕಿದೆ.

click me!