Lakshmi Nivasa Serial: 133 ಎಪಿಸೋಡ್‌ಗಳಿಂದ ವೀಕ್ಷಕರು ಕಾಯುತ್ತಿದ್ದ ಸಮಯ ಬಂದೇಬಿಡ್ತಾ?

Published : Jul 16, 2025, 10:23 AM ISTUpdated : Jul 16, 2025, 10:25 AM IST
lakshmi nivasa tv kannada serial

ಸಾರಾಂಶ

Lakshmi Nivasa Kannada Serial Episode: ಕಳೆದ 133 ಎಪಿಸೋಡ್‌ಗಳಿಂದ ವೀಕ್ಷಕರು ಕಾಯುತ್ತಿದ್ದ ಸಮಯ ಬಂದಿದೆ. ವಿಶ್ವ ಹಾಗೂ ತನು ನಿಶ್ಚಿತಾರ್ಥ ಕೂಡ ನಡೆಯುತ್ತಿದೆ. 

Lakshmi Nivasa Serial Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಒಂದೇ ಮನೆಯಲ್ಲಿದ್ರೂ ವಿಶ್ವ, ಜಾನು ಭೇಟಿ ಆಗಿಲ್ಲ. ಜಾನು ಬದುಕಿರೋದು ವಿಶ್ವನಿಗೆ ಗೊತ್ತಾದ್ರೆ ಅವನು ನಿಶ್ಚಿತಾರ್ಥ ಮುರಿದುಕೊಳ್ತಾನಾ ಎಂಬ ಡೌಟ್‌ ಬಂದಿದೆ.

ಸಮುದ್ರದ ಪಾಲಾದ ಜಾನು!

ಹೌದು, ಕಾಲೇಜಿನಲ್ಲಿ ವಿಶ್ವ, ಜಾನು ಒಳ್ಳೆಯ ಫ್ರೆಂಡ್ಸ್‌ ಆಗಿದ್ದರು. ಜಾನು ಮೇಲೆ ವಿಶ್ವನಿಗೆ ಲವ್‌ ಇತ್ತಾದರೂ ಕೂಡ, ಒಂದು ದಿನವೂ ಅವನು ಅದನ್ನು ಹೇಳಿಕೊಳ್ಳಲಿಲ್ಲ. ಇನ್ನೊಂದು ಕಡೆ ಜಾನು ಕೂಡ ಜಯಂತ್‌ನನ್ನು ಮದುವೆಯಾದಳು. ಜಯಂತ್‌ನನ್ನು ಮದುವೆಯಾಗಿ ಜಾನುಗೆ ಎಷ್ಟು ಕಷ್ಟ ಆಯ್ತು ಎನ್ನೋದು ವಿಶ್ವನಿಗೆ ಗೊತ್ತಿತ್ತು. ಇನ್ನು ಶ್ರೀಲಂಕಾಕ್ಕೆ ಹೋಗಿದ್ದ ಜಾನು ಸಮುದ್ರದ ಪಾಲಾದಳು ಎನ್ನೋ ವಿಷಯವನ್ನು ವಿಶ್ವ ಇನ್ನೂ ಅರಗಿಸಿಕೊಂಡಿಲ್ಲ.

ಹಾಡು ಹೇಳಲು ಶುರು ಮಾಡಿದ ಜಾನು!

ವಿಶ್ವನ ಮನಸ್ಸಿನಲ್ಲಿ ಇನ್ನೂ ಜಾನು ಇದ್ದಾಳೆ. ವಿಶ್ವನ ಮನೆಯಲ್ಲೇ ಇದ್ದರೂ ಕೂಡ ಜಾನು ಮಾತ್ರ ಅವನ ಕಣ್ಣಿಗೆ ಬಿದ್ದಿರಲಿಲ್ಲ. ಈಗ ವಿಶ್ವ ಹಾಗೂ ತನು ನಿಶ್ಚಿತಾರ್ಥ ನಡೆಯುತ್ತಿದೆ. ಅಲ್ಲಿ ಜಾನು ಅಣ್ಣ ವೆಂಕಿ ಕೂಡ ಇದ್ದನು. ಅಣ್ಣನ ಕಣ್ಣಿಗೆ ಬೀಳೋದು ಬೇಡ ಅಂತ ಜಾನು ಪ್ರಯತ್ನಪಡುತ್ತಿದ್ದಾರೆ. ಆದರೆ ಅಲ್ಲಿಯವರು ಜಾನು ಬಳಿ ಹಾಡು ಹೇಳುವಂತೆ ಒತ್ತಾಯಿಸಿದ್ದರು. ಆಗ ಜಾನು ಹಾಡು ಹೇಳಲು ಶುರು ಮಾಡಿದ್ದಳು. ಆಗ ವಿಶ್ವನಿಗೆ ಇವಳೇ ಜಾನು ಅಂತ ಅರ್ಥ ಆಗಿದೆ.

ನಿಶ್ಚಿತಾರ್ಥ ಮುರಿದು ಹೋಗತ್ತಾ?

ಜಾನು ಬದುಕಿದ್ದಾಳೆ ಅಂತ ಗೊತ್ತಾದರೆ ವಿಶ್ವ ಈ ನಿಶ್ಚಿತಾರ್ಥ ಮುರಿಯಬಹುದು. ಜಾನು, ವಿಶ್ವ ಮದುವೆ ಆಗತ್ತೋ ಇಲ್ಲವೋ ಎಂದು ಕಾದು ನೋಡಬೇಕಿದೆ. ಇನ್ನು ಜಾನು ಬದುಕಿರೋದು ಗೊತ್ತಾದರೆ ಜಯಂತ್‌ನ ಎಂಟ್ರಿಯೂ ಆಗುವುದು.

ಮುಂದೆ ಏನಾಗಬಹುದು?

ಮಾನಸಿಕ ಅಸ್ವಸ್ಥ ಜಯಂತ್‌ನನ್ನು ಸರಿಯಾಗಿ ಮಾಡುವುದು ಅಥವಾ ಅವನನ್ನು ಬಿಟ್ಟು ಬೇರೆ ಮದುವೆಯಾಗುವುದು. ಇವುಗಳಲ್ಲಿ ಜಾನು ಆಯ್ಕೆ ಏನು ಎನ್ನೋದು ರಿವೀಲ್‌ ಆಗಬೇಕಿದೆ. ಒಟ್ಟಿನಲ್ಲಿ ಜಾನು ನಿರ್ಧಾರ ಏನಾಗಲಿದೆಯೋ ಎಂದು ಕಾದು ನೋಡಬೇಕಿದೆ.

ಧಾರಾವಾಹಿ ಕಥೆ ಏನು?

ಶ್ರೀನಿವಾಸ್‌ ಹಾಗೂ ಲಕ್ಷ್ಮೀಗೆ ಐವರು ಮಕ್ಕಳು. ಜಾನು, ಭಾವನಾ ಮಾತ್ರ ತಂದೆ-ತಾಯಿ ಕಷ್ಟವನ್ನು ಅರ್ಥ ಮಾಡಿಕೊಳ್ತಾರೆ. ಗಂಡು ಮಕ್ಕಳ ಸ್ವಾರ್ಥದಿಂದಾಗಿ ಇವರಿಬ್ಬರು ಮನೆಯಿಲ್ಲದೆ ಬೀದಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ತನ್ನನ್ನು ಅತಿಯಾಗಿ ಪ್ರೀತಿಸೋ ಗಂಡ ಜಯಂತ್, ತನಗೋಸ್ಕರ ಯಾರ ಜೀವವನ್ನು ಬೇಕಿದ್ರೂ ತೆಗೆಯುತ್ತಾನೆ ಎನ್ನೋದು ಜಾಹ್ನವಿಗೆ ಗೊತ್ತಾಗಿದೆ. ತನ್ನಿಂದ ಬೇರೆಯವರ ಜೀವನ ಹಾಳಾಗಬಾರದು ಅಂತ ಅವಳು ಸಾಯುವ ಪ್ರಯತ್ನ ಮಾಡಿದ್ದಳು. ಆದರೆ ಅವಳು ಬದುಕುಳಿದಳು. ಎಲ್ಲರ ಪಾಲಿಗೆ ತಾನು ಸತ್ತಿದ್ದೇನೆ ಎನ್ನುವ ಹಾಗೆ ಇರಲಿ ಎಂಉದ ಅವಳು ಆಲೋಚಿಸಿದಳು. ಹೀಗಾಗಿ ಅವಳು ರಹಸ್ಯವಾಗಿ ಬದುಕುತ್ತಿದ್ದಾಳೆ.

586 ಎಪಿಸೋಡ್‌ನಲ್ಲಿ ಜಾನು ಸಾವಾಗಿದೆ. ಇಂದು 719 ಎಪಿಸೋಡ್‌ ಪ್ರಸಾರ ಆಗಲಿದೆ. ಈಗಲಾದರೂ ಜಾನು, ವಿಶ್ವ ಒಂದಾಗ್ತಾರಾ ಇಲ್ಲವಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಯಾವಾಗ ಉತ್ತರ ಸಿಗಲಿದೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಜಾಹ್ನವಿ ಪಾತ್ರದಲ್ಲಿ ನಟಿ ಚಂದನಾ ಅನಂತಕೃಷ್ಣ, ಭಾವನಾ ಪಾತ್ರದಲ್ಲಿ ನಟಿ ದಿಶಾ ಮದನ್‌, ಸಂತೋಷ್ ಪಾತ್ರದಲ್ಲಿ ಮಧು ಹೆಗಡೆ, ಹರೀಶ್ ಪಾತ್ರದಲ್ಲಿ ಅಜಯ್‌ ರಾಜ್‌, ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ, ಶ್ರೀನಿವಾಸ್ ಪಾತ್ರದಲ್ಲಿ ಶ್ರೀನಿವಾಸ್‌ ಜಂಭೆ ಅವರು ನಟಿಸುತ್ತಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!