'ಲಕ್ಷ್ಮೀ ನಿವಾಸ' ನಟಿ ಮಾನಸಾಗೆ ಊಟ, ತಿಂಡಿ, ಟೀ ಎಲ್ಲವೂ ತಣ್ಣಗಿರ್ಬೇಕಂತೆ! 2ನೇ ಪತಿಯಿಂದ ರಟ್ಟಾಯ್ತು ಗುಟ್ಟು...

Published : Jan 08, 2025, 12:14 PM ISTUpdated : Jan 08, 2025, 12:20 PM IST
'ಲಕ್ಷ್ಮೀ ನಿವಾಸ' ನಟಿ ಮಾನಸಾಗೆ ಊಟ, ತಿಂಡಿ, ಟೀ ಎಲ್ಲವೂ ತಣ್ಣಗಿರ್ಬೇಕಂತೆ! 2ನೇ ಪತಿಯಿಂದ ರಟ್ಟಾಯ್ತು ಗುಟ್ಟು...

ಸಾರಾಂಶ

'ಜೊತೆಜೊತೆಯಲಿ' ಖ್ಯಾತಿಯ ಮಾನಸ ಮನೋಹರ್, ಫುಟ್ಬಾಲ್ ಆಟಗಾರ ಪ್ರೀತಂ ಚಂದ್ರ ಜೊತೆ ಎರಡನೇ ವಿವಾಹವಾಗಿದ್ದು, ತಮ್ಮ ದಾಂಪತ್ಯದ ಬಗ್ಗೆ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ. ಪರಸ್ಪರ ಗುಟ್ಟಿಲ್ಲ, ಬಿಡುವಿಲ್ಲದ ಜೀವನ, ಪ್ರೀತಂನ ಶಿಸ್ತು, ವಿಭಿನ್ನ ಆಹಾರಪ್ರೀತಿ, ಮಾನಸಳ ತಣ್ಣನೆಯ ಆಹಾರದ ಇಷ್ಟ ಬಹಿರಂಗವಾಗಿದೆ. ಮಾನಸ, ಪ್ರೀತಂರನ್ನು ತನ್ನ "ಮ್ಯಾನಿಫೆಸ್ಟೇಷನ್" ಎಂದಿದ್ದಾರೆ.

 ಜೊತೆಜೊತೆಯಲಿ ಧಾರಾವಾಹಿಯಲ್ಲಿ ಮೀರಾ ಆಗಿ ನಟಿಸಿ ಖ್ಯಾತಿ ಪಡೆದು ಇದೀಗ  ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇ ಗೌಡ್ರ ಅತ್ತಿಗೆಯಾಗಿ ನಟಿಸುತ್ತಿರುವ ಮಾನಸ ಮನೋಹರ್ ಕಳೆದ ನವೆಂಬರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿರುವ ನಟಿ, ಇದೀಗ  ಫುಟ್ ಬಾಲ್ ಪ್ಲೇಯರ್ ಪ್ರೀತಂ ಚಂದ್ರ ಅವರನ್ನು ವರಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ನೂತನ ದಂಪತಿ ಮೊದಲ ಬಾರಿಗೆ ಸಂದರ್ಶನವನ್ನು ನೀಡಿದ್ದು, ತಮ್ಮ ದಾಂಪತ್ಯ ಜೀವನದ ಕೆಲವು ಗುಟ್ಟುಗಳನ್ನು ಹೇಳಿದ್ದಾರೆ. ಪರಸ್ಪರ ಇಷ್ಟಾನಿಷ್ಟ ಸೇರಿದಂತೆ ಕೆಲವು ಕುತೂಹಲದ ವಿಷಯಗಳನ್ನು ಪಂಚಮಿ ಟಾಕ್ಸ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ನಿಮ್ಮಿಬ್ಬರಲ್ಲಿ ಇರುವ ಗೊತ್ತಿರದ ಸೀಕ್ರೇಟ್​ ಯಾವುದು ಎಂದು ಕೇಳಿದಾಗ, ನಮ್ಮಿಬ್ಬರ ನಡುವೆ ಗುಟ್ಟು ಯಾವುದೂ ಇಲ್ಲ ಎಂಬ ಉತ್ತರ ನೀಡಿದ್ದಾರೆ ದಂಪತಿ. ಅಷ್ಟೇ ಅಲ್ಲದೇ ಇಬ್ಬರೂ ಸಿಕ್ಕಾಪಟ್ಟೆ ಬಿಜಿ ಆಗಿರುವ ಕಾರಣ, ಮದ್ವೆಯಾದ್ರೂ ಒಟ್ಟಿಗೇ ಇರಲು ಟೈಮ್ ಸಿಗೋದೇ ಕಷ್ಟವಾಗಿದೆ ಎಂದಿದ್ದಾರೆ. ಪತಿಯನ್ನು ಇದೇ ವೇಳೆ ಹೊಗಳಿದ ನಟಿ ಮಾನಸಾ, ಅವರು ತುಂಬಾ ಡಿಸಿಪ್ಲೇನ್​ ಆಗಿದ್ದಾರೆ. ಅದು ನನಗೆ ತುಂಬಾ ಇಷ್ಟವಾಗುತ್ತದೆ. ಅವರಿಗೆ ಸ್ಪೈಸಿ ಫುಡ್​ ತುಂಬಾ ಇಷ್ಟ. ಅನಿಮಲ್​ ಬೇಸ್ಡ್​ ಯಾವುದೇ ಆಹಾರ ತಿನ್ನಲ್ಲ. ಅದಕ್ಕಾಗಿ ಹಾಲು ಕಂಡರೂ ಅವರಿಗೆ ಆಗಲ್ಲ. ತರಕಾರಿಯಲ್ಲಿಯೂ ಚೂಸಿ ಆಗಿರುತ್ತಾರೆ. ಅದಕ್ಕಾಗಿಯೇ ನಮ್ಮ ಮದುವೆ ಟೈಮ್​ನಲ್ಲಿಯೂ ಅವರೇ ಹೊಸ ಹೊಸ ಅಡುಗೆ ಸಂಶೋಧನೆ ಮಾಡಿದ್ದರು. ಬಾಳೆಕಾಯಿ ಬಿರಿಯಾನಿ, ಬಾಳೆಕಾಯಿ ಫ್ರೈ ಹೀಗೆ ಅವರೇ ಎಲ್ಲಾ ಸೆಲೆಕ್ಟ್​  ಮಾಡಿದ್ರು. ಆದ್ರೆ ಅಡುಗೆ ಸಿಕ್ಕಾಪಟ್ಟೆ ಚೆನ್ನಾಗಿತ್ತು ಎಂದಿದ್ದಾರೆ.

ಪತಿ ಎದುರು ಲಕ್ಷ್ಮೀನಿವಾಸ ಚಿನ್ನುಮರಿ ನವರಸ ಪ್ರದರ್ಶನ! ಪತ್ನಿಯ ಅಭಿನಯಕ್ಕೆ ಮನಸೋತ ಪ್ರತ್ಯಕ್ಷ್

ಮೊದಲ ಮದುವೆಯಿಂದ ತುಂಬಾ ನೊಂದಿರುವ ನಟಿ, ಪ್ರೀತಂ ಜೊತೆ ಎರಡನೆಯ ಮದುವೆಯ ಘೋಷಣೆ ಮಾಡಿದ್ದಾಗ, ಆ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾಗ ಕೆಲವರು ಎರಡನೆ ಮದುವೆಯಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಟಿ, ಹೌದು ಇದು ನನ್ನ ಎರಡನೇ ಮದುವೆ. ಜೀವನದಲ್ಲಿ ಕೆಲವೊಮ್ಮೆ  ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ಆದರೂ ಎಲ್ಲರ ಒಳಿತಿಗಾಗಿ ಆ ಸಂಬಂಧವನ್ನು ಮುಂದುವರೆಸಬೇಕಾಗುತ್ತೆ. ಆದರೆ ಈಗ ನಾನು ನನ್ನ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ಪ್ರೀತಂ ಮತ್ತು ನಾನು ಮದುವೆಯಾಗುತ್ತಿದ್ದೇವೆ. ಇದು ನನಗೆ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ. ಪ್ರತಿಯೊಬ್ಬರ ಪ್ರೀತಿಗೆ ಧನ್ಯವಾದಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು' . ನಿಮ್ಮನ್ನ ನಾನು ನನ್ನ ಕುಟುಂಬ ಅಂದುಕೊಂಡಿದ್ದೇನೆ. ಹಾಗಾಗಿ ನಿಮ್ಮ ಪ್ರಶ್ನೆಗೆ ನಾನು ಸಂತೋಷದಿಂದ ಉತ್ತರಿಸುತ್ತೇನೆ ಎಂದಿದ್ದರು.

ಇದೀಗ ಸಂದರ್ಶನದಲ್ಲಿ ನಟಿ ಇವರು ನನ್ನ ಮ್ಯಾನಿಫೆಸ್ಟೇಷನ್​. ಬಯಸಿ ಸಿಕ್ಕಿರುವಂಥ ಪತಿ ಎಂದಿದ್ದಾರೆ. ಇಬ್ಬರೂ ಸೇರಿ ಒಂದು ಫಿಲ್ಮ್​ ಮಾಡುವುದಾದರೆ, ನಮ್ಮಿಬ್ಬರ ಲವ್​ಸ್ಟೋರಿಯನ್ನೇ ಮಾಡುತ್ತೇವೆ. ಅದಕ್ಕೆ Manifestation ಎಂದೇ ಹೆಸರು ಇಡುತ್ತೇವೆ ಎಂದು ತಮಾಷೆ ಮಾಡಿದ್ದಾರೆ ನಟಿ. ಅದೇ ವೇಳೆ, ಇಬ್ಬರಲ್ಲಿ ವಿಚಿತ್ರದ ಹ್ಯಾಬಿಟ್​ ಏನಾದ್ರೂ ಇದೆಯೇ ಎನ್ನುವ ಪ್ರಶ್ನೆಗೆ, ಪತಿಯಲ್ಲಿ ಯಾವುದೇ ರೀತಿಯ ವಿಚಿತ್ರ ಹ್ಯಾಬಿಟ್​ ಇಲ್ಲ ಎಂದು ನಟಿ ಹೇಳಿದ್ರೆ, ಪತ್ನಿಯಲ್ಲಿ ಇರುವ ವಿಚಿತ್ರ ಹ್ಯಾಬಿಟ್​ ಬಗ್ಗೆ ಪ್ರೀತಂ ರಿವೀಲ್​ ಮಾಡಿದ್ದಾರೆ. ಈಕೆಗೆ ತಣ್ಣಗಿರುವ ಅಡುಗೆ, ಊಟ, ಕಾಫಿ, ಟೀ ಇಷ್ಟ ಎಂದಿದ್ದಾರೆ. ಅದಕ್ಕೆ ನಟಿ ಹೌದು. ನನಗೆ ಬಿಸಿಬಿಸಿ ಎಂದರೆ ಆಗಲ್ಲ. ದೋಸೆ ಮಾಡಿದ್ರೂ 2-3 ಗಂಟೆ ಆದ್ಮೇಲೆ ತಿನ್ನೋದು ಅಂದ್ರೆ ಇಷ್ಟ. ಟೀನೂ ಅಷ್ಟೇ, ತಣ್ಣಗಾದ ಮೇಲೆ ಕುಡಿಯೋದು ಅಂದ್ರೆ ಇಷ್ಟ ಎಂದಿದ್ದಾರೆ.  

ಪುಟ್ಟಕ್ಕನ ಮಗಳು ಸ್ನೇಹಾ ಮತ್ತೆ ವಾಪಸ್​! ಸೀರಿಯಲ್​ ತಂಗಿ ಸುಮಾ ಜೊತೆ ನೋಡಿ ಫ್ಯಾನ್ಸ್​ ಫುಲ್​ ಖುಷ್​...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವೃಷಭ' ಸಿನಿಮಾ ರಿಲೀಸ್;‌ ಕಣ್ಣು ಕಳೆದುಕೊಳ್ಳೋ ಸ್ಥಿತಿ ಬಂದಿದ್ರೂ, ಬೆಲೆ ಇಲ್ಲ ಎಂದ Bigg Boss ರಘು
BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ ಟಾಪ್‌ 3 ರಲ್ಲಿ ಗೆಲ್ಲೋರು ಯಾರು?