ಅಬ್ಬಾ! 'ಲಕ್ಷ್ಮೀ ಬಾರಮ್ಮ' ಕೀರ್ತಿಯ ಅದ್ಭುತ ನೃತ್ಯಕ್ಕೆ ಬೆರಗಾದ ಫ್ಯಾನ್ಸ್​: ಬಿಗ್​ಬಾಸ್​​ ಕಿಶನ್​ ಜೊತೆ ಮೋಡಿ!

ಲಕ್ಷ್ಮೀ ಬಾರಮ್ಮ ಸೀರಿಯಲ್​ ಕೀರ್ತಿ ಅರ್ಥಾತ್​ ನಟಿ ತನ್ವಿ ರಾವ್​ ಅವರು ಬಿಗ್​ಬಾಸ್​​ ಕಿಶನ್​ ಬಿಳಗಲಿ ಜೊತೆ ಅದ್ಭುತ ನೃತ್ಯ ಮಾಡಿದ್ದು ಅಭಿಮಾನಿಗಳು ಮನಸೋತಿದ್ದಾರೆ.
 

Lakshmi Baramma Keerthi Tanvi Rao amazing dance   with Bigg Boss  Kishen Bilagali suc

ಬಿಗ್​ಬಾಸ್ ಮೂಲಕವೇ ಸಕತ್​ ಫೇಮಸ್​ ಆಗಿರೋ ಕಿಶನ್‌ ಬಿಳಗಲಿಯ ನೃತ್ಯ ವೈಖರಿಯನ್ನು ಕಿರುತೆರೆ ಪ್ರೇಮಿಗಳು ನೋಡಿರಲು ಸಾಕು. ಅದರಲ್ಲಿಯೂ ಹೆಚ್ಚಾಗಿ ಬಿಗ್​ಬಾಸ್​​ ಖ್ಯಾತಿಯ ನಮ್ರತಾ ಗೌಡ ಅವರ ಜೊತೆ ಕಿಶನ್​ ಅವರ ರೊಮಾಂಟಿಕ್​ ಸಾಂಗ್​ಗಳನ್ನು ನೋಡಿರುವ ಅಭಿಮಾನಿಗಳು ಇವರಿಬ್ಬರ ಕೆಮೆಸ್ಟ್ರಿಗೆ ಫಿದಾ ಆಗ್ತಿರೋದು ಸುಳ್ಳಲ್ಲ. ಆದರೆ ಇದೀಗ ಲಕ್ಷ್ಮೀ ಬಾರಮ್ಮ ಸೀರಿಯಲ್​​ ಕೀರ್ತಿ ಅರ್ಥಾತ್​ ನಟಿ ತನ್ವಿ ರಾವ್​ ಅವರು ಕಿಶನ್​ ಬಿಳಗಲಿ ಜೊತೆ ನೃತ್ಯದ ಮೋಡಿ ಮಾಡಿದ್ದಾರೆ. ಸೀರೆಯಲ್ಲಿ ಮಿಂಚುತ್ತಿರುವ  ನಟಿ ತನ್ವಿ ಅವರ ನೃತ್ಯಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ. ಇದರ ವಿಡಿಯೋ ಅನ್ನು ಕಿಶನ್​ ಅವರು ಹಂಚಿಕೊಂಡಿದ್ದಾರೆ.


ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ನಾಯಕ ಮತ್ತು ನಾಯಕಿಯರಾದ ವೈಷ್ಣವ್ ಮತ್ತು ಲಕ್ಷ್ಮಿಗಿಂತ ಹೆಚ್ಚು ಜನಪ್ರಿಯತೆ ಪಡೆದ, ಜನ ಮೆಚ್ಚಿದ ನಟಿಯಾಗಿದ್ದಾರೆ ಕೀರ್ತಿ.  ಇವರ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದಾರೆ.  ನೆಗೆಟಿವ್​ ಶೇಡ್ ಪಾತ್ರವಾದರೂ ಜನರಿಗೆ ಕೀರ್ತಿ ಎಂದರೆ ಸಕತ್​ ಇಷ್ಟ. ಸೀರಿಯಲ್​ ನಡುವೆ,  ಕಾವೇರಿ, ಕೀರ್ತಿಯನ್ನು ಬೆಟ್ಟದ ಮೇಲಿಂದ ಕೆಳಕ್ಕೆ ನೂಕುವ ಮೂಲಕ ಆ ಪಾತ್ರಕ್ಕೆ ಫುಲ್ ಸ್ಟಾಪ್ ಇಡಲಾಗಿತ್ತು, ಒಂದು ತಿಂಗಳಿಂದ ಕೀರ್ತಿ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಇದರಿಂದ ಅಭಿಮಾನಿಗಳು ತುಂಬಾನೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಅಭಿಮಾನಿಗಳ ಕಾಯುವಿಕೆಗೆ ಉತ್ತರವಾಗಿ ಕೀರ್ತಿ ಸೀರಿಯಲ್ ಗೆ ರೀ ಎಂಟ್ರಿ ಕೊಟ್ಟರು. 

Latest Videos

ಮತ್ತೆ ಬದಲಾದಳು ಸ್ನೇಹಾ; ಬಂದಳು ರಾಮಾಚಾರಿ ರುಕ್ಕು! ಕಂಠಿ ಗತಿ ನೆನೆಸಿಕೊಂಡು ಕಣ್ಣೀರಿಡ್ತೋ ಫ್ಯಾನ್ಸ್​

ಕೀರ್ತಿಯ ಅಭಿನಯ ಕೋಪ, ಪ್ರೀತಿ, ಹುಚ್ಚು ಪ್ರೀತಿ, ಸ್ಯಾಡಿಸ್ಟ್ ಥರ ಆಡುವ ರೀತಿ ಎಲ್ಲವೂ ಜನರನ್ನು ಮೋಡಿ ಮಾಡಿರುವಂತೆಯೇ, ನಟಿ ತನ್ವಿ ಅವರ ನೃತ್ಯವೂ ಮೋಡಿ ಮಾಡುತ್ತಿದೆ.   ತನ್ವಿ ರಾವ್​,  ಭರತನಾಟ್ಯ ಕಲಾವಿದೆಯಾಗಿದ್ದು, ಕಥಕ್ ಹಾಗೂ ಸೆಮಿ ಕ್ಲಾಸಿಕಲ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ. ಕಿರುತೆರೆಗೆ ಬರುವ ಮುನ್ನ ತನ್ವಿ ರಾವ್ ಹಿಂದಿ ಸಿನಿರಂಗದ ಜನಪ್ರಿಯ ತಾರೆಯರಾದ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾ 'ಗುಲಾಬಿ ಗ್ಯಾಂಗ್'ನಲ್ಲಿ ನಟಿಸಿರುವ ತನ್ವಿ, ಮುಂದೆ 'ಗನ್ಸ್ ಆಫ್ ಬನಾರಸ್' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಕನ್ನಡದ 'ರಂಗ್ ಬಿರಂಗಿ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ‌.

ನಟಿ ಲಕ್ಷ್ಮೀ ಬಾರಮ್ಮ ಸೀರಿಯಲ್​ಗೆ ಮೊದಲು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕೃತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ನಾಯಕಿ ರಾಧಾಳಾಗಿ ನಟಿಸಿ, ವೀಕ್ಷಕರ ಮನ ಸೆಳೆದವರು. ತಮಿಳಿನಲ್ಲಿಯೂ ಇವರು ನಟಿಸಿದ್ದಾರೆ.  'ಜಮೀಲಾ' ಧಾರಾವಾಹಿಯ ಮೂಲಕ ಮನಗೆದ್ದಿದ್ದಾರೆ. ಇನ್ನು ನೃತ್ಯದ ಮೂಲಕ ಮನಸೂರೆಗೊಳ್ಳುತ್ತಿರುವ, ಕಿಶನ್​ ಅವರು ಮೂಲತಃ ಡಾನ್ಸರ್​ ಚಿಕ್ಕಮಗಳೂರಿನ ಇವರು ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್​. ಡಾನ್ಸ್​ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್​ಲೆಟ್​ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈರಲ್​ ಆಗಿತ್ತು. 

ಪ್ರಿಯಾದು ಹನಿಮೂನೂ ಆಗೋಯ್ತು, ಈಗಾದ್ರೂ ಗುಡ್​ನ್ಯೂಸ್​ ಕೊಡಮ್ಮಾ... ಫ್ಯಾನ್ಸ್​ಗೆ ವೈಷು ಮದ್ವೆದೇ ಚಿಂತೆ!

vuukle one pixel image
click me!