Lakshana Serial ಹೀರೋ ಜಗನ್ ರಿಯಲ್ ಹೆಂಡ್ತಿ ಯಾರು?

Published : May 13, 2022, 10:42 AM IST
Lakshana Serial ಹೀರೋ ಜಗನ್ ರಿಯಲ್ ಹೆಂಡ್ತಿ ಯಾರು?

ಸಾರಾಂಶ

ಲಕ್ಷಣ ಸೀರಿಯಲ್‌ ಹೀರೋ ಜಗನ್ ಅದರೆ ಜಗನ್ನಾಥ್ ಚಂದ್ರಶೇಖರ್ ಸೀರಿಯಲ್ ಕತೆಯಲ್ಲಿ ಸಾಂಸಾರಿಕ ಸಂಕಷ್ಟಕ್ಕೆ ಬಿದ್ದಿದ್ದಾರೆ. ಅವರ ರಿಯಲ್ ಸಂಸಾರ ಹೇಗಿದೆ? ಮದ್ವೆ, ಹೆಂಡ್ತಿ?

ಸೀರಿಯಲ್‌ (Serial) ಕತೆ ಹೆಚ್ಚಾಗಿ ಹೀರೋಯಿನ್ ಪ್ರಧಾನವಾಗಿದ್ದರೂ ಹೀರೋಗಳೂ ಶೈನ್ ಆಗ್ತಾರೆ. ಹೀರೋಯಿನ್‌ ಅಷ್ಟೇ ಸ್ಕ್ರೀನ್ ಸ್ಪೇಸ್(Screen space) ತಗೊಂಡು ಮಿಂಚುತ್ತಿರುತ್ತಾರೆ. ಇದರಲ್ಲಿ ಲಕ್ಷಣ ಸೀರಿಯಲ್‌ನಲ್ಲಿ ಹೀರೋ ಭೂಪತಿ(Bhupathi)  ಪಾತ್ರ ಮಾಡೋ ಜಗನ್(Jagan) ಕೂಡ ಹಿಂದೆ ಬಿದ್ದಿಲ್ಲ. ಹೇಳಿ ಕೇಳಿ ಅವರೇ ಪ್ರೊಡ್ಯೂಸ್ ಮಾಡುತ್ತಿರುವ ಸೀರಿಯಲ್ ಇದು. ಸೋ ಅವರಿಗೆ ಬೇಕಾದ ಹಾಗೆ ಮಿಂಚೋದಕ್ಕೆ ಅವಕಾಶ ಇಲ್ಲ ಅಂತ ದೂರೋ ಹಾಗೇ ಇಲ್ಲ. ಸೀರಿಯಲ್‌ ವಿಚಾರಕ್ಕೆ ಬಂದರೆ ಸದ್ಯ 'ಲಕ್ಷಣ' ಸೀರಿಯಲ್‌ನಲ್ಲಿ (Lakshana) ಶ್ವೇತಾ ಜೊತೆಗೆ ಫಿಕ್ಸ್ ಆದ ಭೂಪತಿ ಮದುವೆ ಕೊನೆಯ ಕ್ಷಣದಲ್ಲಿ ನಕ್ಷತ್ರಾ(Nakshatra) ಜೊತೆಗೆ ಆಗಿದೆ. ಇದು ಮದುಮಗ ಭೂಪತಿಯಿಂದ ಹಿಡಿದು ಅವನ ತಾಯಿ, ಬಂಧು ಮಿತ್ರರು, ಸ್ವತಃ ನಕ್ಷತ್ರಾಗೇ ಅಚ್ಚರಿ ತಂದಿತ್ತು. ಆದರೆ ಮದುವೆ ಆದ ಮಾತ್ರಕ್ಕೆ ನಕ್ಷತ್ರಾ ಲೈಫು ಸರಿ ಹೋಗಿಲ್ಲ. ಅತ್ತ ಭೂಪತಿ ಮನೆಯವರು ಅವಳು ಸೊಸೆ ಆದರೂ ಸೊಸೆ ಅಂತ ಒಪ್ಕೊಳ್ತಾ ಇಲ್ಲ. ಈ ಕಡೆ ತನ್ನ ಮನೆಯವರನ್ನು ನಕ್ಷತ್ರಾಳೇ ದೂರ ಮಾಡಿದ್ದಾಳೆ. ಸದ್ಯಕ್ಕೀಗ ಭೂಪತಿ ಅಮ್ಮ ಶಕುಂತಳಾ ದೇವಿ ಮಗನಿಗೆ ಮರು ಮದುವೆ ಮಾಡಿಸಬೇಕು ಅಂತ ಹೊರಟಿದ್ದಾರೆ. ಆದರೆ ಭೂಪತಿಗೆ ಮದುವೆ ಅನ್ನೋದೇ ರೋಸಿ ಹೋಗಿದೆ. 'ಈ ಜನ್ಮಕ್ಕೆ ಇನ್ನೊಂದು ಮದ್ವೆ ಆಗಲ್ಲ' ಅಂತ ಆತ ಗಟ್ಟಿದನಿಯಲ್ಲಿ ಹೇಳಿದ್ದಾನೆ, 'ಇನ್ನು ನಾನು ತಾಳಿ ಕಟ್ಟೋದಿರಲಿ, ನನ್ನ ಲೈಫಲ್ಲಿ ತಾಳಿ ಮುಟ್ಟೋದೂ ಇಲ್ಲ' ಎಂದಿದ್ದಾನೆ. ಅಂದರೆ ನಕ್ಷತ್ರಾ ಜೊತೆನೂ ಬಾಳ್ಬೆ ಮಾಡಲ್ವಾ ಭೂಪತಿ ಅಂತ ಪ್ರಶ್ನೆ ಬರೋ ಥರ ಸೀರಿಯಲ್‌ ಟೀಮ್ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ.

ಸೇತೂರಾಂ ಹೊಸ ಸೀರಿಯಲ್ ಯುಗಾಂತರ ಬರ್ತಿದೆ!

ಹೀರೋ ಜಗನ್ ವಿಷಯಕ್ಕೆ ಬರೋದಾದ್ರೆ, ತಮ್ಮ ಸೀರಿಯಲ್ ಪಾತ್ರದ ಮೂಲಕ ಅವರು ಸಾಕಷ್ಟು ಮಂದಿಯನ್ನು ಇಂಪ್ರೆಸ್ ಮಾಡಿರೋದು ಸುಳ್ಳಲ್ಲ. ಕಿರುತೆರೆಯಲ್ಲಿ ಜಗನ್ ನಟನೆಯ ಗಾಂಧಾರಿ ಸೀರಿಯಲ್(Gandhari serial) ತಕ್ಕಮಟ್ಟಿನ ಹೆಸರು ಮಾಡಿತ್ತು. ಅವರು ಮೊದಲು ಮನರಂಜನಾ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದು ಸಿನಿಮಾ ಮೂಲಕ. 2009ರಲ್ಲಿ ತೆರೆಕಂಡ 'ಜೋಶ್' (Josh) ಸಿನಿಮಾ ಮೂಲಕ ಎಂಟರ್‌ಟೈನ್‌ಮೆಂಟ್ ಫೀಲ್ಡ್‌ಗೆ ಎಂಟ್ರಿ ಕೊಟ್ಟರು ಜಗನ್. ಇವರು ನಟಿಸಿರೋ ಮೊದಲ ಸೀರಿಯಲ್ ಹೆಸರು ಪುನರ್‌ ವಿವಾಹ (Punar vivaha). ಮುಂದೆ 'ಗಾಂಧಾರಿ', 'ಸೀತಾ ವಲ್ಲಭ'(Seetha vallabha) ಧಾರಾವಾಹಿಗಳಲ್ಲಿ ಜಗನ್ ಹೀರೋ ಆಗಿ ನಟಿಸುತ್ತಾರೆ. ಬಿಗ್‌ಬಾಸ್‌ಗೂ(Big boss) ಹೋಗಿ ಬರ್ತಾರೆ. 'ಸೀತಾ ವಲ್ಲಭ' ನಂತರ ಒಂದು ಬ್ರೇಕ್ ಪಡೆದ ಜಗನ್ ಈಗ 'ಲಕ್ಷಣ' ಧಾರಾವಾಹಿ ಮೂಲಕ ಮತ್ತೊಮ್ಮೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಬಾರಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕ ಸಹ ಆಗಿದ್ದಾರೆ. 'ಲಕ್ಷಣ' ಸೀರಿಯಲ್ ಅನ್ನು ನಿರ್ಮಾಣ ಮಾಡುವ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಸಹ ಆಗಿದ್ದಾರೆ. 'ಲಕ್ಷಣ' ಧಾರಾವಾಹಿ ಈಗಾಗಲೇ ಬಹಳ ಜನಪ್ರಿಯತೆ ಪಡೆದುಕೊಂಡಿದೆ.

Puttakkana Makkalu : ಖಡಕ್ ಬಡ್ಡಿ ಬಂಗಾರಮ್ಮ ಆಗಿ ಮಿಂಚುತ್ತಿರುವ ಮಂಜುಭಾಷಿಣಿ

ಬಹಳಷ್ಟು ಜನ ಅದರಲ್ಲೂ ಫೀಮೇಲ್ ಆಡಿಯನ್ಸ್ ಜಗನ್ ಸಿಂಗಲ್ ಅಂತಲೇ ಅಂದುಕೊಂಡಿದ್ದಾರೆ. ಆದರೆ ಜಗನ್ ಅವರಿಗೆ 2019ರಲ್ಲೇ ಮದುವೆ ಆಗಿದೆ. ಇವರ ಹೆಂಡತಿ ಹೆಸರು ರಕ್ಷಿತಾ (Rakshitha Muniyappa). ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮಾಡಿರೋ ರಕ್ಷಿತಾ, ದುಬೈನಲ್ಲಿ ಎರಡು ವರ್ಷಗಳ ಕಾಲ ಫ್ಯಾಶನ್ ಡಿಸೈನಿಂಗ್ ಕೋರ್ಸ್(Fashion designing) ಮಾಡಿದ್ದಾರೆ.

 

ಮದುವೆಗಿಂತ ಮೊದಲು ಫ್ಯಾಶನ್ ಡಿಸೈನರ್ ಆಗಿದ್ದವರು ರಕ್ಷಿತಾ. ಸ್ವಲ್ಪ ಸಮಯ ಬ್ರೇಕ್ ಪಡೆದು ಈಗ ಮತ್ತೊಮ್ಮೆ ತಮ್ಮ ಕೆಲಸ ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜಗನ್ ಆಗಾಗ ತಮ್ಮ ಪತ್ನಿ ಜೊತೆ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ. ಇವರಿಬ್ಬರು ಹಲವು ವರುಷಗಳಿಂದ ಪ್ರೀತಿಸುತ್ತಿದ್ದರು, ಈ ಬಗ್ಗೆ ಮನೆಯವರ ಬಳಿ ತಿಳಿಸಿ 2019ರಲ್ಲಿ ಹೊಸಜೀವನಕ್ಕೆ ಕಾಲಿಟ್ಟರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?