ಶೂಟಿಂಗ್ ಸೆಟ್‌ನಲ್ಲಿ ಡೈಲಾಗ್ ಹೇಳಿಕೊಡುವುದು ಹೇಗೆ? ಪುಟ್ಟಕ್ಕನ ಮಕ್ಕಳು ತೆರೆಮರೆಯ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಈ ಎಲ್ಲಾ ದೃಶ್ಯಗಳನ್ನು ನೋಡಬಹುದಾಗಿದೆ.
ಒಂದು ಸೀರಿಯಲ್ ಶೂಟಿಂಗ್ ಮಾಡಬೇಕಾದರೆ, ಅದು ಅಂದುಕೊಂಡಷ್ಟು ಸುಲಭವಲ್ಲ. ಅದರ ಹಿಂದೆ ಅದೆಷ್ಟೋ ತಂತ್ರಜ್ಞರ ಶ್ರಮವಿರುತ್ತದೆ. ನಮಗೆ ನಟ-ನಟಿಯರು ಮಾತ್ರ ತೆರೆಯ ಮೇಲೆ ಕಾಣಿಸುತ್ತಾರೆ. ಆದರೆ ಅವರಿಂದ ಒಂದೊಂದು ಡೈಲಾಗ್ ಹೇಳಿಸಲು, ಒಂದೊಂದು ದೃಶ್ಯವನ್ನು ಶೂಟ್ ಮಾಡಲು ತೆರೆಮರೆಯ ಹಿಂದಿನ ಹಲವಾರು ಕೈಗಳು ಇರುತ್ತವೆ. ಅದರಲ್ಲಿಯೂ ಪ್ರತಿಯೊಬ್ಬರಿಗೂ ನಿರ್ದೇಶನ ಮಾಡುವುದು, ಅವರಿಗೆ ಡೈಲಾಗ್ ಹೇಳಿಕೊಡುವುದು ಸುಲಭದ ಮಾತೂ ಅಲ್ಲ. ತುಂಬಾ ಪಳಗಿರುವ ನಟರಿಗೆ ಡೈಲಾಗ್ ಆಗಲೀ, ಆ ಸನ್ನಿವೇಶಕ್ಕೆ ತಕ್ಕಂತೆ ಹೇಗೆ ಆಕ್ಟ್ ಮಾಡಬೇಕು ಎನ್ನುವುದಾಗಲೀ ಹೇಳಿಕೊಡಬೇಕೆಂದೇನೂ ಇಲ್ಲ. ಆದರೆ ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ಹೊಸ ಹೊಸ ಮುಖಗಳೇ ಬರುತ್ತವೆ. ಅದರಲ್ಲಿಯೂ ಚಿಕ್ಕಪುಟ್ಟ ರೋಲ್‌ಗಳಲ್ಲಿ ಕಾಣಿಸಿಕೊಳ್ಳುವವರು ಹೊಸಬರೇ ಆಗಿರುತ್ತಾರೆ. ಅವರಿಗೆ ದೃಶ್ಯಕ್ಕೆ ತಕ್ಕಂತೆ ನಟನೆ ಹೇಳಿಕೊಡುವುದು, ಡೈಲಾಗ್ ಹೇಳಿಕೊಡುವುದು ಕೆಲವೊಮ್ಮೆ ಹರಸಾಹಸವೇ ಆಗಿರುತ್ತದೆ.
ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ತೆರೆಮರೆಯ ದೃಶ್ಯದ ವಿಡಿಯೋ ಅನ್ನು ಡಿವಿ ಡ್ರೀಮ್ಸ್ ಎನ್ನುವ ಯೂಟ್ಯೂಬ್ ಚಾನೆಲ್‌ನಲ್ಲಿ ಶೇರ್ ಮಾಡಲಾಗಿದೆ. ಇದರಲ್ಲಿ ಇನ್ಸ್‌ಪೆಕ್ಟರ್‍ಗೆ ಡೈಲಾಗ್ ಹೇಳಿಕೊಡುತ್ತಿರುವ ದೃಶ್ಯವಿದೆ. ಒಂದು ಸೀನ್ ಜನರ ಮುಂದೆ ಬರಬೇಕಾದರೆ ಎಷ್ಟೆಲ್ಲಾ ಸಾಹಸ ಮಾಡಬೇಕು ಎನ್ನುವುದನ್ನು ಇದರಲ್ಲಿ ನೋಡಬಹುದು. ಅಷ್ಟಕ್ಕೂ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಈಗ ಕಂಠ ನಾಪತ್ತೆಯಾಗಿದ್ದಾನೆ. ಅವನನ್ನು ಹುಡುಕಲು ಲೇಡಿ ಇನ್ಸ್‌ಪೆಕ್ಟರ್ ಎಂಟ್ರಿಯಾಗಿದೆ. ಇದರಲ್ಲಿ ಇನ್ಸ್‌ಪೆಕ್ಟರ್ ಪಾತ್ರಧಾರಿಯ ನಟನೆಗೆ ವೀಕ್ಷಕರು ಭೇಷ್ ಎನ್ನುತ್ತಿದ್ದಾರೆ. ಸದ್ಯ ಸೀರಿಯಲ್‌ನಲ್ಲಿ ಅವರೇ ಹೈಲೈಟ್. ಇನ್ಸ್‌ಪೆಕ್ಟರ್ ಪಾತ್ರ ಮಾಡುವುದು ಸುಲಭದ ಮಾತಲ್ಲ. ಅದರ ಗತ್ತೇ ಬೇರೆ ಇರುತ್ತದೆ. ಅವರಿಗೆ ಡೈಲಾಗ್ ಹೇಗೆ ಹೇಳಿಕೊಡಲಾಗುತ್ತಿದೆ ಎನ್ನುವ ಭಾಗವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್ ಉತ್ತರ ಕೇಳಿ...
ಅಂದಹಾಗೆ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಹೌದು. ಸದ್ಯ ಪುಟ್ಟಕ್ಕನ ಮಕ್ಕಳು ಕಥೆ ತೀವ್ರ ಕುತೂಹಲ ಪಡೆದುಕೊಂಡಿದೆ. ಪ್ರೀತಿಯ ಮಡದಿ ಸ್ನೇಹಾ ಸಾವಿನಿಂದ ಕಂಠಿ ಕಂಗಾಲಾಗಿದ್ದಾನೆ. ಒಳ್ಳೆಯವರಿಗೆ ಕಾಲ ಇಲ್ಲ ಎನ್ನುವುದು ಅವನಿಗೆ ಅರಿವಾಗಿದೆ. ಸದ್ಯ ಹೊಸ ಸ್ನೇಹಾಳ ಎಂಟ್ರಿಯಾಗಿದ್ದು, ಕಂಠಿ ಮತ್ತು ಈಕೆ ಯಾವಾಗ ಒಂದಾಗ್ತಾರೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಈ ಸ್ನೇಹಾಳನ್ನು ಕಂಡರೆ ಕಂಠಿ ಕೊತ ಕೊತ ಕುದಿಯುತ್ತಿದ್ದಾನೆ. ತನ್ನ ತಾಯಿ ಬಂಗಾರಮ್ಮನ ಸಾಯಿಸಲು ಹೋದ ಹಾಗೂ ಪತ್ನಿ ಸ್ನೇಹಾಳನ್ನು ಸಾವಿಗೆ ಕಾರಣರಾಗಿರುವ ಸಿಂಗಾರಮ್ಮ ಮತ್ತು ಆತನ ಮಗನನ್ನು ಮುಗಿಸಿಬಿಡಲು ಹೋಗುವಾಗ ಹೊಸ ಸ್ನೇಹಾ ತಡೆದಿದ್ದಾಳೆ. ಇದಾಗಲೇ ಕೆಲವರಿಗೆ ಚೂರಿ ಇರಿತ ಮಾಡಿದ್ದ ಕಂಠಿ. ಪೊಲೀಸರು ಬಂದಾಗ ಸ್ನೇಹಾ, ತನ್ನ ಕೈಗೆ ಚೂರಿಯನ್ನು ತೆಗೆದುಕೊಂಡು ತಾನೇ ಅಪರಾಧ ಮಾಡಿದಂತೆ ಬಿಂಬಿಸಿದ್ದಾಳೆ. ಸದ್ಯ ಸ್ನೇಹಾ ಜೈಲುಪಾಲಾಗಿದ್ದಾಳೆ. ಇದರಿಂದ ಕಂಠಿ ಅವಳ ಮೇಲೆ ಪ್ರೀತಿ ತೋರ್‍ತಾನಾ ಕಾದು ನೋಡುವಷ್ಟರಲ್ಲಿಯೇ ಇಬ್ಬರ ಕೊಲೆ ಮಾಡಿರುವ ಆರೋಪ ಅವನ ಮೇಲೆ ಬಂದಿದೆ!
ಸ್ನೇಹಾ ಸುಳ್ಳು ಹೇಳುತ್ತಿದ್ದಾಳೆ ಎನ್ನುವುದು ಲೇಡಿ ಪೊಲೀಸ್‌ಗೆ ತಿಳಿದಿದೆ. ಆದರೂ ಸ್ನೇಹಾ ತನ್ನದೇ ತಪ್ಪು ಎಂದು ವಾದಿಸುತ್ತಿದ್ದಾಳೆ. ಕಂಠಿಯನ್ನು ಬಚಾವ್ ಮಾಡುವುದು ಆಕೆಗೆ ಇರುವ ಗುರಿ. ಎಷ್ಟೆಂದರೂ ಕಂಠಿಯ ಪ್ರೀತಿಯ ಮಡದಿಯ ಹೃದಯವನ್ನು ಹೊತ್ತುಕೊಂಡಿದ್ದಾಳಲ್ಲ ಈ ಸ್ನೇಹಾ. ಇದೇ ಕಾರಣಕ್ಕೆ ಕಂಠಿ ಸಾಹೇಬ್ರು ಎಂದ್ರೆ ಅವಳಿಗೆ ಅಕ್ಕರೆ. ಆದರೆ ಪೊಲೀಸ್‌ಗೆ ಕಂಠಿಯದ್ದೇ ಎಲ್ಲಾ ಕಿತಾಪತಿ ಎನ್ನುವ ವಿಷಯ ತಿಳಿದಿದೆ. ಇದೇ ಕಾರಣಕ್ಕೆ ಕಂಠಿಯನ್ನು ಹುಡುಕಿಯೇ ತೀರುವ ಪಣ ತೊಟ್ಟಿದ್ದಾಳೆ ಲೇಡಿ ಇನ್ಸ್‌ಪೆಕ್ಟರ್. ಇದೀಗ ಆಕೆ ಪುಟ್ಟಕ್ಕನ ಮನೆಗೂ ಎಂಟ್ರಿ ಕೊಟ್ಟಿದ್ದಾಳೆ. ಆದರೆ ಪುಟ್ಟಕ್ಕ ಮತ್ತು ಮನೆಯವರಿಗೆ ಕಂಠಿಯನ್ನು ಈಕೆ ಯಾಕೆ ಹುಡುಕುತ್ತಾ ಇದ್ದಾಳೆ ಎನ್ನುವುದೇ ತಿಳಿದಿಲ್ಲ. ತಮ್ಮ ಅಳಿಯ ಯಾವುದೇ ತಪ್ಪು ಮಾಡಿಲ್ಲ ಎನ್ನುವುದು ಅವರ ಮಾತು. ಆದರೆ ಇನ್ಸ್‌ಪೆಕ್ಟರ್ ಬಿಡಬೇಕಲ್ಲ. ನನ್ನ ಮೇಲೆ ರೇಗಾಡಿದ್ದಾನೆ. ಕಣ್ಣು ತಪ್ಪಿಸಿ ಜೈಲಿಗೆ ಬಂದಿದ್ದಾನೆ. ಒದ್ದು ಒಳಗೆ ಹಾಕ್ತೇನೆ ಎಂದಿದ್ದಾಳೆ. ತಪ್ಪು ಮಾಡಿಲ್ಲ ಅಂದರೆ ತಲೆ ಮರೆಸಿಕೊಂಡುಓಡಾಡುವ ಅಗತ್ಯವಿಲ್ಲ ಎಂದಿದ್ದಾಳೆ. 24 ಗಂಟೆ ಟೈಮ್ ಕೊಡುತ್ತೇನೆ. ಅವನು ಎಲ್ಲಿದ್ದರೂ ಹುಡುಕಿ ಹೇಳಬೇಕು. ಇಲ್ಲದೇ ಹೋದರೆ, ಅವನನ್ನು ಒಳಗೆ ಹಾಕಿ, ಹೊರಗೆ ಬರದ ರೀತಿಯಲ್ಲಿ ಕೇಸ್ ಫಿಟ್ ಮಾಡುತ್ತೇನೆ ಎಂದು ಎಚ್ಚರಿಕೆ ಕೊಟ್ಟು ಹೋಗಿದ್ದಾಳೆ. ಪೊಲೀಸ್ ಇಲಾಖೆಯಿಂದ ಮಿಸ್ಸಿಂಗ್ ಪಾಂಪ್ಲೆಟ್ ಕೂಡ ಹಂಚಲಾಗುತ್ತಿದೆ! ಮುಂದೇನು ಎನ್ನುವುದು ಸದ್ಯದ ಕುತೂಹಲ. ಈ ವಿಡಿಯೋದಲ್ಲಿ ಇನ್ಸ್‌ಪೆಕ್ಟರ್ ಪಾತ್ರದ ಶೂಟಿಂಗ್ ನೋಡಬಹುದಾಗಿದೆ.
ಸೀತಾರಾಮ ಸಿರಿಯಲ್ ರಾತ್ರಿ ಶೂಟಿಂಗ್ ಮಾಡುವಾಗ ಏನೆಲ್ಲಾ ಆಯ್ತು? ನಟಿ ಮೇಘನಾ ರಿವೀಲ್