ಈ ಸಲದ ಹ್ಯಾಪಿ ಬಿಗ್ ಬಾಸ್ ಡಿಫರೆಂಟ್ ಎಂಬುದು ಈಗಾಗ್ಲೇ ಹಲವು ರೀತಿಯಲ್ಲಿ ಸಾಬೀತಾಗಿದೆ. ಕಿಚ್ಚ ಸುದೀಪ್ ಅವರ ಪಂಚಾಯಿತಿ ಕೂಡ ಹಿಂದಿಗಿಂತ ಡಿಫರೆಂಟ್ ಆಗಿರತ್ತಾ? ಹೌದು ಎಂದಾದ್ರೆ ಅದರ ವಿಶೇಷತೆಗಳು ಏನಿರಬಹುದು? ಈ ವಾರದ ಕಿಚ್ಚನ ಲುಕ್ ಹೇಗಿರತ್ತೆ?
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ನಡೆಯುತ್ತಿರುವುದು ಬಿಗ್ ಬಾಸ್ ಪ್ರಿಯರಿಗೆ ಗೊತ್ತಿದೆ. ಇದೀಗ 7ನೇ ದಿನಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಸಂಚಿಕೆ, ವೀಕ್ಷಕರಿಗೆ ಸಖತ್ ಮಜಾ ಕೊಡುತ್ತಿದೆ. ಸ್ಪರ್ಧಿಗಳಲ್ಲಿ ಒಳಪಂಗಡಗಳು, ಮನಸ್ತಾಪಗಳು, ಟೀಕೆ-ಟಿಪ್ಪಣೆಗಳು ದಿನದಿನಕ್ಕೂ ಹೆಚ್ಚಾಗುತ್ತಲೇ ಇವೆ. ಎರಡು ಲವ್ ಮ್ಯಾಟರ್ ನಡೆಯುತ್ತಿದೆ ಎಂಬ ಗಾಸಿಪ್ ಹಬ್ಬಿದೆ. ಇಷ್ಟರಲ್ಲಿ ವೀಕೆಂಡ್ ಬಂದುಬಿಟ್ಟಿದೆ. ವೀಕೆಂಡ್ ಅಂದ್ರೆ ಏನು ಸ್ಪೆಷಲ್ ಅಂತ ಗೊತ್ತಲ್ವಾ?
ವೀಕೆಂಡ್ ನಲ್ಲಿ ಎಲ್ರೂ ಲೇಟಾಗಿ ಎದ್ರೆ, ಬಿಗ್ ಬಾಸ್ ಮನೇಲಿ ಎಂದಿಗಿಂದ ಮೊದಲೇ ಮಾರ್ನಿಂಗ್ ಸಾಂಗ್ ರಿಂಗಣಿಸಿದೆ. ಏನೀವತ್ತು ಸ್ಪೆಷಲ್? ಶನಿವಾರದ-ಭಾನುವಾರ ಬಂತಂದ್ರೆ ಬಿಗ್ ಬಾಸ್ ಮನೆಗೆ ಸ್ಪೆಷಲ್ ದಿನ!. ಯಾಕಂತ ಹೇಳೋ ಅಗತ್ಯವೇ ಇಲ್ಲ. ಅದು ಬಹುನಿರೀಕ್ಷೆಯ 'ಕಿಚ್ಚನ ಪಂಚಾಯಿತಿ' ನಡೆಯುವ ದಿನ. ಹೌದು, ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನ ಮೊದಲ ಪಂಚಾಯಿತಿ ಹೇಗಿರುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
'ನಾನು ಊಟ ಬೇಡ ಅಂತೀನಿ.. ಮುದ್ದು ಮಾಡಿಯೇ ತಿನ್ನಿಸ್ಬೇಕು..' ಸಂಗೀತಾಗೆ ಲಾರ್ಡ್ ಪ್ರಥಮ್ ಆರ್ಡರ್!
ಈ ಸಲದ ಹ್ಯಾಪಿ ಬಿಗ್ ಬಾಸ್ ಡಿಫರೆಂಟ್ ಎಂಬುದು ಈಗಾಗ್ಲೇ ಹಲವು ರೀತಿಯಲ್ಲಿ ಸಾಬೀತಾಗಿದೆ. ಕಿಚ್ಚ ಸುದೀಪ್ ಅವರ ಪಂಚಾಯಿತಿ ಕೂಡ ಹಿಂದಿಗಿಂತ ಡಿಫರೆಂಟ್ ಆಗಿರತ್ತಾ? ಹೌದು ಎಂದಾದ್ರೆ ಅದರ ವಿಶೇಷತೆಗಳು ಏನಿರಬಹುದು? ಈ ವಾರದ ಕಿಚ್ಚನ ಲುಕ್ ಹೇಗಿರತ್ತೆ? ಕಿಚ್ಚ ಸುದೀಪ್ ಕ್ಲಾಸ್ ಹೇಗಿರುತ್ತೆ? ಸ್ಪರ್ಧಿಗಳ ರೆಸ್ಪಾನ್ಸ್, ಸ್ಥಿತಿ-ಗತಿಗಳು ಹೇಗಿರುತ್ತವೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟದ ಕೆಲಸ!
ಎಷ್ಟೇ ಕೇಳಿದರೂ ಮೊಬೈಲ್ ಪಾಸ್‌ವರ್ಡ್ ಕೊಡದ ವಿನಯ್ ಗೌಡ; ಸೀಕ್ರೆಟ್ ಗ್ರೂಪ್‌ಗಳಿದೆ ಎಂದು ಪತ್ನಿ ಫುಲ್ ಗರಂ
ಇಂದಿನ ಸಂಚಿಕೆಯಲ್ಲಿ 'ಕಚ್ಚನ ಪಂಚಾಯಿತಿ' ಬಗ್ಗೆ ಕುತೂಹಲವಂತೂ ಬೆಟ್ಟದಷ್ಟಿದೆ... ಅದನ್ನು ತಣಿಸಿಕೊಳ್ಳಲು ರಾತ್ರಿ 9.00 ಗಂಟೆವರೆಗೆ ಕಾಯಲೇಬೇಕು. ಅಲ್ಲಿಯವರೆಗೆ ಬೇಸರ ಮಾಡಿಕೊಳ್ಳುವುದಾಗಲೀ ಸುಮ್ಮನೇ ಕಾಲಾಹರಣ ಮಾಡುವ ಅಗತ್ಯವಾಗಲೀ ಇಲ್ಲ. ಏಕೆಂದರೆ, ಬೇಕಾದಾಗಲ್ಲೆಲ್ಲ'ಬಿಗ್ ಬಾಸ್ ಶೋವನ್ನು, 'JioCinema'ದಲ್ಲಿ ಉಚಿತ 24ಗಂಟೆ ನೇರಪ್ರಸಾರವನ್ನು ವೀಕ್ಷಿಸಬಹುದು.
ಅಂದಹಾಗೆ, ಕಿಚ್ಚನ ಪಂಚಾಯಿತಿಯನ್ನು Colors Kannada ವಾಹಿನಿಯಲ್ಲಿ ರಾತ್ರಿ 9.00ಕ್ಕೆ ಮರೆಯದೇ ವೀಕ್ಷಿಸಿ...