ನಿಧಿ ಸುಬ್ಬಯ ಮನೆಗೆ ಮಾಲೆ ಪಟಾಕಿ ಎಸೆದಿದ್ದ ರಾಕಿ ಭಾಯ್

Published : Mar 03, 2021, 10:41 AM IST
ನಿಧಿ ಸುಬ್ಬಯ ಮನೆಗೆ ಮಾಲೆ ಪಟಾಕಿ ಎಸೆದಿದ್ದ ರಾಕಿ ಭಾಯ್

ಸಾರಾಂಶ

ಬಿಗ್‌ಬಾಸ್ ಸೀಸನ್ 8 ರಲ್ಲಿ ಎಪಿಸೋಡ್ ಕಳೆಯುತ್ತಿದ್ದಂತೆ ಇಂಟ್ರೆಸ್ಟಿಂಗ್ ವಿಚಾರಗಳು ಹೊರ ಬರುತ್ತಿವೆ. ನಿಧಿ ಸುಬ್ಬಯ್ಯ ಮನೆಗೆ ಮಾಲೆ ಪಟಾಕಿ ಎಸೆದಿದ್ಯಾರು ಗೊತ್ತಾ..?

ನಟಿ ನಿಧಿ ಸುಬ್ಬಯ್ಯ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸ್ವಾರಸ್ಯಕರ ಸಂಗತಿಗಳು ದಿನಕಳೆದಂತೆ ಹೊರ ಬರುತ್ತವೆ. ಇದೀಗ ನಟಿ ತಮ್ಮ ಹಳೆಯ ದಿನಗಳಿಂದ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಅಜ್ಜಿ, ತಾತನ ಜೊತೆ ಇದ್ದರು ನಿಧಿ. ಮೇಲಿನ ಫ್ಲೋರ್‌ನಲ್ಲಿ ನಿಧಿ ವಾಸಿಸುತ್ತಿದ್ದರೆ, ಕೆಳಗಡೆ ತಾತ ಇದ್ದರು. ಏನೋ ಇನ್ಸಿಡೆಂಟ್ ನಡೆದು ಅದೊಂದು ದಿನ ನಿಧಿ ಮನೆಗೆ ಕೆಲವು ಬೈಕ್ಸ್ ಬಂದಿತ್ತು.

BBK8: ಮೊದಲ ದಿನವೇ ದಿವ್ಯಾ ಸುರೇಶ್ ಪ್ರೀತಿಯ ಬಲೆಗೆ ಬಿದ್ದ ಲ್ಯಾಗ್ ಮಂಜು!

ರಾತ್ರಿ ವೇಳೆ 4 ಬೈಕ್‌ನಲ್ಲಿ ಎಂಟು ಜನ ಬಂದಿದ್ದರು. ನಿಧಿ ಅವರು ಕೆಳಗಿನ ಫ್ಲೋರ್‌ನಲ್ಲಿರುತ್ತಾರೆಂದು ಅಲ್ಲೇ ಮಾಲೆ ಪಟಾಕಿ ಎಸೆದಿದ್ದರು. ನಡುರಾತ್ರಿ ದೊಡ್ಡ ಸದ್ದಿನಲ್ಲಿ ಒಡೆದಿತ್ತು ಪಟಾಕಿ.

ಎದ್ದು ನೋಡಿದರೆ ನಾಲ್ಕು ಬೈಕ್‌ಗಳು ಪಾಸಾಗುವುದು ಕಂಡಿತು ಅಷ್ಟೇ. ನಂತರ ಪೊಲೀಸ್ ಸ್ಟೇಷನ್‌ಗೆ ಕಂಪ್ಲೇಂಟ್ ಕೊಟ್ಟಿದ್ದೂ ಆಯಿತಂತೆ. ಅಂದ ಹಾಗೆ ಇದನ್ನು ಮಾಡಿದ್ಯಾರು ಗೊತ್ತಾ..?

'ನನ್ನ ಹೆಂಡತಿ ಕೈಯೂಟ ತಿಂದ ಹದಿನೈದು ಜನ ಸತ್ತೋಗಿದ್ದಾರೆ'

ಎಲ್ಲರೂ ನಿಧಿ ಸ್ಟೋರಿಯನ್ನು ಇಂಟ್ರೆಸ್ಟಿಂಗ್‌ನಲ್ಲಿ ಕೇಳುವಾಗ ಪಟಾಕಿ ಎಸೆದವರು ನಟ ಎಂದರು ನಿಧಿ. ಇದು ಇನ್ನಷ್ಟು ಕುತೂಹಲ ವಿಚಾರ. ಆಗ ಪಟಾಕಿ ಎಸೆದಾತ ಯಶ್ ಎಂದಿದ್ದಾರೆ ನಿಧಿ. ಇದು ಎಲ್ಲರಿಗೂ ಅಚ್ಚರಿಯ ಮತ್ತು ಹೊಸ ವಿಚಾರ.. ನಮಗೂ.. ಅಲ್ವಾ..?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಿಶ್ವಕಪ್ ಚಾನ್ಸ್ ಗೊಂದಲ ನಡುವೆ ಬಿಗ್ ಟ್ವಿಸ್ಟ್, ಟಿವಿ ಶೋಗೆ ಪಾದಾರ್ಪಣೆ ಮಾಡುತ್ತಿದ್ದಾರೆ ರೋಹಿತ್ ಶರ್ಮಾ
ಪತಿಗೆ ಬೇರೊಂದು ಮದ್ವೆಯಾಗಲು ನಟಿ ಹಿನಾ ಖಾನ್​ ಒತ್ತಾಯ: 'Amruthadhaare Serial' ರಿಯಲ್​ ಸ್ಟೋರಿ