75 ವರ್ಷದ ಮಾಜಿ ಸೈನಿಕನಿಗೆ ಸೀರಿಯಲ್‌ ನಟಿಯಿಂದ ಹನಿಟ್ರ್ಯಾಪ್‌, 11 ಲಕ್ಷ ವಂಚನೆ!

Published : Jul 27, 2023, 05:35 PM IST
75 ವರ್ಷದ ಮಾಜಿ ಸೈನಿಕನಿಗೆ ಸೀರಿಯಲ್‌ ನಟಿಯಿಂದ ಹನಿಟ್ರ್ಯಾಪ್‌, 11 ಲಕ್ಷ ವಂಚನೆ!

ಸಾರಾಂಶ

ಮನೆ ಬಾಡಿಗೆ ಕೇಳುವ ನೆಪದಲ್ಲಿ 75 ವರ್ಷದ ಮಾಜಿ ಸೈನಿಕನಿಗೆ ಹನಿಟ್ರ್ಯಾಪ್‌ ಮಾಡಿದ ಘಟನೆಯಲ್ಲಿ ಪೊಲೀಸರು ಸೀರಿಯಲ್‌ ನಟಿ ಹಾಗೂ ಆಕೆಯ ಸ್ನೇಹಿತನನ್ನು ಗುರುವಾರ ಬಂಧಿಸಿದ್ದಾರೆ. 11 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪ ಹೊರಿಸಲಾಗಿದೆ.

ತಿರುವನಂತರಪುರ (ಜು.27): ಮಾಜಿ ಸೈನಿಕ ಹಾಗೂ 75 ವರ್ಷದ ಹಿರಿಯ ವ್ಯಕ್ತಿಗೆ ಹನಿಟ್ರ್ಯಾಪ್‌ ಮಾಡಿದ ಆರೋಪದಲ್ಲಿ ಕೇರಳದ ಸೀರಿಯಲ್‌ ನಟಿ ನಿತ್ಯಾ ಶಶಿ ಹಾಗೂ ಆಕೆಯ ಸ್ನೇಹಿತ ಬಿನುನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಪರಾವೂರ್‌ ಮೂಲದ ವ್ಯಕ್ತಿಗೆ ಹನಿಟ್ರ್ಯಾಪ್‌ ಮಾಡಿ ಅವರಿಂದ 11 ಲಕ್ಷ ರೂಪಾಯಿಯನ್ನು ಪೀಕಿಸುವಲ್ಲಿಯೂ ಇವರಿಬ್ಬರು ಯಶಸ್ವಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪತ್ತನಂತಿಟ್ಟದ ಮಲಯಾಲಪುಳ ನಿವಾಸಿ ಆಗಿರುವ 32 ವರ್ಷದ ನಿತ್ಯಾ ಶಶಿ, ಸೀರಿಯಲ್‌ ನಟಿ ಮಾತ್ರವಲ್ಲ ವಕೀಲೆ ಕೂಡ ಹೌದು. ಇನ್ನು ಬಿನು. ಪರವೂರಿನ ಕಲೈಕೋಡ್‌ ನಿವಾಸಿಯಾಗಿದ್ದಾರೆ. ತಿರುವನಂತಪುರಂನ ಪಟ್ಟೋಮ್‌ನ 75 ವರ್ಷದ ಮಾಜಿ ಸೈನಿಕ, ಕೇರಳ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿಯೂ ಆಗಿರುವ ವ್ಯಕ್ತಿ ಇದರಲ್ಲಿ ಸಂತ್ರಸ್ಥರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಕ್ಕೆ ಸಂಬಂಧಿಸಿದಂತೆ ಘಟನೆಗಳು ಮೇ 24 ರಿಂದ ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಡಿಗೆ ಮನೆಯ ಸಲುವಾಗಿ ನಿತ್ಯಾ ಶಶಿ, ಪ್ರತಿದಿನ 75 ವರ್ಷದ ಮಾಜಿ ಸೈನಿಕನಿಗೆ ಪೋನ್‌ನಲ್ಲಿ ವಿಚಾರಿಸುತ್ತಿದ್ದಳು. ಪ್ರತಿ ದಿನ ನಿತ್ಯಾ ಫೋನ್‌ ಮಾಡುತ್ತಿದ್ದ ಕಾರಣಕ್ಕೆ ಒಂದು ದಿನ ಹಿರಿಯ ವ್ಯಕ್ತಿ, ನೀವೇ ಯಾಕೆ ಒಮ್ಮೆ ಮನೆಗೆ ಬಂದು ಮನೆಯನ್ನು ನೋಡಬಾರದು ಎಂದು ಹೇಳಿದ್ದರು. ಮನೆ ನೋಡುವ ನೆಪದಲ್ಲಿ ಒಂದು ದಿನ ಮನೆಗೆ ಬಂದಿದ್ದ ಆಕೆ, ತನ್ನ ಬಟ್ಟೆ ಬಿಚ್ಚಿದ್ದಲ್ಲದೆ, ನನ್ನ ಬಟ್ಟೆಯನ್ನು ಬಿಚ್ಚಿಸಿದ್ದಳು. ಈ ವೇಳೆ ಆಕೆಯ ಸ್ನೇಹಿತ ಬಿನು ಫೋಟೋ ತೆಗೆದುಕೊಂಡಿದ್ದಾನೆ ಎಂದು ದೂರದಾರರಾಗಿರುವ ವ್ಯಕ್ತಿ ಆರೋಪಿಸಿದ್ದಾರೆ.

ಕೆಲ ದಿನಗಳ ಬಳಿಕ ಆಕೆಯೊಂದಿಗಿರುವ ನನ್ನ ನಗ್ನ ಚಿತ್ರ ಹಿಡಿದುಕೊಂಡು ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದರು. 25 ಲಕ್ಷ ರೂಪಾಯಿ ಕೊಡಬೇಕು ಇಲ್ಲದೇ ಇದ್ದಲ್ಲಿ ಈ ಚಿತ್ರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದರು. ಪ್ರತಿ ದಿನ ಬ್ಲ್ಯಾಕ್‌ಮೇಲ್‌ ಕರೆ ಮಾಡುತ್ತಿದ್ದರಿಂದ ಇವರಿಗೆ 11 ಲಕ್ಷ ರೂಪಾಯಿ ನೀಡಿದ್ದೇ ಎಂದು ದೂರುದಾರ ಹೇಳಿದ್ದಾರೆ.

ಹುಡುಗ್ರು ಸೊಂಟದ ಮೇಲೆ ಕೈಯಿಟ್ಟರೆ ಕಂಪ್ಲೇಟ್‌ ಕೊಡಬೇಡಿ, ಎಂಜಾಯ್‌ ಮಾಡಿ: ನಟಿ ರೇಖಾ ನಾಯರ್‌ ಮಾತು!

ಇತ್ತೀಚೆಗೆ ಅವರು ಮತ್ತೆ ಹಣ ಕೇಳಿದ್ದರು. ಇದರ ಬೆನ್ನಲ್ಲಿಯೇ ಜುಲೈ 18 ರಂದು ಪರವೂರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿತ್ಯಾ ಶಶಿ ಹಾಗೂ ಆಕೆಯ ಸ್ನೇಹಿತ ಬಿನುನನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್‌ಗ ಹಾಜರುಪಡಿಸಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದೇ ರೀತಿಯಲ್ಲಿ ಬೇರೆ ಯಾರಿಗಾದರೂ ಹನಿಟ್ರ್ಯಾಪ್‌ ಮಾಡಿದ್ದಾರೆಯೇ ಎನ್ನುವುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

'ಸೊಂಟದ ವಿಷ್ಯ' ಮಾತಿಗೆ ಫುಲ್‌ ಟ್ರೋಲ್‌, ಕವಿತೆ ಬರೆದು ಸೈಲೆಂಟ್‌ ಮಾಡಿದ ಬಿಗ್‌ ಬಾಸ್‌ ಸ್ಪರ್ಧಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!