KBC-15: ಇದು ಏಳು ಕೋಟಿ ಗೆಲ್ಲಬಹುದಾಗಿದ್ದ ಪ್ರಶ್ನೆ: ನಿಮಗೇನಾದರೂ ಉತ್ತರ ಗೊತ್ತಾ?

Published : Sep 06, 2023, 11:44 AM ISTUpdated : Sep 07, 2023, 05:08 PM IST
KBC-15: ಇದು ಏಳು ಕೋಟಿ ಗೆಲ್ಲಬಹುದಾಗಿದ್ದ ಪ್ರಶ್ನೆ: ನಿಮಗೇನಾದರೂ ಉತ್ತರ ಗೊತ್ತಾ?

ಸಾರಾಂಶ

ಕೌನ್​ ಬನೇಗಾ ಕರೋರ್​ಪತಿಯಲ್ಲಿ ಯುವಕ ಜಸ್ಕರನ್​ ಸಿಂಗ್​ ಏಳು ಕೋಟಿ ರೂಪಾಯಿ ಪಡೆಯಬಹುದಾದ ಪ್ರಶ್ನೆಗೆ ಉತ್ತರಿಸದೇ ಷೋ ಬಿಟ್ಟರು. ಅದರ ಉತ್ತರ ನಿಮಗೇನಾದರೂ ಗೊತ್ತಾ?  

ಅಮಿತಾಭ್​ ಬಚ್ಚನ್​ ಅವರ ಅವರ ಜನಪ್ರಿಯ ಕಾರ್ಯಕ್ರಮ  ‘ಕೌನ್ ಬನೇಗಾ ಕರೋಡ್​ಪತಿ’ (Kaun Banega Crorepati) ಮತ್ತೊಮ್ಮೆ ತೆರೆ ಮೇಲೆ ಬಂದಿದೆ.  ಕಳೆದ ಒಂದೂವರೆ ದಶಕಗಳಿಂದ ಈ ಷೋ ನಡೆಸಿಕೊಡುತ್ತಿದ್ದಾರೆ ಅಮಿತಾಭ್​. 14 ಕಂತುಗಳನ್ನು ಪೂರೈಸಿರುವ ಈ ಷೋ, ಇದೀಗ 15ನೇ ಕಂತಿಗೆ ಪದಾರ್ಪಣೆ ಮಾಡಿದೆ. ಸಹಸ್ರಾರು ಮಂದಿ ಕೋಟ್ಯಧಿಪತಿಯಾಗುವ ಕನಸು ಹೊತ್ತು ಈ ಷೋನಲ್ಲಿ ಸ್ಪರ್ಧಿಸಿದ್ದಾರೆ. ಆರಂಭದಲ್ಲಿ ಒಂದು ಕೋಟಿ ಗೆಲ್ಲುವ ಅವಕಾಶವಿತ್ತು. ಅದನ್ನೀಗ ಏಳು ಕೋಟಿಗೆ ಏರಿಸಲಾಗಿದೆ. ಪ್ರತಿ ಹಂತದಲ್ಲಿಯೂ ಕುತೂಹಲ ತಣಿಸುವ ಈ ಕಾರ್ಯಕ್ರಮದಲ್ಲಿ ಇದೀಗ 21 ವರ್ಷದ ಯುವಕನೊಬ್ಬ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದರು. ಪಂಜಾಬ್ ಮೂಲದ 21 ವರ್ಷದ ಜಸ್ಕರನ್ ಸಿಂಗ್ (Jaskaran Singh)  ಏಳು ಕೋಟಿ ರೂಪಾಯಿ ಗೆಲ್ಲಲು ಒಂದೇ ಒಂದು ಪ್ರಶ್ನೆ ಬಾಕಿ ಇತ್ತು. 

₹1 ಕೋಟಿಯ ಪ್ರಶ್ನೆಗೆ ಉತ್ತರಿಸುವ ಮೂಲಕ ಜಸ್ಕರನ್ ಋತುವಿನ ಮೊದಲ ಕೋಟ್ಯಧಿಪತಿಯಾದರು. ಪ್ರಶ್ನೆ ಹೀಗಿತ್ತು: ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಿದಾಗ ಭಾರತದ ವೈಸರಾಯ್ ಯಾರು? A. ಲಾರ್ಡ್ ಕರ್ಜನ್, B. ಲಾರ್ಡ್ ಹಾರ್ಡಿಂಜ್, C. ಲಾರ್ಡ್ ಮಿಂಟೋ, D. ಲಾರ್ಡ್.  ಡಬಲ್ ಡಿಪ್ ಲೈಫ್‌ಲೈನ್ ಬಳಸಿ  ಜಸ್ಕರನ್ ಅಂತಿಮವಾಗಿ ಬಿ ಆಯ್ಕೆಯನ್ನು ಆರಿಸಿಕೊಂಡು  ₹ 1 ಕೋಟಿ ಬಹುಮಾನವನ್ನು ಗೆದ್ದಿದ್ದರು. ನಂತರ  7 ಕೋಟಿ ರೂಪಾಯಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಇದನ್ನು ಗೆಲ್ಲುತ್ತಾರೋ ಇಲ್ಲವೋ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು.  15 ಪ್ರಶ್ನೆಯನ್ನು ಗೆದ್ದು ಒಂದು ಕೋಟಿ ರೂಪಾಯಿ ಪಡೆದಿದ್ದ ಜಸ್ಕರನ್​ ಅವರು ಏಳು ಕೋಟಿ ಗಳಿಸಲು ಒಂದೇ ಒಂದು ಪ್ರಶ್ನೆ ಬಾಕಿ ಇತ್ತು. ಆ ಪ್ರಶ್ನೆಯನ್ನು ಅಮಿತಾಭ್​ ಬಚ್ಚನ್​ ಕೇಳಿದರು. ಆದರೆ ಜಸ್ಕರನ್​ ಅವರಿಗೆ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗದೇ ಅವರು ಷೋ ತ್ಯಜಿಸಲು ನಿರ್ಧರಿಸಿದರು.

ನಿಮ್ಮ ಮನೆ ಮಗಳ 'ಕ್ಯಾಡ್ಬರಿಸ್'​ ಇದು- ಸಪೋರ್ಟ್​ ಮಾಡಿ ಎನ್ನುತ್ತಲೇ ಬಿಗ್​ ಅಪ್​ಡೇಟ್​ ನೀಡಿದ ಸೋನು ಗೌಡ

ಅಷ್ಟಕ್ಕೂ ಆ ಪ್ರಶ್ನೆ ಏನು ಎನ್ನುವುದು ಗೊತ್ತಾ? ಒಂದು ಕೋಟಿ ರೂಪಾಯಿ ಗೆದ್ದ ಜಸ್ಕರನ್​ ಅವರು ಏಳು ಕೋಟಿ ರೂಪಾಯಿಗೆ ಉತ್ತರಿಸಲು ಆಗದೇ ವಾಪಸಾದ ಆ ಪ್ರಶ್ನೆಯೆಂದರೆ, ಪದ್ಮ ಪುರಾಣದ ಪ್ರಕಾರ, ಜಿಂಕೆಯ ಶಾಪದಿಂದ ನೂರು ವರ್ಷಗಳ ಕಾಲ ಯಾವ ರಾಜ ಹುಲಿಯಾಗಿ ಬದುಕಬೇಕಾಯಿತು? ಆಯ್ಕೆಗಳೆಂದರೆ: ಎ) ಕ್ಷೇಮಧೂರ್ತಿ ಬಿ) ಧರ್ಮದತ್ತ ಸಿ) ಮಿತಧ್ವಜ ಡಿ) ಪ್ರಭಂಜನ.

ಜಸ್ಕರನ್ ಈಗಾಗಲೇ ₹1 ಕೋಟಿಯ ಪ್ರಶ್ನೆಗೆ ಯಶಸ್ವಿಯಾಗಿ ಉತ್ತರಿಸುವ ಮೂಲಕ ಋತುವಿನ ಮೊದಲ ಕೋಟ್ಯಧಿಪತಿಯಾಗಿದ್ದಾರೆ. ಅವರು ಹೊಸ ಪ್ರಶ್ನೆಯ ಬಗ್ಗೆ ಖಚಿತವಾಗಿರದ ಕಾರಣ, ಅವರು ₹ 1 ಕೋಟಿ ಬಹುಮಾನದ ಮೊತ್ತದೊಂದಿಗೆ ತ್ಯಜಿಸಲು ನಿರ್ಧರಿಸಿದರು. ಈ ಮೇಲಿನ ಪ್ರಶ್ನೆಗೆ ಅವರು ಉತ್ತರಿಸಲು ಸಾಧ್ಯವಾಗಲಿಲ್ಲ. ಹಾಗಿದ್ದರೆ ಇದಕ್ಕೆ ಸರಿಯಾದ ಉತ್ತರ ಏನು ಗೊತ್ತಾ? ಉತ್ತರ: (ಡಿ) ಪ್ರಭಂಜನ.

ಅಂದಹಾಗೆ,  ಜಸ್ಕರನ್ ಅವರು, ಪಂಜಾಬ್‌ನ ಖಲ್ರಾ ಗ್ರಾಮದ ಕೆಲವೇ ಕೆಲವು ಪದವೀಧರರಲ್ಲಿ ಒಬ್ಬರು.  ಅವರು ಪ್ರಸ್ತುತ ಮುಂದಿನ ವರ್ಷ UPSC ಪ್ರವೇಶ ಪರೀಕ್ಷೆಗೆ ತಮ್ಮ ಮೊದಲ ಪ್ರಯತ್ನಕ್ಕೆ ತಯಾರಿ ನಡೆಸುತ್ತಿದ್ದಾರೆ. ಕಾರ್ಯಕ್ರಮದ ಆಡಿಷನ್‌ಗಾಗಿ ಮುಂಬೈಗೆ ಬಂದಿದ್ದ ಅವರು ತಮ್ಮ ಜೀವನದ  ಮೊದಲ ವಿಮಾನ ಹತ್ತಿದ್ದರು. ವಿಮಾನಕ್ಕಾಗಿ ದುಡ್ಡು ಹೊಂದಿಸುವುದು ಬಹಳ ಕಷ್ಟವಾಗಿತ್ತು.  ಅವರ ತಂದೆ ಕಷ್ಟಪಟ್ಟು  10 ಸಾವಿರ ರೂಪಾಯಿ  ಮೌಲ್ಯದ ವಿಮಾನ ಟಿಕೆಟ್  ವ್ಯವಸ್ಥೆ ಮಾಡಿದ್ದರು. ಅವರ ಸ್ನೇಹಿತರು ಅವರನ್ನು ಸ್ಕೂಟರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದರು. ಬಂದಿರುವ ಒಂದು ಕೋಟಿ ರೂಪಾಯಿ  ಬಹುಮಾನದ ಹಣವನ್ನು ತಮ್ಮ ತಂದೆಗೆ ನೀಡುವುದಾಗಿ ಜಸ್ಕರನ್​ ಹೇಳಿದ್ದಾರೆ.  ಇದು ಅವರ ಜೀವನದ ಮೊದಲ ಸಂಭಾವನೆಯಾಗಿದೆ ಎಂದು ಹೇಳಿದರು.

ಸೀರೆ ತೊಟ್ಟು ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ ಕಾಮಿಡಿ ಕಿಲಾಡಿಗಳು ನಯನಾ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!