'ಶನಿ' ಧಾರಾವಾಹಿಯಲ್ಲಿ ನಟ ಕಾರ್ತಿಕ್ ಇದೀಗ ಮುದ್ದುಲಕ್ಷ್ಮಿ ತಂಡ ಸೇರಿ ಕೊಂಡಿದ್ದಾರೆ. ಹೊಸ ಎಪಿಸೋಡ್ ಪ್ರಸಾರವಾಗುತ್ತಿದೆ.
'ಶನಿ' ಧಾರಾವಾಹಿ ನಂತರ ಲೈಮ್ ಲೈಟ್‌ನಿಂದ ಕೊಂಚ ದೂರ ಉಳಿದಿದ್ದ ನಟ ಕಾರ್ತಿಕ್ ಸಮಾಗ್ ಇದೀಗ 'ಮುದ್ದುಲಕ್ಷ್ಮಿ' ಧಾರಾವಾಹಿ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಚರಿತ್ ಬಾಳಪ್ಪ ಹೊರ ಬಂದ ನಂತರ ಡಾಕ್ಟರ್ ಪಾತ್ರಕ್ಕೆ ಕಾರ್ತಿಕ್ ಆಯ್ಕೆ ಆಗಿದ್ದಾರೆ.
ಕೊರೋನಾ ಲಾಕ್‌ಡೌನ್‌ನಿಂದ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಅನುಮತಿ ಪಡೆದ ಧಾರಾವಾಹಿಗಳು ಹೈದಾರಾಬಾದ್‌ನಲ್ಲಿ ಚಿತ್ರೀಕರಣ ಮಾಡಲು ಆರಂಭಿಸಿದ್ದವು. ಈ ವೇಳೆ ಮುದ್ದುಲಕ್ಷ್ಮಿ ತಂಡ ಸೇರಿದ ಕಾರ್ತಿಕ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕೆಲವು ಎಪಿಸೋಡ್‌ಗಳ ಚಿತ್ರೀಕರಣವೂ ಬ್ಯಾಕ್‌ಅಪ್ ಮಾಡಿಕೊಳ್ಳಲಾಗಿದೆ.
'ಅರಗಿಣಿ', 'ಅಕ್ಕ' ಮತ್ತು 'ಶನಿ' ಧಾರಾವಾಹಿಯಲ್ಲಿ ಕಾರ್ತಿಕ್ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೇ ಮೊದಲು ಧಾರಾವಾಹಿಯೊಂದರ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳತ್ತಿರುವುದು. ಮುದ್ದುಲಕ್ಷ್ಮಿ ಧಾರಾವಾಹಿಯ ಕಥೆಯಲ್ಲಿ ಕೊಂಚ ಬದಲಾವಣೆಗಳನ್ನು ಕಾಣಬಹುದು. ಇದು ಜನರಿಗೆ ಎಕ್ಸಟ್ರಾ ಮಸಾಲಾ ಹಾಗೂ ಎಂಜಾಯ್‌ಮೆಂಟ್ ಕೊಡುವುದರಲ್ಲಿ ಅನುಮಾನವಿಲ್ಲ.