ಮಾಡೆಲ್ ಕಮ್ ಡ್ಯಾನ್ಸರ್ ಕಿಶನ್ ಬಿಲಾಗಲಿ ಇದೀಗ ರೈತನಾಗಲು ಹೊರಟಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ಸ್ ಹೇಗಿದೆ ನೋಡಿ....
ಬಿಗ್‌ಬಾಸ್ ಸ್ಪರ್ಧಿ ಕಿಶನ್ ಇದೀಗ ತಮ್ಮ ಹುಟ್ಟೂರು ಚಿಕ್ಕಮಗಳೂರಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಹಳ್ಳಿಯ ಸೊಬಗು ಹೇಗಿದೆ ಎಂದು ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಅಭಿಮಾನಿಗಳಿಗೆ ತೋರಿಸುತ್ತಿದ್ದಾರೆ. ಸಿಟಿಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಫಾಲೋ ಮಾಡುತ್ತಿರುವ ನೆಟ್ಟಿಗರು ಕಿಶನ್ ಎಂಜಾಯ್ ಮಾಡುತ್ತಿರುವುದನ್ನು ನೋಡಿ ತಮ್ಮ ಊರುಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
'ನನ್ನ ಜೀವನ ಪೂರ್ತಿ ಈ ಕೆಲಸ ಮಾಡಿದ್ದೀನಿ ಅಥವಾ ಮಾಡುತ್ತೀನಿ ಅಂತಲ್ಲ. ಇನ್‌ಸ್ಟಾಗ್ರಾಂ ರೀಲ್ ಮಾಡಲೆಂದೇ ನಾನು ಕೃಷಿ ಕೆಲಸ ಮಾಡುತ್ತಿಲ್ಲ. ಇದೆಲ್ಲಾ ನೀನು ಕಲಿಯಬೇಕು ಎಂದು ಅಪ್ಪ ಹೇಳಿದ್ದಕ್ಕೆ ಪ್ರಯತ್ನ ಮಾಡೋಣ ಎಂದು ಮುಂದಾದೆ. ಕೆಲವರು ಜೀವನ ಪೂರ್ತಿ ಈ ಕೆಲಸ ಮಾಡುತ್ತಾರೆ. ವರ್ಷವಿಡಿ ಶ್ರಮ ಪಟ್ಟು ದುಡಿಯುವ ರೈತನ ಬಗ್ಗೆ ನನ್ನ ಗೌರವ ಹೆಚ್ಚಾಗಿದೆ. ಇದರಿಂದ ಕಡಿಮೆ ಹಣ ಬರುತ್ತದೆ ಎಂದು ತಿಳಿದೂ ಎಲ್ಲಾ ರೀತಿಯ ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ನಾವೇ ಸಿಟಿ ಜೀವನದಲ್ಲಿ ಕಡಿಮೆ ಸಂಬಳ, ಜಾಸ್ತಿ ಸಂಬಳ ಅಂತ ಬೇಸರ ಮಾಡಿಕೊಂಡು ಕೂರುವುದು. ನಾನು ಮನಸ್ಸಿಟ್ಟು ಸಂತೋಷದಿಂದ ಕೆಲಸ ಮಾಡುತ್ತಿರುವೆ. ಮುಂದೊಂದು ದಿನ ಇದೇ ನನ್ನ ಜೀವನದ ಕೆಲಸ ಆಗಬಹುದು,' ಎಂದು ಕಿಶನ್ ಬರೆದುಕೊಂಡಿದ್ದಾರೆ.
ಬಿರಿಯಾನಿ ವ್ಯಾಪಾರ ಮಾಡಿದ್ರೆ ಸಾಕಾ, ಅಡುಗೆ ಮಾಡೋದು ಬೇಡ್ವಾ?; ಕಿಶನ್ ವಿಡಿಯೋ ವೈರಲ್
ಕಿಶನ್ ಮನೆಯಲ್ಲಿ ಮೂರ್ನಾಲ್ಕು ನಾಯಿಗಳನ್ನು ಸಾಕಿದ್ದಾರೆ. ಅವುಗಳ ಜೊತೆ ಮಾಡುವ ವಿಡಿಯೋ ಕೂಡ ವೈರಲ್ ಆಗುತ್ತದೆ. ಕೇವಲ 30 ಸೆಕೆಂಡ್ ವಿಡಿಯೋದಲ್ಲಿ ಚಿಕ್ಕಮಗಳೂರಿನ ಶೈಲಿಯ ರೆಸಿಪಿಗಳನ್ನು ತೋರಿಸಿಕೊಡುತ್ತಾರೆ. ಸದ್ಯ ಕಿಶನ್ ವಿಸ್ಮಯಾ ಗೌಡ ನಿರ್ಮಾಣ ಮಾಡುತ್ತಿರುವ 'ಡಿಯರ್ ಕಣ್ಮಣಿ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.