
Karimani Serial Update: 'ಕರಿಮಣಿ' ಧಾರಾವಾಹಿಯಲ್ಲಿ ಬ್ಲ್ಯಾಕ್ ರೋಸ್ ಅರುಂಧತಿ ಎನ್ನೋದು ಕರ್ಣನಿಗೆ ಬಿಟ್ಟು ಉಳಿದವರೆಲ್ಲರಿಗೂ ಗೊತ್ತಾಗಿದೆ. ಇದನ್ನೆಲ್ಲ ನೋಡಿದಾಗ ಧಾರಾವಾಹಿ ಅಂತ್ಯ ಆಗಲಿದೆಯಾ ಎಂಬ ಡೌಟ್ ಬರುವುದು. ಹೌದು, 'ಕರಿಮಣಿ' ಧಾರಾವಾಹಿ ಅಂತ್ಯ ಆಗ್ತಿದೆ.
ಅಂತಿಮ ಸಂಚಿಕೆಗಳು ಪ್ರಸಾರ!
ಕಲರ್ಸ್ ಕನ್ನಡ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ 'ಕರಿಮಣಿ' ಧಾರಾವಾಹಿ ಕ್ಲೈಮ್ಯಾಕ್ಸ್ ಸಂಚಿಕೆಗಳು ಸಂಜೆ ಆರು ಗಂಟೆಗೆ ಪ್ರಸಾರ ಆಗಲಿದೆ ಎಂದು ಹೇಳಿಕೊಂಡಿದೆ. ಈ ಧಾರಾವಾಹಿ ಮುಕ್ತಾಯ ಆಗುತ್ತಿದ್ದಂತೆ ʼಪ್ರೇಮ ಕಾವ್ಯʼ ಧಾರಾವಾಹಿ ಆರಂಭ ಆಗಬಹುದು.
ಅನುರಾಧಾ ಬದುಕಿರೋದು ಗೊತ್ತಾಯ್ತು!
ಈ ಧಾರಾವಾಹಿಯಲ್ಲಿ ರಾಜೇಂದ್ರ ಪ್ರಸಾದ್ ಹಾಗೂ ಅನುರಾಧಾ ದಂಪತಿಗೆ ಕರ್ಣ ಎಂಬ ಮಗನಿದ್ದಾರೆ. ಆದರೆ ಡ್ಯಾನ್ಸರ್ ಅರುಂಧತಿ ರಾಜೇಂದ್ರನನ್ನು ಪ್ರೀತಿ ಮದುವೆ ಆಗುತ್ತಾಳೆ, ಮೋಸದಿಂದ ಅವಳು ಅನುರಾಧಾಳನ್ನು ಆ ಮನೆಯಿಂದ ಹೊರಗಡೆ ಹಾಕುತ್ತಾಳೆ, ಅವಳು ಸತ್ತು ಹೋದಳು ಎನ್ನೋ ರೀತಿ ಬಿಂಬಿಸಿರುತ್ತಾಳೆ, ಅನು ಹೆತ್ತ ಮಗ ಕರ್ಣನಿಗೂ ಅವಳನ್ನು ಕಂಡರೆ ಆಗೋದಿಲ್ಲ ಎನ್ನೋ ರೀತಿ ಮಾಡಿರುತ್ತಾಳೆ. ಅರುಂಧತಿಯ ಒಳ್ಳೆಯ ತನ ನೋಡಿದವರಿಗೆ ಅವಳೊಬ್ಬಳು ದುಷ್ಟೆ ಎನ್ನೋದು ಗೊತ್ತಿರೋದಿಲ್ಲ. ತಾನು ಕುಟುಂಬದಿಂದ ದೂರ ಇದ್ರೂ ಓಕೆ, ತನ್ನ ಮಗನಿಗೆ ಏನೂ ಆಗಬಾರದು ಅಂತ ಅನು ಎಲ್ಲರಿಂದ ದೂರ ಇರುತ್ತಾಳೆ, ಈ ವಿಷಯ ಕರ್ಣನ ಪತ್ನಿ ಸಾಹಿತ್ಯಾಗೆ ಗೊತ್ತಾಗುವುದು. ಸಾಹಿತ್ಯಾಳಿಂದ ಅನು ತನ್ನ ಗಂಡನ ಮನೆಗೆ ಬಂದಿದ್ದಳು. ಇದರಿಂದ ರಾಜೇಂದ್ರ ಪ್ರಸಾದ್‌ಗೂ ಕೂಡ ಅನು ಬದುಕಿರೋದು ಗೊತ್ತಾಗಿದೆ. ಇಷ್ಟುದಿನ ತಾನು ಪ್ರೀತಿಸುತ್ತಿದ್ದ ರಾಧಾ ಮೇಡಂ ನನ್ನ ತಾಯಿ ಎನ್ನೋದು ಕರ್ಣನಿಗೆ ಗೊತ್ತಾದರೂ ಕೂಡ ಅವನು ಅವಳನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ.
ಅರುಂಧತಿ ಮುಖವಾಡ ಕಳಚಿಬಿತ್ತು!
ಅರುಂಧತಿ ಯಾರು? ಅವಳ ಅಸಲಿ ಕಥೆ ಏನು ಎನ್ನುವ ಸತ್ಯ ಎಲ್ಲರಿಗೂ ಗೊತ್ತಾಗಿದೆ. ತನ್ನ ಮನೆಯವರಿಗೆ ತೊಂದರೆ ಕೊಡ್ತಿದ್ದ ಬ್ಲ್ಯಾಕ್ ರೋಸ್‌ಗೆ ಪ್ರಸನ್ನ ಮಾವನೇ ಸಹಾಯ ಮಾಡ್ತಿದ್ದ ಅಂತ ಮಾತ್ರ ಕರ್ಣನಿಗೆ ಗೊತ್ತಿತ್ತು. ಈಗ ಪ್ರಸನ್ನನ ಅಕ್ಕ ಅರುಂಧತಿ ಎನ್ನೋದು ರಾಜೇಂದ್ರ ಪ್ರಸಾದ್‌ಗೆ ಗೊತ್ತಾಗಿದೆ. ಈ ವಿಷಯವನ್ನು ಅವನು ಮಗನಿಗೆ ಹೇಳ್ತಾನೆ ಅಂತ ಅರುಂಧತಿ ತನ್ನ ಗಂಡನನ್ನೇ ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ಪ್ರೀತಿಸಿದ ಗಂಡನನ್ನು ಕೊಲ್ಲೋ ಅರುಂಧತಿ ಎಂಥ ಹೆಣ್ಣೋ ಏನೋ! ತನ್ನ ತಾಯಿ ಅಪ್ಪನಿಗೆ ಗುಂಡೇಟು ಹಾರಿಸಿದ್ದನ್ನು ಭರತ್ ನೋಡಿದ್ದಾನೆ. ಇದನ್ನು ಅವನು ಕರ್ಣನಿಗೆ ಹೇಳಿದ್ದಾನೆ. ಅರುಂಧತಿಯನ್ನು ಸ್ವಂತ ತಾಯಿಗಿಂತ ಹೆಚ್ಚಾಗಿ ಕಾಣೋ ಕರ್ಣ ಈಗ ಅವನ ಮಾತನ್ನು ನಂಬುತ್ತಾನಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಅರುಂಧತಿ ಸತ್ಯ ರಿವೀಲ್ ಆದರೆ ಈ ಧಾರಾವಾಹಿಯ ದೊಡ್ಡ ಕಥೆ ರಿವೀಲ್ ಆದಂತೆ. ಇದರ ಜೊತೆಗೆ ಕರ್ಣನನ್ನು ಸಾಹಿತ್ಯ ಇಷ್ಟಪಡಬೇಕು, ಇವರಿಬ್ಬರು ಒಂದಾಗಬೇಕು. ಇನ್ನು ಎಷ್ಟು ದಿನಗಳ ಕಾಲ ಧಾರಾವಾಹಿ ಪ್ರಸಾರ ಆಗಲಿದೆ ಎಂದು ಕಾದು ನೋಡಬೇಕಿದೆ. ಅಷ್ಟೇ ಅಲ್ಲದೆ ಅರುಂಧತಿ-ಪ್ರಸನ್ನನಿಗೆ ಯಾವ ಶಿಕ್ಷೆ ಆಲಿದೆಯೋ ಏನೋ! ಕಳೆದ ವರ್ಷದಿಂದ ಈ ಧಾರಾವಾಹಿ ಪ್ರಸಾರ ಆರಂಭಿಸಿದ್ದು, ಈಗ ಮುಕ್ತಾಯ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಈ ಸೀರಿಯಲ್ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದೆ.
ಪಾತ್ರಧಾರಿಗಳು
ಕರ್ಣ ಪಾತ್ರದಲ್ಲಿ ಅಶ್ವಿನ್ ಎಚ್, ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ, ಅರುಂಧತಿ ಪಾತ್ರದಲ್ಲಿ ಅನುಷಾ ಹೆಗಡೆ, ರಾಜೇಂದ್ರ ಪ್ರಸಾದ್ ಪಾತ್ರದಲ್ಲಿ ಶ್ರೀಕಾಂತ್ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.