ಬಸ್ ನಂಬರ್ 123... ಖ್ಯಾತ ಕಿರುತೆರೆ ನಟ ಕರಣ್ವೀರ್ ರೋಚಕ ಪ್ರೇಮ್ ಕಹಾನಿ ಇಲ್ಲಿದೆ
ಹಿಂದಿ ಧಾರಾವಾಹಿ 'ಕಸೌಟಿ ಜಿಂದಗಿ ಕೇ', 'ನಾಚ್ ಬಲಿಯೇ 4', 'ಕುಬೂಲ್ ಹೈ', ರಿಯಾಲಿಟಿ ಷೋ 'ಸೌಭಾಗ್ಯವತಿ ಭವ ನಿಯಮ ಔರ್ ಶಾರ್ತೆ ಲಾಗೂ' ಸಕತ್ ಫೇಮಸ್ ಆಗಿವೆ. ಈ ಧಾರಾವಾಹಿಗಳನ್ನು ನೋಡಿದವರಿಗೆ ನಟ ಕರಣ್ವೀರ್ ಬೋಹ್ರಾ ಬಹಳ ಚಿರಪರಿಚಿತರು. ಒಂದರ ಮೇಲೊಂದು ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ ಇವರು. ಇವರು ಇನ್ನಷ್ಟು ಫೇಮಸ್ ಆಗಿದ್ದು ಹಿಂದಿಯ ಬಿಗ್ಬಾಸ್ ಸ್ಪರ್ಧಿಯಾಗಿದ್ದಾಗ. ಬಿಗ್ ಬಾಸ್ 12 ರಲ್ಲಿ ಕಾಣಿಸಿಕೊಂಡಿದ್ದ ಕರಣ್ವೀರ್ ಬೋಹ್ರಾ ಸಾಕಷ್ಟು ಫ್ಯಾಷನಿಸ್ಟ್ ಕೂಡ. ಎಷ್ಟೋ ಮಂದಿ ಇವರನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಹೋಲಿಸುವೂ ಉಂಟು. ಅವರು ಕೆಲವು ವಿಲಕ್ಷಣವಾದ ಉಡುಪುಗಳನ್ನು ಧರಿಸಲು ಹೆಸರುವಾಸಿಯಾಗಿದ್ದಾರೆ. ನಟನೀಗ ತಮ್ಮ ಮೊದಲ ಪ್ರೇಮ ಪ್ರಕರಣವನ್ನು ಬಿಚ್ಚಿಟ್ಟಿದ್ದಾರೆ.
ಹೌದು. ಅವರ ಪ್ರೇಮ ಶುರುವಾಗಿದ್ದು ಮುಂಬೈನಲ್ಲಿ ಆಗ ಚಾಲ್ತಿಯಲ್ಲಿದ್ದ ನಾನ್ ಎಸಿ ಡಬಲ್ ಡೆಕ್ಕರ್ ಬಸ್ಸಿನಲ್ಲಂತೆ. ಆದರೆ ಕಾಲ ಕ್ರಮೇಣ ಈ ಬಸ್ ಸ್ಟಾಪ್ ಆಗಿದ್ದರ ಬಗ್ಗೆ ನಟ ನೋವನ್ನು ವ್ಯಕ್ತಪಡಿಸುತ್ತಾರೆ. ತಮ್ಮ ಪ್ರೇಮ ಪ್ರಕರಣವನ್ನು ನಟ ರಸವತ್ತಾಗಿ ಬಣ್ಣಿಸಿದ್ದಾರೆ. ಮುಂಬೈನ ನಾನ್ -ಎಸಿ ಡಬಲ್ ಡೆಕ್ಕರ್ ಬಸ್‌ಗಳು ದೇಶದ ಆರ್ಥಿಕ ರಾಜಧಾನಿಗೆ ಸಾಮೂಹಿಕ ಸಾರಿಗೆಯ ಮೂಲಾಧಾರವಾಗಿತ್ತು. ಜನಪ್ರಿಯ ಸ್ಥಳೀಯ ರೈಲುಗಳಂತೆಯೇ ಇತ್ತು. ಇವೆರಡೂ ಭಾರತೀಯ ಚಿತ್ರರಂಗದಲ್ಲಿ ಹಲವಾರು ಉಲ್ಲೇಖಗಳನ್ನೂ ಕಂಡುಕೊಂಡಿವೆ, ಅಂದರೆ ಹಲವಾರು ಚಿತ್ರಗಳಲ್ಲಿ ಇದನ್ನು ತೋರಿಸಲಾಗಿದೆ. ಈ ಬಸ್ಸುಗಳು ಮುಂಬೈನ ಸಂಸ್ಕೃತಿಯನ್ನು ಕೂಡ ವ್ಯಾಖ್ಯಾನಿಸುತ್ತವೆ ಎಂದು ನಟ ಹೇಳಿದ್ದಾರೆ.
undefined
ವಿಧವೆಯರಿಗೆ ಅರಿಶಿಣ-ಕುಂಕುಮವೆ? ಸತ್ಯ ಸೀರಿಯಲ್ ಕಲಿಸಿದ ಪಾಠಕ್ಕೆ ಭೇಷ್ ಭೇಷ್ ಎಂದ ಪ್ರೇಕ್ಷಕರು
ನಂತರ ತಮ್ಮ ಪ್ರೇಮದ ಕುರಿತು ಮಾತನಾಡಿರುವ ಕರಣ್‌ವೀರ್ ಬೋಹ್ರಾ, "ಬಸ್ ಸಂಖ್ಯೆ 123 ನನ್ನ ನೆಚ್ಚಿನದು, ನಾನು ನನ್ನ ಸ್ನೇಹಿತ ಹಾಶಿಮ್‌ನೊಂದಿಗೆ ತರಗತಿಗಳಿಗೆ ಪ್ರತಿದಿನ ಕೊಲಾಬಾದಿಂದ ನಾನಾ ಚೌಕ್‌ಗೆ ಪ್ರಯಾಣಿಸುತ್ತಿದ್ದೆ. ನನಗೆ ಆ ಬಸ್‌ನ ಅತ್ಯಂತ ಸುಂದರವಾದ ನೆನಪುಗಳಿವೆ. ಅದೇ ಬಸ್ಸಿನಲ್ಲಿ ನಾನು ನನ್ನ ಮೊದಲ ಗೆಳತಿಯನ್ನು ಭೇಟಿಯಾದೆ ಎಂದಿದ್ದಾರೆ. ಪ್ರತಿ ದಿನವೂ ಈ ಬಸ್ಸಿನಲ್ಲಿ ಸಂಚರಿಸುವಾಗಲೇ ಆಕೆ ಕೂಡ ಪರಿಚಯವಾದವಳು. ದಿನಂ ಪ್ರತಿಯ ಈ ಭೇಟಿ ನಂತರ ನಮ್ಮಿಬ್ಬರನ್ನು ಒಂದು ಮಾಡಿತು, ತುಂಬಾ ಕ್ಲೋಸ್ ಆದೆವು, ನಮ್ಮ ನಡುವೆ ಸ್ನೇಹಕ್ಕಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪ್ರೇಮ ಮೂಡಿತು ಎಂದಿದ್ದಾರೆ ನಟ. ಆದರೆ ಆ ಗೆಳತಿ ಯಾರು, ನಂತರ ಏನಾಯಿತು ಎಂಬ ಬಗ್ಗೆ ಅವರು ವಿವರಣೆ ನೀಡಲಿಲ್ಲ.
ಹಳೆಯ ಡಬಲ್ ಡೆಕ್ಕರ್ ಬಸ್‌ಗಳ ಕುರಿತು ಹೇಳಿಕೊಂಡಿರುವ ನಟ, BEST (ಬೃಹನ್ಮುಂಬಯಿ ವಿದ್ಯುತ್ ಸರಬರಾಜು ಮತ್ತು ಸಾರಿಗೆ) ನಿಂದ ನಿರ್ವಹಿಸಲ್ಪಡುವ ಹಳೆಯ ಬಸ್ ಸೇವೆಯು ನಗರ ಮತ್ತು ಅದರ ನಿವಾಸಿಗಳಿಗೆ ವಿಶಿಷ್ಟವಾಗಿದೆ. ಬಸ್ ವ್ಯವಸ್ಥೆಯು ಬ್ರಿಟಿಷ್ ಯುಗದ ಹಿಂದಿನದು ಮತ್ತು 80 ವರ್ಷಗಳಿಗೂ ಹೆಚ್ಚು ಕಾಲ ಮುಂಬೈನ ಅವಿಭಾಜ್ಯ ಅಂಗವಾಗಿ ನಗರದ ಸಾರಿಗೆಯ ಐಕಾನ್ ಆಗಿ ಮಾರ್ಪಟ್ಟಿದೆ. ಹಳೆಯ ಡಬಲ್ ಡೆಕ್ಕರ್ ಬಸ್‌ಗಳು ಕಾಲಾನಂತರದಲ್ಲಿ ಹಲವಾರು ನವೀಕರಣಗಳು ಮತ್ತು ಆಧುನೀಕರಣಕ್ಕೆ ಒಳಗಾಯಿತು, ಆದಾಗ್ಯೂ ಅವುಗಳ ಹೆಚ್ಚಿನ ನಿರ್ವಹಣಾ ವೆಚ್ಚಗಳು, ಅವುಗಳ ಹಳತಾದ ತಂತ್ರಜ್ಞಾನ ಮತ್ತು ಹೆಚ್ಚಿನ ಇಂಧನ ಬಳಕೆಯು ಅವುಗಳನ್ನು ಆರ್ಥಿಕವಾಗಿಸಲು ಪ್ರಾರಂಭಿಸಿದವು ಮತ್ತು ಅಂತಿಮವಾಗಿ ಬಸ್ ಸೇವೆಯನ್ನು ನಿಲ್ಲಿಸಲಾಯಿತು ಎಂದಿದ್ದಾರೆ.
ಅಬ್ಬಾ! ಈ ಪಾಪ್ ಡ್ಯಾನ್ಸರ್ ನಿಜವಾಗ್ಲೂ ಹಿಟ್ಲರ್ ಕಲ್ಯಾಣದ ಅಂತರನಾ ಎಂದು ಪ್ರಶ್ನಿಸ್ತಿದ್ದಾರೆ ಫ್ಯಾನ್ಸ್